For Quick Alerts
ALLOW NOTIFICATIONS  
For Daily Alerts
 

ವಿಜಯ್‌ ಹಜಾರೆ: ಒಂದೇ ದಿನ ದಾಖಲಾದ 22 ಶತಕ: ದಾಖಲೆ

ಭಾರತದಲ್ಲಿ ಈಗ ದೇಶೀಯ ಟೂರ್ನಿಗಳ ಅಬ್ಬರ ನಡೆಯುತ್ತಿದೆ. ಈ ವೇಳೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಕಣಕ್ಕೆ ಇಳಿಯುತ್ತಿದ್ದಾರೆ. ಬುಧವಾರದಿಂದ ವಿಜಜ್‌ ಹಜಾರೆ ಟ್ರೋಫಿಯ ಪಂದ್ಯಗಳು ಆರಂಭವಾಗಿವೆ. ಮೊದಲ ದಿನ ಬ್ಯಾಟರ್‌ಗಳು ಅಬ್ಬರ ನಡೆಸಿದ್ದಾರೆ. ಸದ್ಯ ಕ್ರಿಕೆಟ್‌ ಅಭಿಮಾನಿಗಳ ಕಣ್ಣು ಈ ಸರಣಿಯ ಮೇಲೆ ನೆಟ್ಟಿದೆ.

ಭಾರತ ತಂಡದ ಸ್ಟಾರ್ ಆಟಗಾರರಾ ವಿರಾಟ್ ಕೊಹ್ಲಿ, ರೋಹಿತ್‌ ಶರ್ಮಾ, ರಿಷಭ್‌ ಪಂತ್‌ ಹಾಗೂ ಇಶಾನ್‌ ಕಿಶನ್‌ ಅವರು ಕಣಕ್ಕೆ ಇಳಿದಿದ್ದು, ಕುತೂಹಲ ಮೂಡಿಸಿದೆ. ಮೊದಲ ದಿನ ಸಂಪೂರ್ಣವಾಗಿ ಬ್ಯಾಟರ್‌ಗಳು ಮೆರೆದಾಟ ನಡೆಸಿದ್ದಾರೆ. ಒಂದೇ ದಿನ ಬ್ಯಾಟರ್‌ಗಳು ಮೆರೆದಾಟ ನಡೆಸಿದ್ದು, ಇತಿಹಾಸದ ಪುಟಕ್ಕೆ ಕೆಲಸವನ್ನು ನೀಡಿದ್ದಾರೆ. ಟೂರ್ನಿಯ ಮೊದಲ ದಿನ ಒಟ್ಟು 22 ಶತಕಗಳು ದಾಖಲಾಗಿವೆ. ಈ ಮೂಲಕ ಈ ಅಂಕಿ ಅಂಶಗಳು ಸಹ ದಾಖಲೆ ಬರೆದಿವೆ.

Vijay Hazare Trophy 22 Centuries in One Day as Kohli Rohit and Surya-Vanshi Smash Records

ವಿಜಯ್‌ ಹಜಾರೆ ಟೂರ್ನಿಯ ಮೊದಲ ದಿನ ಒಟ್ಟು 22 ಶತಕಗಳು ದಾಖಲಾಗಿವೆ. ಇದು ವಿಜಯ್‌ ಹಜಾರೆ ಟ್ರೋಫಿಯಲ್ಲಿ ದಾಖಲಾದ ಅತಿ ಹೆಚ್ಚು ಸಂಖ್ಯೆಗಳ ದಾಖಲೆ ಅಳಿಸಿ ಹಾಕಿದೆ. ಇದಕ್ಕೂ ಮೊದಲು ವಿಜಯ್‌ ಹಜಾರೆ ಟ್ರೋಫಿಯಲ್ಲಿ ಒಂದೇ ದಿನ 19 ಶತಕಗಳು ದಾಖಲಾಗಿದ್ದು ದೊಡ್ಡ ಸಾಧನೆ ಆಗಿತ್ತು. ಈ ದಾಖಲೆಯನ್ನು ಬುಧವಾರ (ಡಿ.24) ದಾಖಲಾದ ಶತಕಗಳು ಮೀರಿ ನಿಂತಿವೆ.

ಮೊದಲ ದಿನದ ಪಂದ್ಯದಲ್ಲಿ ಬರೀ ಶತಕಗಳು ಅಷ್ಟೇ ಅಲ್ಲ ಸಿಡಿಲಬ್ಬರದ ಬ್ಯಾಟಿಂಗ್ ಕಂಡು ಬಂದಿತು. 14 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ 36 ಎಸೆತಗಳಲ್ಲಿ ಶತಕ ಬಾರಿಸಿದರೆ, ಇಶಾನ್ ಕಿಶನ್‌ 33 ಎಸೆತ, ಬಿಹಾರ ತಂಡದ ನಾಯಕ ಸಕಿಬುಲ್ ಗನಿ 32 ಎಸೆತದಲ್ಲಿ ಶತಕ ಬಾರಿಸಿ ಎಲ್ಲರ ಗಮನ ಸೆಳೆದರು. ಉಳಿದಂತೆ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ದೇವದತ್ ಪಡಿಕ್ಕಲ್, ಧ್ರುವ್ ಶೋರೆ ಸಹ ಮೂರಂಕಿ ಮುಟ್ಟಿ ಸಂಭ್ರಮಿಸಿದರು.

ಸ್ವಸ್ತಿಕ್ ಸಮಲ್ ದ್ವಿಶತಕ

ವಿಜಯ್‌ ಹಜಾರೆ ಟೂರ್ನಿಯ "ಡಿ" ಗುಂಪಿನ ಪಂದ್ಯದಲ್ಲಿ ಓಡಿಶಾ ಹಾಗೂ ಸೌರಾಷ್ಟ್ರ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಓಡಿಶಾ ಮೊದಲು ಬ್ಯಾಟ್ ಮಾಡಿ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 345 ರನ್‌ ಸೇರಿಸಿತು. ಈ ವೇಳೆ ಓಡಿಶಾ ತಂಡದ ಸ್ವಸ್ತಿಕ್ ಸಮಲ್ 169 ಎಸೆತಗಳಲ್ಲಿ8 ಸಿಕ್ಸರ್‌ ಹಾಗೂ 21 ಬೌಂಡರಿ ನೆರವಿನಿಂದ 212 ರನ್ ಬಾರಿಸಿದರು. ಈ ಮೂಲಕ ಇವರು ಟೂರ್ನಿಯಲ್ಲಿ ಇನಿಂಗ್ಸ್‌ ಒಂದರಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಸಂಜು ಸ್ಯಾಮ್ಸನ್‌ ಅವರೊಂದಿಗೆ 5ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಇನ್ನು ಈ ಟೂರ್ನಿಯಲ್ಲಿ ದ್ವಿಶತಕ ಬಾರಿಸಿದ ಎಂಟನೇ ಆಟಗಾರ ಎಂಬ ಹೆಗ್ಗಳಿಕೆ ಇವರದ್ದಾಯಿತು. ಈ ಪಂದ್ಯದಲ್ಲಿ ಸೌರಾಷ್ಟ್ರ ಸವಾಲಿನ ಮೊತ್ತವನ್ನು 48.5 ಓವರ್‌ಗಳಲ್ಲಿ ಮೆಟ್ಟಿನಿಂತಿತು.

Story first published: Thursday, December 25, 2025, 8:00 [IST]
Other articles published on Dec 25, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+