Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕರ್ನಾಟಕದ ಮಡಿಲಿಗೆ ವಿಜಯ್ ಹಜಾರೆ ಟ್ರೋಫಿ

ಅಹಮದಾಬಾದ್, ನ. 26 : ಸಂಘಟಿತ ಹೋರಾಟ ನೀಡಿದ ಕರ್ನಾಟಕ ತಂಡ ದೇಶಿ ಕ್ರಿಕೆಟ್ ದೊರೆಯಾಗಿ ವಿಜೃಂಭಿಸಿದೆ. 156 ರನ್ ಗಳಿಂದ ಪಂಜಾಬ್ ನ್ನು ಬಗ್ಗುಬಡಿದ ವಿನಯ್ ಹುಡುಗರು ಸತತ ಎರಡನೇ ಬಾರಿಗೆ ವಿಜಯ್ ಹಜಾರೆ ಟ್ರೋಫಿ ತಮ್ಮದಾಗಿಸಿಕೊಂಡಿದ್ದಾರೆ.

ಸರ್ದಾರ್ ಪಟೇಲ್‌ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಫೈನಲ್ ಪಂದ್ಯದಲ್ಲಿ ಟಾಸ್‌ ಗೆದ್ದ ಪಂಜಾಬ್‌ ಕರ್ನಾಟಕಕ್ಕೆ ಬ್ಯಾಟಿಂಗ್ ಬಿಟ್ಟುಕೊಟ್ಟಿತು. ಅವಕಾಶ ಬಳಸಿಕೊಂಡ ಕರ್ನಾಟಕ ಮಯಾಂಕ್ ಅಗರ್ ವಾಲ್ (125, 100ಎಸೆತ, 10 ಬೌಂಡರಿ, 3 ಸಿಕ್ಸರ್‌) ಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 359 ರನ್‌ ಗಳ ಬೃಹತ್ ಮೊತ್ತ ಪೇರಿಸಿತು.[ಸರಣಿಗೂ ಮುನ್ನವೇ ಕಟುಕಿದ ವಿರಾಟ್ ಕೊಹ್ಲಿ]

karnataka

ಬಿರುಸಿನ ಬ್ಯಾಟಿಂಗ್ ನಡೆಸಿದ ಆರಂಭಿಕ ದಾಂಡಿಗ ರಾಬಿನ್‌ ಉತ್ತಪ್ಪ (87), ಮನೀಷ್‌ ಪಾಂಡೆ (40) ಮತ್ತು ಕರಣ್‌ ನಾಯರ್‌ (86) ಕರ್ನಾಟಕದ ಮೊತ್ತ ಹೆಚ್ಚಿಸಲು ಕಾರಣರಾದರು.

ಗುರಿ ಬೆನ್ನು ಹತ್ತಿದ ಪಂಜಾಬ್‌ಗೆ 38.2 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 203 ರನ್‌ ಗಳಿಸಷ್ಟೇ ಸಾಧ್ಯವಾಯಿತು. ಅಮಿತೋಜ್‌ ಸಿಂಗ್‌ (46) ಹಾಗೂ ಮನ್‌ಪ್‌ ಸಿಂಗ್‌ (76) ಬಿಟ್ಟರೆ ಉಳಿದ ಆಟಗಾರು ಹೋರಾಟ ಪ್ರದರ್ಶಿಸಲಿಲ್ಲ. ಅಂತಾರಾಷ್ಟ್ರೀಯ ಅನುಭವಿ ಆಟಗಾರ ಯುವರಾಜ್ ಸಿಂಗ್ 23 ರನ್​ಗೆ ಔಟಾಗಿ ನಿರಾಸೆ ಮೂಡಿಸಿದರು.[ಅನ್ನದಲ್ಲಿ ಜಿರಳೆ ಶವ ಕಂಡು ಕ್ರಿಕೆಟಿಗರು ದಿಗ್ಭ್ರಾಂತ!]

ವೇಗಿ ಅಭಿಮನ್ಯು ಮಿಥುನ್‌ (37ಕ್ಕೆ3), ಸ್ಟುವರ್ಟ್‌ ಬಿನ್ನಿ (62ಕ್ಕೆ2) ದಾಳಿಗೆ ತತ್ತರಿಸಿದ ಪಂಜಾಬ್‌ ಸುಲಭವಾಗಿ ಕರ್ನಾಟಕಕ್ಕೆ ಶರಣಾಯಿತು. ಇದೇ ಮೊದಲ ಬಾರಿ ಹಜಾರೆ ಟ್ರೋಫಿ ಫೈನಲ್ ತಲುಪಿದ್ದ ಪಂಜಾಬ್‌ ಗೆ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ.

ಕರ್ನಾಟಕ ದೇಶಿ ಕ್ರಿಕೆಟ್ ರಾಜ
ಕರ್ನಾಟಕದ ಬಳಿ ದೇಶಿ ಕ್ರಿಕೆಟ್ ನ ನಾಲ್ಕು ಚಾಂಪಿಯನ್ ಪಟ್ಟಗಳಿವೆ. ರಣಜಿ ಟ್ರೋಫಿ, ಇರಾನಿ ಕಪ್ ಮತ್ತು ಸತತ ಎರಡು ಸಾರಿ ವಿಜಯ್ ಹಜಾರೆ ಟ್ರೋಫಿ ಗೆದ್ದ ದಾಖಲೆಯನ್ನು ನಿರ್ಮಿಸಿದೆ.

Story first published: Wednesday, January 3, 2018, 10:12 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+