Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಜಯ್ ಹಜಾರೆ: ಹರ್ಯಾಣ ವಿರುದ್ಧ 4 ವಿಕೆಟ್‌ ಕೆಡವಿದ ನವದೀಪ್ ಸೈನಿ

Vijay Hazare Trophy: Navdeep Saini takes four

ವಡೋದರಾ, ಸೆಪ್ಟೆಂಬರ್ 26: ಗುಜರಾತ್‌ನ ವಡೋದರದಲ್ಲಿನ ದರ್ಶನಮ್ ಸ್ಪೋರ್ಟ್ಸ್ ಆ್ಯಂಡ್ ಎಜುಕೇಶನ್ ಅಕಾಡೆಮಿ ಕ್ರಿಕೆಡ್ ಗ್ರೌಂಡ್‌ನಲ್ಲಿ ಬುಧವಾರ (ಸೆಪ್ಟೆಂಬರ್ 25) ನಡೆದ ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ಡೆಲ್ಲಿ ಪ್ರತಿನಿಧಿಸಿದ್ದ ವೇಗಿ ನವದೀಪ್ ಸೈನಿ ಹರ್ಯಾಣ ವಿರುದ್ಧ 4 ವಿಕೆಟ್ ಉರುಳಿಸಿ ಗಮನ ಸೆಳೆದಿದ್ದಾರೆ.

ವಿಜಯ್ ಹಜಾರೆ ಡೆಲ್ಲಿ vs ಹರ್ಯಾಣ ರೌಂಡ್ 2, ಎಲೈಟ್ ಗ್ರೂಪ್‌ ಬಿ ಪಂದ್ಯ ಪೂರ್ಣಗೊಳ್ಳಲಿಲ್ಲ. ಮಳೆಯಿಂದಾಗಿ ರದ್ದಾಗಿ ಇತ್ತಂಡಗಳಿಗೆ ತಲಾ 2 ಅಂಕಗಳನ್ನು ಹಂಚಲಾಗಿದೆ. ಆದರೆ ಹರ್ಯಾಣದ ಇನ್ನಿಂಗ್ಸ್‌ನಲ್ಲಿ ಸೈನಿ 36 ರನ್‌ನಿಗೆ 4 ವಿಕೆಟ್‌ ಪಡೆದು ಮಿಂಚಿದ್ದು ಕಂಡುಬಂತು.

ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದ್ದ ಹರ್ಯಾಣ, ನಿತಿನ್ ಸೈನಿ 23, ಪ್ರಮೋದ್ ಚಾಂಡಿಲ 58, ಜಯಂತ್ ಯಾದವ್ 15, ಚೈತನ್ಯ ಬಿಷ್ಣೋಯ್ 7, ಅರುಣ್ ಚಪ್ರನ 11, ಅಮಿತ್ ಮಿಶ್ರಾ ಸಿ 11 ರನ್‌ನೊಂದಿಗೆ 32.4 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 154 ರನ್ ಗಳಿಸಿತ್ತು.

ಹರ್ಯಾಣ ಇನ್ನಿಂಗ್ಸ್‌ನಲ್ಲಿ ಡೆಲ್ಲಿಯ ಸೈನಿ 4, ಖುಲ್ವಂತ್ ಖೆಜ್ರೋಲಿಯಾ 1, ಸುಬೋತ್ ಭಾಟಿ 1, ಮನನ್ ಶರ್ಮಾ 2, ರಾವಣ್ ನೇಗಿ 2 ವಿಕೆಟ್ ಪಡೆದರು. ಇನ್ನಿಂಗ್ಸ್‌ ಆರಂಭಿಸಿದ್ದ ಡೆಲ್ಲಿ 1.3 ಓವರ್‌ಗೆ ವಿಕೆಟ್ ನಷ್ಟವಿಲ್ಲದೆ 6 ರನ್ ಗಳಿಸಿತ್ತು. ಮಳೆ ಶುರುವಾಗಿದ್ದರಿಂದ ಪಂದ್ಯ ಅಲ್ಲಿಗೆ ನಿಲ್ಲಿಸಿ ರದ್ದೆಂದು ಘೋಷಿಸಲ್ಪಟ್ಟಿತು.

Story first published: Wednesday, September 25, 2019, 23:50 [IST]
Other articles published on Sep 25, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+