Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಜಯ್ ಹಜಾರೆ ಟ್ರೋಫಿ: ಕರ್ನಾಟಕ ವಿರುದ್ಧ ರೈಲ್ವೆಸ್ ಗೆ ರೋಚಕ ಜಯ

ಬೆಂಗಳೂರು, ಡಿ. 10: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿ ಗುರುವಾರ ಆರಂಭಗೊಂಡಿತು. ಕರ್ನಾಟಕ ತನ್ನ ಮೊದಲ ಪಂದ್ಯವನ್ನು ರೈಲ್ವೆಸ್ ವಿರುದ್ಧ ಆಡಿತು. ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಕರ್ನಾಟಕ ನಿಗದಿತ 50 ಓವರ್ ಗಳಲ್ಲಿ 228/9 ಸ್ಕೋರ್ ಮಾಡಿತ್ತು. ಕೊನೆ ಕ್ಷಣದವರೆಗೂ ರೋಚಕ ಉಳಿಸಿಕೊಂಡ ಪಂದ್ಯದಲ್ಲಿ 9 ವಿಕೆಟ್ ಕಳೆದುಕೊಂಡು ರೈಲ್ವೆಸ್ ತಂಡ 232ರನ್ ಸ್ಕೋರ್ ಮಾಡಿ ಗೆಲುವು ದಾಖಲಿಸಿದೆ.

ಕರ್ನಾಟಕದ ಆರಂಭಿಕ ಆಟಗಾರ ಮಯಾಂಕ್ ಅಗರ್ ವಾಲ್ 44 ಗಳಿಸಿ ಔಟಾದರೆ, ಕೆಎಲ್ ರಾಹುಲ್ 27, ಕರುಣ್ ನಾಯರ್ 20 ರನ್ ಗಳಿಸಿ ಔಟಾದರು. ಮನೀಶ್ 2 ರನ್ ಗಳಿಸಿ ನಿರಾಶೆ ಮೂಡಿಸಿದರು.

Vijay Hazare trophy


ನಂತರ ಬಿನ್ನಿ 18, ಸಿಎಂ ಗೌತಮ್ 21ರನ್ ಗಳಿಸಿ ಇನ್ನಿಂಗ್ಸ್ ಕಟ್ಟಲು ಯತ್ನಿಸಿದರು. ನಾಯಕ ವಿನಯ್ ಕುಮಾರ್ ಅಜೇಯ 50ರನ್ (48 ಎ, 4x4,2x6) ಹಾಗೂ ಮಿಥುನ್ 3 ಸಿಕ್ಸರ್ ಇರುವ 18 ಎಸೆತಗಳಲ್ಲಿ 28ರನ್ ಚೆಚ್ಚಿ ತಂಡದ ಮೊತ್ತವನ್ನು 229ಕ್ಕೇರಿಸಿದರು.

ರೈಲ್ವೆಸ್ ಪರ ಎಆರ್ ಪಾಂಡೆ 45/3, ಆಶೀಶ್ ಯಾದವ್ 25/3 ಗಳಿಸಿ ಕರ್ನಾಟಕದ ರನ್ ಗಳಿಕೆ ವೇಗಕ್ಕೆ ಬ್ರೇಕ್ ಹಾಕಿದರು. ಕರಣ್ ಶರ್ಮ 2 ವಿಕೆಟ್ ಪಡೆದರೆ, ಅನುರೀತ್ ಸಿಂಗ್ 1 ವಿಕೆಟ್ ಗಳಿಸಿದರು.ಗಾಯಾಳುವಾಗಿರುವ ರಾಬಿನ್ ಉತ್ತಪ್ಪ ಈ ಪಂದ್ಯದಲ್ಲಿ ಆಡುತ್ತಿಲ್ಲ.

ಕರ್ನಾಟಕ ತಂಡ : ಕೆಎಲ್ ರಾಹುಲ್, ಮಾಯಾಂಕ್ ಅಗರವಾಲ್, ಕರುಣ್ ನಾಯರ್, ಮನೀಶ್ ಪಾಂಡೆ, ಮಿಥುನ್, ಸ್ಟುವರ್ಟ್ ಬಿನ್ನಿ, ಅರವಿಂದ್ ಶ್ರೀನಾಥ್, ಸುಚಿತ್ ಜೆ, ಅನಿರುದ್ಧ ಜೋಶಿ, ವಿನಯ್ ಕುಮಾರ್, ಸಿಎಂ ಗೌತಮ್.[ಬೆಂಗಳೂರಲ್ಲಿ ಧೋನಿ ಬ್ಯಾಟಿಂಗ್ ತಪ್ಪದೇ ನೋಡಿ]

Vijay Hazare trophy

ಬಿಸಿಸಿಐ 50 ಓವರ್‌ಗಳ ಟೂರ್ನಿ ವಿಜಯ್ ಹಜಾರೆ ಟ್ರೋಫಿಯನ್ನು ಕಳೆದ ಎರಡು ವರ್ಷಗಳಿಂದ ವರ್ಷದ ಕೊನೆಯಲ್ಲಿ ನಡೆಸುತ್ತಿದೆ. ಈ ವರ್ಷ 27 ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಭಜಿಸಲಾಗಿದ್ದು, ಪ್ರತಿ ಗುಂಪಿನಲ್ಲಿ 7 ತಂಡಗಳಿವೆ. ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ನಾಕೌಟ್‌ಗೆ ಅರ್ಹತೆ ಪಡೆಯುತ್ತವೆ. ಬೆಂಗಳೂರು, ರಾಜ್‌ಕೋಟ್, ಹೈದರಾಬಾದ್ ಹಾಗೂ ದಿಲ್ಲಿಯಲ್ಲಿ ಟೂರ್ನಿ ನಡೆಯಲಿದೆ.

ಈ ವರ್ಷದ ವಿಜಯ್ ಹಜಾರೆ ಟ್ರೋಫಿಯಲ್ಲಿ ಎಂಎಸ್ ಧೋನಿ, ಆರ್. ಅಶ್ವಿನ್, ಶಿಖರ್ ಧವನ್, ಸುರೇಶ್ ರೈನಾ, ಯುವರಾಜ್ ಸಿಂಗ್, ಕೆಎಲ್ ರಾಹುಲ್, ಸ್ಟುವರ್ಟ್ ಬಿನ್ನಿ, ಗೌತಮ್ ಗಂಭೀರ್, ಇಶಾಂತ್ ಶರ್ಮ, ಮುಹಮ್ಮದ್ ಶಮಿ ಭಾಗವಹಿಸುವ ಮೂಲಕ ಟೂರ್ನಿಯ ಕಳೆ ಹೆಚ್ಚಿದೆ.

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+