For Quick Alerts
ALLOW NOTIFICATIONS  
For Daily Alerts
 

ವಿಜಯ್ ಅಜಾರೆ: ಒಡಿಶಾ ವಿರುದ್ಧ ರಾಬಿನ್ ಉತ್ತಪ್ಪ ಸ್ಫೋಟಕ ಶತಕ

Vijay Hazare Trophy: Robin Uthappa slams ton against Odisha

ಬೆಂಗಳೂರು: ಬೆಂಗಳೂರಿನ ಆಲೂರಿನಲ್ಲಿರುವ ಕೆಎಸ್‌ಸಿಎ ಕ್ರಿಕೆಟ್ ಗ್ರೌಂಡ್‌ನಲ್ಲಿ ಶನಿವಾರ (ಫೆಬ್ರವರಿ 20) ನಡೆದ ವಿಜಯ್ ಹಜಾರೆ ಟ್ರೋಫಿ ರೌಂಡ್ 1, ಎಲೈಟ್ ಗ್ರೂಪ್ ಸಿ ಪಂದ್ಯದಲ್ಲಿ ಕೇರಳ ಪರವಾಗಿ ಆಡಿದ್ದ ಕರ್ನಾಟಕದ ಮಡಿಕೇರಿ ಮೂಲದ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ ಸ್ಫೋಟಕ ಶತಕ ಸಿಡಿಸಿದ್ದಾರೆ.

ರಾಬಿನ್ ಉತ್ತಪ್ಪ ಬಿರುಸಿನ ಶತಕದ ನೆರವಿನಿಂದ ಒಡಿಶಾ ವಿರುದ್ಧದ ಈ ಪಂದ್ಯದಲ್ಲಿ ಕೇರಳ ತಂಡ 34 ರನ್‌ಗಳ ಗೆಲುವು (ವಿಜೆಡಿ ನಿಯಮದ ಆಧಾರದಲ್ಲಿ) ದಾಖಲಿಸಿದೆ. ಉತ್ತಪ್ಪ ಈ ಪಂದ್ಯದಲ್ಲಿ 85 ಎಸೆತಗಳಲ್ಲಿ 107 ರನ್‌ಗಳ ಕೊಡುಗೆ ನೀಡಿದ್ದರು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಒಡಿಶಾದಿಂದ ಗೌರವ್ ಚೌಧರಿ 57, ಸಂದೀಪ್ ಪಟ್ನಾಯಕ್ 66, ಅಭಿಷೇಕ್ ಯಾದವ್ 13, ರಾಜೇಶ್ ದೂಪ್ಕಾರ್ 20, ಕಾರ್ತಿಕ್ ಬಿಸ್ವಾಲ್ ಅಜೇಯ 45, ದೇಬಬ್ರತ ಪ್ರಧಾನ್ 27 ರನ್‌ ಸೇರಿಸಿದರು. ಒಡಿಶಾ 45 ಓವರ್‌ನಲ್ಲಿ 8 ವಿಕೆಟ್ ಕಳೆದು 258 ರನ್ ಗಳಿಸಿತು.

ಮಳೆ ಇದ್ದಿದ್ದರಿಂದ ಕೇರಳಕ್ಕೆ 38.2 ಓವರ್‌ಗಳಲ್ಲಿ 200 ರನ್ ಗುರಿ ನೀಡಲಾಗಿತ್ತು. ಗುರಿ ಬೆನ್ನಟ್ಟಿದ ಕೇರಳ, ರಾಬಿನ್ ಉತ್ತಪ್ಪ 107, ವಿಷ್ಣು ವಿನೋದ್ 28, ನಾಯಕ ಸಚಿನ್ ಬೇಬಿ 40, ವತ್ಸಲ್ ಗೋವಿಂದ್ 29, ಮೊಹಮ್ಮದ್ ಅಝರುದ್ದೀನ್ 23 ರನ್‌ನೊಂದಿಗೆ 38.2 ಓವರ್‌ನಲ್ಲಿ 233 ರನ್ ಗಳಿಸಿತು.

Story first published: Sunday, February 21, 2021, 0:16 [IST]
Other articles published on Feb 21, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+