ಲಂಡನ್ನಿನಲ್ಲಿ ಮಗನ ಜತೆ ಮಲ್ಯ, ವಿಡಿಯೋ ಟ್ರೆಂಡಿಂಗ್
ಲಂಡನ್, ಜೂನ್ 01: ಮನಿಲಾಂಡ್ರಿಂಗ್, ಸಾಲದ ಸುಳಿಯಲ್ಲಿ ಸಿಲುಕಿ ದೇಶ ಬಿಟ್ಟಿರುವ ಉದ್ಯಮಿ ವಿಜಯ್ ಮಲ್ಯ ಅವರು ಲಂಡನ್ನಿನಲ್ಲೇ ನೆಲೆಸಿದ್ದಾರೆ ಎಂಬುದಕ್ಕೆ ಮತ್ತೆ ಪುರಾವೆ ಸಿಕ್ಕಿದೆ. ಮಗ ಸಿದ್ಧಾರ್ಥ್ ಜತೆ ಐಪಿಎಲ್ ಫೈನಲ್ ಪಂದ್ಯ ವೀಕ್ಷಿಸಿದ ವಿಡಿಯೋ ಈಗಲೂ ಸಾಮಾಜಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗುತ್ತಿದೆ. [2016ರಲ್ಲಿ ವಿರಾಟ್ ಕೊಹ್ಲಿ ಸಾಧನೆ, ದಾಖಲೆಗಳು]
ಒಂದು ಕಾಲದಲ್ಲಿ ಅರ್ಸಿಬಿ ಪ್ರತಿ ಪಂದ್ಯವನ್ನು ಮೈದಾನದಲ್ಲೇ ವೀಕ್ಷಿಸಿ ಹುರಿದುಂಬಿಸುತ್ತಿದ್ದ ಅಪ್ಪ ಮಗ ಈಗ ದೂರದ ದೇಶದಲ್ಲಿ ಕುಳಿತು ಅಭಿಮಾನಿಗಳಂತೆ 'ಚಿಯರ್' ಮಾಡಿದ್ದಾರೆ.

ಮಲ್ಯ ಅವರು ಆರ್ ಸಿಬಿ ತೊರೆದ ಮೇಲೆ ಆರ್ ಸಿಬಿ ಲಕ್ ತಿರುಗಿದೆ ಈ ಬಾರಿ ಫೈನಲ್ ಗೆಲ್ಲಬಹುದು ಎಂಬ ನಿರೀಕ್ಷೆ ಸುಳ್ಳಾಗಿದೆ. ಸನ್ರೈಸರ್ ವಿರುದ್ಧದ ಫೈನಲ್ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋತಿರುವುದು ಈಗ ಇತಿಹಾಸ.[ಆರ್ ಸಿಬಿ ಮಣಿಸಿ ಕಪ್ ಎತ್ತಿದ ವಾರ್ನರ್ ಪಡೆ]
9,600 ಕೋಟಿ ರು ಗೂ ಅಧಿಕ ಸಾಲದ ಸುಳಿಯಲ್ಲಿ ಸಿಲುಕಿರುವ ವಿಜಯ್ ಮಲ್ಯ ಅವರು ಮಾರ್ಚ್ 2 ರಂದೇ ಭಾರತ ಬಿಟ್ಟು ಲಂಡನ್ನಿಗೆ ಹಾರಿದ್ದಾರೆ. ರೆಡ್ ಕಾರ್ನರ್ ನೋಟಿಸ್, ಸಮನ್ಸ್ ಬಂದರೂ ಧೃತಿಗೆಟ್ಟಿಲ್ಲ, ಇಂಗ್ಲೆಂಡ್ ಕೂಡಾ ಮಲ್ಯರನ್ನು ಗಡಿಪಾರು ಮಾಡುವುದಿಲ್ಲ ಎಂದಿದೆ. ಹೀಗಾಗಿ ಯಾವುದೇ ಚಿಂತೆ ಇಲ್ಲದೆ ಎಫ್ 1 ರೇಸ್, ಐಪಿಎಲ್ ಫೈನಲ್ ವೀಕ್ಷಣೆ ಮಾಡಿ ಮಲ್ಯ ಎಂಜಾಯ್ ಮಾಡಿದ್ದಾರೆ. [ಯಾರಿಗೆ ಯಾವ ಪ್ರಶಸ್ತಿ, ಕಿರೀಟ, ಪುರಸ್ಕಾರ]
ಮಲ್ಯ ಹಾಗೂ ಇತರೆ ಆಪ್ತರೊಂದಿಗೆ ಐಪಿಎಲ್ 2016 ಫೈನಲ್ ವೀಕ್ಷಣೆ ಮಾಡಿದ್ದರ ಬಗ್ಗೆ ಸಿದ್ ಮಲ್ಯ ವಿಡಿಯೋವೊಂದನ್ನು ಫೇಸ್ ಬುಕ್ ನಲ್ಲಿ ಹಾಕಿದ್ದು ಈ ಸಮಯಕ್ಕೆ 155K views, 719 ಹಂಚಿಕೆ, 5.3K ಲೈಕ್ಸ್ ಬಂದಿದೆ. ಇನ್ನೂ ಕಾಮೆಂಟ್ ಗಳು ಬರುತ್ತಿವೆ. ಮೊನಾಕೊ ಎಫ್ 1 ಗ್ರಾಂಡ್ ಪ್ರೀನಲ್ಲಿ ಫೋರ್ಸ್ ಇಂಡಿಯಾ ಮೂರನೇ ಸ್ಥಾನ ಪಡೆದಿದ್ದು, ಮಲ್ಯ ಅವರಿಗೆ ಸಂತಸ ತಂದರೆ, ಆರ್ ಸಿಬಿ ಸೋಲು ಕಹಿ ನೀಡಿತು.
<iframe src="https://www.facebook.com/plugins/video.php?href=https%3A%2F%2Fwww.facebook.com%2FSidMallya%2Fvideos%2F621149638049921%2F&show_text=0&width=560" width="560" height="315" style="border:none;overflow:hidden" scrolling="no" frameborder="0" allowTransparency="true" allowFullScreen="true"></iframe>
Story first published: Wednesday, January 3, 2018, 10:04 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications