
ಲಂಡನ್, ಜೂನ್ 09: ಸಾವಿರಾರು ಕೋಟಿ ಸಾಲ ಮಾಡಿ ಭಾರತದಿಂದ ಲಂಡನ್ನಿಗೆ ಪರಾರಿಯಾಗಿರುವ ಉದ್ಯಮಿ ಮಲ್ಯ ಅವರು ಕೋರ್ಟ್ ಕಟ್ಲೆ ತೊಂದರೆ ಮರೆತು ನೆಮ್ಮದಿಯಿಂದ ಕ್ರಿಕೆಟ್ ನೋಡಲು ಬಂದ ಘಟನೆ ಭಾನುವಾರದಂದು ನಡೆದಿದೆ.
'ಬ್ಯಾಟ್ ಮಾತಾಡಲಿ' ಮತ್ತೆ ಕುಣಿಯುತ್ತಾ ಬಂದ ಆರ್ ಸಿಬಿ ಗರ್ಲ್
ಒಂದು ಕಾಲದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಲೀಕರಾಗಿ 'ಗುಡ್ ಟೈಮ್ಸ್' ಕಂಡಿದ್ದ ಮಲ್ಯ ಈಗ ದೇಶ ತೊರೆದ ಅಪರಾಧಿಯಾಗಿ ಲಂಡನ್ನಿನಲ್ಲಿ ನೆಲೆ ಕಂಡಿದ್ದಾರೆ. ಕೊಹ್ಲಿ ಹಾಗೂ ಟೀಂ ಇಂಡಿಯಾಕ್ಕೆ ಶುಭ ಹಾರೈಸಲು ಮೈದಾನಕ್ಕೆ ಬಂದಿದ್ದಾರೆ.
ದಕ್ಷಿಣ ಲಂಡನ್ನ ಕೆನ್ನಿಂಗ್ಟನ್ನ ಓವಲ್ ನಲ್ಲಿ ನಡೆದಿರುವ ಐಸಿಸಿ ವಿಶ್ವಕಪ್ 2019ರ 14ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ಭಾರತ ಸೆಣಸಾಡುತ್ತಿದ್ದು, ಕ್ರಿಕೆಟ್ ಪ್ರೇಮಿ ಮಲ್ಯ ಅವರು ಸ್ಟೇಡಿಯಂಗೆ ತೆರಳುವ ಸಮಯದಲ್ಲಿ ಮಾಧ್ಯಮದವರ ಕಣ್ಣಿಗೆ ಬಿದ್ದಿದ್ದಾರೆ.
ಮಲ್ಯ ಅವರನ್ನು ವಿಚಾರಣೆಗಾಗಿ ಭಾರತಕ್ಕೆ ಕರೆ ತರಲು ಸಿಬಿಐ ಹಾಗೂ ಜಾರಿ ನಿರ್ದೇಶನಾಲಯಗಳು ಯತ್ನಿಸುತ್ತಿವೆ. ಮಲ್ಯ ಅವರ ಹಸ್ತಾಂತರ ಪ್ರಕರಣ ಕೋರ್ಟಿನಲ್ಲಿದೆ. ಸದ್ಯ ವಂಚನೆ ಪ್ರಕರಣದಲ್ಲಿ ಬಂಧನದ ಭೀತಿ ಇದ್ದರೂ ಸದ್ಯ ಜಾಮೀನು ಪಡೆದುಕೊಂಡಿದ್ದಾರೆ.
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದನೇ ಹಾಗೂ ಅಂತಿಮ ಪಂದ್ಯದ ಮೊದಲ ದಿನದ ಆಟ ನೋಡಲು ಬಂದಿದ್ದ ಮಲ್ಯ ಮಾಧ್ಯಮದವರ ಮೇಲೆ ಗರಂ ಆಗಿದ್ದರು.