Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಂಚಕ ವಿಜಯ್ ಮಲ್ಯರನ್ನ ಭೇಟಿಯಾದ ವಿಂಡೀಸ್ ಕ್ರಿಕೆಟಿಗ ಕ್ರಿಸ್ ಗೇಲ್

Vijay malya
Chris Gayle ಜೊತೆ ಕಾಣಿಸಿಕೊಂಡ Vijay Mallya ಫೋಟೋ ವೈರಲ್ | *Cricket | OneIndia Kannada

ದೇಶ ತೊರೆದು ಬ್ರಿಟನ್ ನಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ ಅವರನ್ನು ಕ್ರಿಕೆಟಿಗ ಕ್ರಿಸ್ ಗೇಲ್ ಭೇಟಿಯಾಗಿದ್ದಾರೆ. ವೆಸ್ಟ್ ಇಂಡೀಸ್ ಕ್ರಿಕೆಟಿಗ ಕ್ರಿಸ್ ಗೇಲ್ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದು, ಅಲ್ಲಿನ ಸೆಲೆಬ್ರಿಟಿಗಳನ್ನು ಭೇಟಿಯಾಗಿದ್ದಾರೆ.

ಕ್ರಿಸ್ ಗೇಲ್ ಅವರು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರನ್ನು ಭೇಟಿ ಮಾಡಿ ಅವರೊಂದಿಗೆ ಕ್ರಿಕೆಟ್ ಆಡಿದ್ದಾರೆ. ಇದಾದ ಬಳಿಕ ಭಾರತೀಯ ಬ್ಯಾಂಕ್ ಗಳಲ್ಲಿ ಸಾಲ ಪಡೆದು ಮರುಪಾವತಿ ಮಾಡದೆ ಸಾವಿರಾರು ಕೋಟಿ ವಂಚನೆ ಮಾಡಿರುವ ವಿಜಯ್ ಮಲ್ಯರನ್ನು ಗೇಲ್ ಭೇಟಿ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ದೇಶ ತೊರೆದು ಇಂಗ್ಲೆಂಡ್‌ನಲ್ಲಿ ನೆಲಸಿರುವ ಮಲ್ಯರನ್ನು ಗಡಿಪಾರು ಮಾಡುವ ಪ್ರಯತ್ನ ವಿಫಲವಾಯಿತು.

ವಿಜಯ್ ಮಲ್ಯ ಮತ್ತು ಕ್ರಿಸ್ ಗೇಲ್ ನಡುವೆ ವಯಸ್ಸಿನ ವ್ಯತ್ಯಾಸವಿದ್ದರೂ, ತಂಡದ ಮಾಲೀಕ ಎನ್ನುವುದನ್ನು ಮೀರಿ ಇಬ್ಬರ ನಡುವೆ ಉತ್ತಮ ಸ್ನೇಹವಿತ್ತು. ವಿಜಯ್ ಮಲ್ಯ ಅವರ ಗೋವಾದ ಬಂಗಲೆಯಲ್ಲಿ ಈ ಹಿಂದೆ ಕ್ರಿಸ್ ಗೇಲ್ ವಾಸ್ತವ್ಯ ಸಹ ಹೂಡಿದ್ದಾರೆ.

ಹೀಗಿರುವಾಗ ಇಂಗ್ಲೆಂಡ್ ಗೆ ತೆರಳಿರುವ ಕ್ರಿಸ್ ಗೇಲ್ ವಿಜಯ್ ಮಲ್ಯ ಅವರನ್ನು ಭೇಟಿ ಮಾಡಿ ಫೋಟೋ ತೆಗೆಸಿಕೊಂಡಿದ್ದಾರೆ. ಈ ಭೇಟಿಯಲ್ಲಿ ಇಬ್ಬರೂ ಭಾರತದ ಐಪಿಎಲ್ ದಿನಗಳ ಕುರಿತಾಗಿ ಮಾತನಾಡಿದರು. ವಿಜಯ್ ಮಲ್ಯ ಅವರು ತಮ್ಮ ಉತ್ತಮ ಸ್ನೇಹಿತ ಕ್ರಿಸ್ ಗೇಲ್ ಅವರನ್ನು ಭೇಟಿಯಾಗಲು ಸಂತೋಷವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಕ್ರಿಸ್ ಗೇಲ್ ಅವರನ್ನು ಯೂನಿವರ್ಸಲ್ ಬಾಸ್ ಎಂದು ಹೊಗಳಿದ ವಿಜಯ್ ಮಲ್ಯ ಅವರು ಆರ್‌ಸಿಬಿ ತಂಡಕ್ಕೆ ಆಯ್ಕೆಯಾದ ದಿನದಿಂದಲೂ ಇಬ್ಬರೂ ಸ್ನೇಹಿತರು ಎಂದು ಹೇಳಿಕೊಂಡಿದ್ದಾರೆ. ಏತನ್ಮಧ್ಯೆ, ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಭಾಗವಹಿಸಿದ್ದ ಅದೇ ಕಾರ್ಯಕ್ರಮದಲ್ಲಿ ವಿಜಯ್ ಮಲ್ಯ ಉಪಸ್ಥಿತರಿದ್ದರು. ಭಾರತದಲ್ಲಿ ಬೇಕಾಗಿರುವ ಮಹಾ ವಂಚಕನೊಬ್ಬ ಇಂಗ್ಲೆಂಡ್ ಪ್ರಧಾನಿ ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಮೂಲಕ ವಿವಾದಕ್ಕೆ ಕಾರಣವಾಗಿದ್ದಾನೆ.

Story first published: Wednesday, June 22, 2022, 14:33 [IST]
Other articles published on Jun 22, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+