ಕರ್ನಾಟಕ ರಣಜಿ ತಂಡಕ್ಕೆ ಗುಡ್‌ಬೈ ಹೇಳಿದ ದಾವಣಗೆರೆ ಎಕ್ಸ್‌ಪ್ರೆಸ್!

ಬೆಂಗಳೂರು, ಆಗಸ್ಟ್ 19: ಕರ್ನಾಟಕ ರಣಜಿ ತಂಡದ ಅತ್ಯಂತ ಯಶಸ್ವಿ ನಾಯಕ ಆರ್. ವಿನಯ್ ಕುಮಾರ್, ಮುಂಬರುವ 2019-20ರ ಸಾಲಿನ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಗೆ ಪಾಂಡಿಚರಿ ತಂಡದ ಪರ ಆಡಲು ನಿರ್ಧರಿಸಿದ್ದು, ಕರ್ನಾಟಕ ತಂಡಕ್ಕೆ ಗುಡ್ ಬೈ ಹೇಳುವುದಾಗಿ ತಿಳಿಸಿದ್ದಾರೆ.
'ಮೈಖೇಲ್' ಇಂಗ್ಲೀಷ್ ಸ್ಟೋರಿ ಇಲ್ಲಿದೆ
ಬೆಂಗಳೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡವನ್ನು ಮುನ್ನಡೆಸುತ್ತಿರುವ ವಿನಯ್, ಸೋಮವಾರ ಬಳ್ಳಾರಿ ಟಸ್ಕರ್ಸ್ ವಿರುದ್ಧದ ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಯಾರೂ ಕೂಡ ನಿರೀಕ್ಷಿಸಿರದ ಅಚ್ಚರಿಯ ವಿಷಯವನ್ನು ಹೊರಹಾಕಿದರು.
ಇದರೊಂದಿಗೆ ಮುಂದಿ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಗೆ ಕರ್ನಾಟಕ ತಂಡಕ್ಕೆ ವಿನಯ್ ಸೇವೆ ಇಲ್ಲವಾಗಿದೆ. ಅಷ್ಟೇ ಅಲ್ಲದೆ ನೂತನ ನಾಯಕ ಯಾರಾಗುತ್ತಾರೆಂಬ ಕುತೂಹಲವೂ ಕೆರಳಿದೆ. ಕಳೆದ ಆವೃತ್ತಿಯಲ್ಲಿ ಕೆಲ ಪಂದ್ಯಗಳಲ್ಲಿ ವಿನಯ್ ತಂಡವನ್ನು ಮುನ್ನಡೆಸಿದರೂ ಬಳಿಕ ಮನೀಷ್ ಪಾಂಡೆ ನಾಯಕನ ಜವಾಬ್ದಾರಿ ಹೊತ್ತಿದ್ದರು. ಹೀಗಾಗಿ ಮನೀಶ್‌ಗೆ ನಾಯಕತ್ವ ಲಭ್ಯವಾಗು ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಮನೀಶ್ ರಾಷ್ಟ್ರೀಯ ತಂಡದ ಸೇವೆಯಲ್ಲಿ ನಿರತರಾದರೆ, ಕರುಣ್ ನಾಯರ್‌ಗೆ ಈ ಜವಾಬ್ದಾರಿ ಲಭ್ಯವಾಗುವ ಸಾಧ್ಯತೆಯೂ ಇದೆ.
ಇನ್ನು ಕರ್ನಾಟಕ ತಂಡವನ್ನು ತೊರೆಯುತ್ತಿರುವ ಅನುಭವಿ ಆಟಗಾರರ ಸಂಖ್ಯೆ ಹೆಚ್ಚುತ್ತಿದ್ದು, ಈ ಬಾರಿ ಸ್ಟಾರ್ ಆಲ್‌ರೌಂಡರ್ ಸ್ಟುವರ್ಟ್ ಬಿನ್ನಿ ಮತ್ತು ಅನುಭವಿ ವಿಕೆಟ್‌ಕೀಪರ್ ಸಿಎಂ ಗೌತಮ್ ಕೂಡ ಬೇರೆ ರಾಜ್ಯದ ಪರ ಆಡಲು ಮುಂದಾಗಿದ್ದಾರೆ. ಇದಕ್ಕೂ ಮುನ್ನ ರಾಬಿನ್ ಉತ್ತಪ್ಪ, ಅಮಿತ್ ವರ್ಮಾ ಹಾಗೂ ಗನೇಶ್ ಸತೀಶ್ ಕೂಡ ಇದೇ ಮಾರ್ಗ ಅನುಸರಿಸಿದ್ದರು.
2012ರಲ್ಲಿ ಭಾರತದ ಪರ ಏಕೈಕ ಟೆಸ್ಟ್ ಪಂದ್ಯದಲ್ಲಿ ಆಡಿರುವ ವಿನಯ್, ಕಳೆದ 15 ವರ್ಷಗಳಲ್ಲಿ ಕರ್ನಾಟಕ ತಂಡಕ್ಕೆ ತಮ್ಮ ನಾಯಕತ್ವದಲ್ಲಿ ಹಲವು ಟ್ರೋಫಿಗಳನ್ನು ಗೆದ್ದುಕೊಟ್ಟಿದ್ದಾರೆ.
ಯುವ ಆಟಗಾರರಿಗೆ ಸ್ಥಾನ ಕಲ್ಪಿಸಲು ತಂಡದಿಂದ ಹೊರಕ್ಕೆ
"15 ವರ್ಷಗಳ ಪಯಣದಲ್ಲಿ ಹಲವು ಅವಿಸ್ಮರಣೀಯ ಕ್ಷಣಗಳನ್ನು ಅನುಭವಿಸಿದ್ದೇನೆ. 2013-14 ಮತ್ತು 2014-15ರ ಸಾಲಿನಲ್ಲಿ ಸತತವಾಗಿ ರಣಜಿ ಮತ್ತು ಇರಾನಿ ಟ್ರೋಫಿ ಟೂರ್ನಿಗಳನ್ನು ಗೆದ್ದಿರುವುದು ಮರೆಯಲಾಗದೆ ನೆನಪುಗಳು. ರಾಜ್ಯದಲ್ಲಿ ಯುವ ಆಟಗಾರರಿಗೆ ಸ್ಥಾನ ಸಿಗಲು ಅವಕಾಶ ಮಾಡಿಕೊಡುವ ಉದ್ದೇಶದಿಂದ ರಾಜ್ಯ ತಂಡವನ್ನು ತೊರೆಯುತ್ತಿದ್ದೇನೆ. ಒಂದು ವರ್ಷದ ಹಿಂದಷ್ಟೇ ರೂಪ ತಾಳಿರುವ ಪಾಂಡಿಚರಿ ತಂಡದ ಆಟಗಾರ ಮತ್ತು ಮಾರ್ಗದರ್ಶಕನಾಗಿ ವೃತ್ತಿಬದುಕು ಮುಂದುವರಿಸಲಿದ್ದೇನೆ. ಇದಕ್ಕೆ ರಾಜ್ಯ ಕ್ರಿಕೆಟ್ ಸಂಸ್ಥೆ ಕೂಡ ಅನುಮತಿ ನೀಡಿದೆ," ಎಂದು ವಿನಯ್ ಕುಮಾರ್ ಹೇಳಿದ್ದಾರೆ.
ರಾಜ್ಯ ತಂಡದ ಪರ 106 ರಣಜಿ ಪಂದ್ಯಗಳನ್ನು ಆಡಿರುವ ವಿನಯ್ ಕುಮಾರ್, ದುಲೀಪ್ ಟ್ರೋಫಿಯಲ್ಲಿ 14 ಮತ್ತು ಇರಾನಿ ಟ್ರೋಫಿಯಲ್ಲಿ 3 ಪಂದ್ಯಗಳನ್ನಾಡಿದ್ದಾರೆ.
ವಿವಿಧ ಮಾದರಿಯ ಕ್ರಿಕೆಟ್‌ನಲ್ಲಿ ಕರ್ನಾಟಕದ ಆಲ್‌ರೌಂಡರ್ ವಿನಯ್ ಕುಮಾರ್ ಅವರ ಸಾಧನೆ.

ಒಡಿಐ ಅಂಕಿಅಂಶ
31 ಪಂದ್ಯ
38 ವಿಕೆಟ್
4/30 ಶ್ರೇಷ್ಠ ಬೌಲಿಂಗ್
37.44 ಸರಾಸರಿ
5.94 ಎಕಾನಮಿ
37.7 ಸ್ಟ್ರೈಕ್‌ರೇಟ್

ಅಂತಾರಾಷ್ಟ್ರೀಯ ಟಿ20
09 ಪಂದ್ಯ
10 ವಿಕೆಟ್
3/24 ಶ್ರೇಷ್ಠ ಬೌಲಿಂಗ್
24.70 ಸರಾಸರಿ
7.84 ಎಕಾನಮಿ
18.9 ಸ್ಟ್ರೈಕ್‌ರೇಟ್

ಪ್ರಥಮ ದರ್ಜೆ
130 ಪಂದ್ಯ
459 ವಿಕೆಟ್
8/32 ಶ್ರೇಷ್ಠ ಬೌಲಿಂಗ್
23.53 ಸರಾಸರಿ
2.83 ಎಕಾನಮಿ
49.7 ಸ್ಟ್ರೈಕ್‌ರೇಟ್
17 ನಾಲ್ಕು ವಿಕೆಟ್
22 ಐದು ವಿಕೆಟ್
04 ಹತ್ತು ವಿಕೆಟ್

ಸಮಗ್ರ ಟಿ20
174 ಪಂದ್ಯ
183 ವಿಕೆಟ್
4/40 ಶ್ರೇಷ್ಠ ಬೌಲಿಂಗ್
25.69 ಸರಾಸರಿ
7.91 ಎಕಾನಮಿ
19.4 ಸ್ಟ್ರೈಕ್‌ರೇಟ್
01 ನಾಲ್ಕು ವಿಕೆಟ್ ಸಾಧನೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications