ವಿನೋದ್ ಕಾಂಬ್ಳೆ ಆರೋಗ್ಯ ಸ್ಥಿತಿ ಗಂಭೀರ: ಸ್ನೇಹಿತನ ಸಹಾಯಕ್ಕೆ ಮುಂದಾದ ಸಚಿನ್ ತೆಂಡೂಲ್ಕರ್
ಟೀಮ್ ಇಂಡಿಯಾ ಮಾಜಿ ಆಟಗಾರ ವಿನೋದ್ ಕಾಂಬ್ಳೆ ಆರೋಗ್ಯ ಸ್ಥಿತಿ ಪ್ರಸ್ತುತ ಗಂಭೀರವಾಗಿದೆ. ಈಗ ಇವರ ಆರೋಗ್ಯ ಸ್ಥಿತಿಯ ಬಗ್ಗೆ ಈಗ ಕಳವಳ ಹೆಚ್ಚಾಗಿವೆ. ಈಗ ವಿನೋದ್ ಕಾಂಬ್ಳೆ ಅವರ ಆರೋಗ್ಯ ಸಮಸ್ಯೆಯಿಂದಾಗಿ ಕ್ರಿಕೆಟ್ ಆಟಗಾರರು ಒಗ್ಗೂಡುತ್ತಿದ್ದಾರೆ. 54 ವರ್ಷದ ಕಾಂಬ್ಳಿ ಪಾರ್ಶ್ವವಾಯುವಿಗೆ ತುತ್ತಾಗುವ ಅಪಾಯದಲ್ಲಿದ್ದಾರೆ. ಇವರ ಆರೋಗ್ಯದಲ್ಲಿ ಏರು ಪೇರಾಗಿದ್ದರಿಂದ ಮಾಜಿ ಕ್ರಿಕೆಟಿಗರು ಮತ್ತು ಸ್ನೇಹಿತರು ಆರ್ಥಿಕ ನೆರವು ನೀಡಲು ವಾಟ್ಸಾಪ್ ಗುಂಪನ್ನು ರಚಿಸಿದ್ದಾರೆ.
ಮಾಜಿ ಆಟಗಾರರು ರಚಿಸಿದ ಗುಂಪಿನಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಸಹ ಸೇರಿದ್ದಾರೆ. ಕಾಂಬ್ಳೆ ಅವರ ಆಪ್ತ ಸ್ನೇಹಿತ ಮಾರ್ಕಸ್ ಕೌಟೊ ಅವರ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸದ್ಯ ವಿನೋದ್ ಕಾಂಬ್ಳೆ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದೆ. ವಿನೋದ್ ಕಾಂಬ್ಳೆ ಅವರು ತಮ್ಮ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳದ ಕಾರಣ ಈ ಸ್ಥಿತಿಯನ್ನು ತಲುಪಿದ್ದಾರೆ. ಇವರು ಪಾರ್ಶ್ವವಾಯುವಿಗೆ ಒಳಗಾಗಬಹುದು ಎಂದು ಈಗಾಗಲೇ ವೈದ್ಯರು ಎಚ್ಚರಿಸಿದ್ದಾರೆ ವರದಿಗಳು ಬಂದಿವೆ.

ಕಾಂಬ್ಳೆ ಅವರು ತಮ್ಮ ದುರಭ್ಯಾಸಗಳಿಂದ ಆರೋಗ್ಯ ಕೆಡಿಸಿಕೊಂಡಿದ್ದಾರೆ. ಇವರು ಮದ್ಯಪಾನವನ್ನು ತ್ಯಜಿಸಿದ್ದಾರೆ ಎಂದು ಕೌಟೊ ತಿಳಿಸಿದ್ದಾರೆ. ಆದರೆ ಧೂಮಪಾನವನ್ನು ತ್ಯಜಿಸಲು ಸಾಧ್ಯವಾಗುತ್ತಿಲ್ಲ. ಆದರೂ ವಿನೋದ್ ಕಾಂಬ್ಳೆ ರಸ್ತೆಯಲ್ಲಿ ಹೋಗುವ ಜನರಿಂದ ಸಿಗರೇಟ್ ಕೇಳುತ್ತಾರೆ ಎಂದು ಕೌಟೊ ಹೇಳಿದ್ದಾರೆ. ಇವರ ಈ ಹವ್ಯಾಸಗಳಿಂದ ಮೆದುಳಿಗೆ ಹೊಡೆತ ಬೀಳುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.
ಕ್ರಿಕೆಟ್ ಜಗತ್ತು ಕಾಂಬ್ಳಿಗೆ ಸಹಾಯ ಮಾಡಲು ಮುಂದೆ ಬಂದಿದೆ. ಕಪಿಲ್ ದೇವ್, ಸುನಿಲ್ ಗವಾಸ್ಕರ್ ಅವರಂತಹ ದಿಗ್ಗಜರು ಈ ಹಿಂದೆ ಅವರ ಚಿಕಿತ್ಸೆಗೆ ಸಹಾಯ ಮಾಡಿದ್ದಾರೆ. ಈಗ ಇವರ ಸಹಾಯಕ್ಕೆ ಹಲವು ಕ್ರಿಕೆಟ್ ಆಟಗಾರರು ಕೈ ಜೋಡಿಸಿದ್ದಾರೆ. ಅಲ್ಲದೆ ವಾಟ್ಸ್ ಅಪ್ ಗ್ರುಪ್ ಸಹ ಮಾಡಿದ್ದಾರೆ. ಈ ಮೂಲಕ ಕಾಂಬ್ಳೆ ಅವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.
ವಿನೋದ್ ಕಾಂಬ್ಳೆ ಸಾಧನೆ
54 ವರ್ಷದ ಟೀಮ್ ಇಂಡಿಯಾದ ಮಾಜಿ ಆಟಗಾರ ವಿನೋದ್ ಕಾಂಬ್ಳೆ ಅವರು ಭಾರತದ ಪರ ಟೆಸ್ಟ್ ಹಾಗೂ ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಕಾಂಬ್ಳೆ ಟೀಮ್ ಇಂಡಿಯಾ ಪರ 17 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇವರು 54ರ ಸರಾಸರಿಯಲ್ಲಿ 1084 ರನ್ ಸಿಡಿಸಿದ್ದಾರೆ. 4 ಶತಕ, 3 ಅರ್ಧಶತಕ ಬಾರಿಸಿದ್ದಾರೆ. ವಿನೋದ್ ಕಾಂಬ್ಳೆ ಭಾರತದ ಪರ 104 ಪಂದ್ಯಗಳನ್ನು ಆಡಿದ್ದು 32ರ ಸರಾಸರಿಯಲ್ಲಿ 2477 ರನ್ ಸಿಡಿಸಿದ್ದಾರೆ. ಈ ವೇಳೆ 2 ಶತಕ, 14 ಅರ್ಧಶತಕ ಸಿಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications