ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯಲು ವಿರಾಟ್ ಕೊಹ್ಲಿಗೆ ಬೇಕು 23 ರನ್

Virat Kohli 23 runs away from surpassing Sachin Tendulkars record

ಈ ಬಾರಿಯ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಟೀಮ್ ಇಂಡಿಯಾ ಪಾಲಿಗೆ ಉತ್ತಮವಾಗಿಲ್ಲ. ಮೊದಲ ಎರಡು ಪಂದ್ಯಗಳನ್ನು ಸೋತಿರುವ ಭಾರತ ಏಕದಿನ ಸರಣಿಯನ್ನು ಆಸ್ಟ್ರೇಲಿಯಾ ಕೈಗೆ ಒಪ್ಪಿಸಿಯಾಗಿದೆ. ಈ ಹಿನ್ನೆಲೆಯಲ್ಲಿ ನಾಯಕ ವಿರಾಟ್ ಕೊಹ್ಲಿ ಮೇಲೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದೆ.

ಈ ಮಧ್ಯೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾ ಮಹತ್ವದ ದಾಖಲೆಯೊಂದನ್ನು ಬರೆಯಲಿದ್ದಾರೆ. ದಿಗ್ಗಜ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿರುವ ಈ ದಾಖಲೆ ವಿರಾಟ್ ಕೊಹ್ಲಿ ಹೆಸರಿಗೆ ವರ್ಗಾಯಿಸಲು ಕೇವಲ 23 ರನ್‌ಗಳ ಅಗತ್ಯವಿದೆ.

ಪ್ರೇಕ್ಷಕರ ಮುಂದೆ ಆಡಿದ್ದು, ಒಡಿಐ ಸರಣಿ ಗೆದ್ದಿದ್ದು ಖುಷಿ ನೀಡಿದೆ: ಫಿಂಚ್ಪ್ರೇಕ್ಷಕರ ಮುಂದೆ ಆಡಿದ್ದು, ಒಡಿಐ ಸರಣಿ ಗೆದ್ದಿದ್ದು ಖುಷಿ ನೀಡಿದೆ: ಫಿಂಚ್

ಹಾಗಾದರೆ ಆ ದಾಖಲೆ ಯಾವುದು? ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿರುವ ಆ ದಾಖಲೆಯನ್ನು ವಿರಾಟ್ ಕೊಹ್ಲಿ ಮುಂದಿನ ಪಂದ್ಯದಲ್ಲಿ ತಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳುತ್ತಾರಾ? ಮುಂದೆ ಓದಿ

12,000 ರನ್ ಗಳಿಸುವ ಅವಕಾಶ

12,000 ರನ್ ಗಳಿಸುವ ಅವಕಾಶ

ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 12000 ರನ್ ಗಳಿಸಲು ಸಜ್ಜಾಗಿದ್ದಾರೆ. ಕ್ಯಾನ್‌ಬೆರಾದಲ್ಲಿ ನಡೆಯಲಿರುವ ಅಂತಿಮ ಪಂದ್ಯದಲ್ಲಿ ವಿರಾಟ್ ಕೊಹ್ಲಿ 23 ರನ್ ಗಳಿಸಿದರೆ ಈ ಮಹತ್ವದ ಮೈಲಿಗಲ್ಲನ್ನು ಸಾಧಿಸಲಿದ್ದಾರೆ. ಈ ಮೂಲಕ ವಿಶ್ವಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ 6ನೇ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ.

ವೇಗವಾಗಿ 12000 ರನ್

ವೇಗವಾಗಿ 12000 ರನ್

ವಿಶ್ವದಾಖಲೆಯೇನೆಂದರೆ ಈ ಮಹತ್ವದ ಮೈಲಿಗಲ್ಲು ವೇಗವಾಗಿ ಮುಟ್ಟಿದ ಆಟಗಾರ ಎಂಬ ದಾಖಲೆ ವಿರಾಟ್ ಕೊಹ್ಲಿ ಪಾಲಾಗಲಿದೆ. ಕ್ಯಾನ್‌ಬೆರಾದಲ್ಲಿ ಈ ಸಾಧನೆ ಮಾಡಿದರೆ ಕೊಹ್ಲಿ 251ನೇ ಪಂದ್ಯದಲ್ಲಿ ಈ ಮೈಲಿಗಲ್ಲನ್ನು ತಲುಪಿದಂತಾಗಲಿದೆ. ಇನ್ನಿಂಗ್ಸ್‌ಗಳ ಲೆಕ್ಕಾಚಾರದಲ್ಲಿ ಸಚಿನ್ ತೆಂಡೂಲ್ಕರ್ ಈ ಸಾಧನೆಯನ್ನು ಮಾಡಲು 300 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಈ ಮೂಲಕ ಈವರೆಗೆ ಅತಿ ವೆಗದ 12000 ರನ್‌ಗಳ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದಾರೆ. ವಿರಾಟ್ ಕೊಹ್ಲಿ 242ನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆಯನ್ನು ಮಾಡಿದಂತಾಗಲಿದೆ.

300ಕ್ಕೂ ಕಡಿಮೆ ಪಂದ್ಯಗಳಲ್ಲಿ ಈ ಸಾಧನೆ

300ಕ್ಕೂ ಕಡಿಮೆ ಪಂದ್ಯಗಳಲ್ಲಿ ಈ ಸಾಧನೆ

300ಕ್ಕೂ ಕಡಿಮೆ ಇನ್ನಿಂಗ್ಸ್ ಬಳಸಿಕೊಂಡು ಈ ಸಾಧನೆ ಮಾಡಿದ ಏಕೈಗ ಕ್ರಿಕೆಟಿಗ ಎಂಬ ದಾಖಲೆಯೂ ವಿರಾಟ್ ಕೊಹ್ಲಿ ಪಾಲಾಗಲಿದೆ. ಕೊಹ್ಲಿಗೂ ಮುನ್ನ ಐವರು ಆಟಗಾರರು 12000 ರನ್ ಗಳ ಮೈಲಿಗಲ್ಲನ್ನು ತಲುಪಿದ್ದಾರೆ. ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್, ಕುಮಾರ್ ಸಂಗಕ್ಕರ, ಸನತ್ ಜಯಸೂರ್ಯ ಹಾಗೂ ಮಹೇಲ ಜಯವರ್ದನೆ ಈ ಸಾಧನೆಯನ್ನು ಮಾಡಿದ್ದಾರೆ.

ಮತ್ತೊಂದು ದಾಖಲೆಗೆ ಕೊಹ್ಲಿಗೆ ಅವಕಾಶ

ಮತ್ತೊಂದು ದಾಖಲೆಗೆ ಕೊಹ್ಲಿಗೆ ಅವಕಾಶ

ಇನ್ನು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಮತ್ತೊಂದು ದಾಖಲೆ ಬರೆಯಲು ವಿರಾಟ್ ಕೊಹ್ಲಿಗೆ ಅವಕಾಶವಿದೆ. ಆಸ್ಟ್ರೇಲಿಯಾ ವಿರುದ್ಧ ಅತಿಹೆಚ್ಚಿನ ಶತಕ ಬಾರಿಸಿದ ಭಾರತೀಯನಾಗಿ ಸಚಿನ್ ತೆಂಡೂಲ್ಕರ್ ಜೊತೆ ಸ್ಥಾನ ಹಂಚಿಕೊಳ್ಳುವ ಅವಕಾಶ ಕೊಹ್ಲಿ ಮುಂದಿದೆ. ಒಂದು ಶತಕವನ್ನು ಬಾರಿಸಿದರೆ ಅದು ಆಸ್ಟ್ರೇಲಿಯಾ ವಿರುದ್ಧ 9ನೇ ಏಕದಿನ ಶತಕವಾಗಿರಲಿದೆ.

Story first published: Tuesday, December 1, 2020, 17:08 [IST]
Other articles published on Dec 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X