ತಂಡದ ಆಯ್ಕೆ ಬಗ್ಗೆ ಆಕ್ಷೇಪವೆತ್ತಿದ್ದ ಸ್ಟಾರ್ ವಾಹಿನಿಗೆ ಬಿಸಿಸಿಐ ಪ್ರತ್ಯುತ್ತರ

Virat Kohli absence in Asia cup causing loss to star broadcast house

ನವದೆಹಲಿ, ಸೆಪ್ಟೆಂಬರ್ 17: ವಿರಾಟ್ ಕೊಹ್ಲಿಯನ್ನು ಏಷ್ಯಾಕಪ್‌ಗೆ ಆಯ್ಕೆ ಮಾಡದಿರುವುದರ ಬಗ್ಗೆ ತಕರಾರು ತೆಗೆದಿದ್ದ ಸ್ಟಾರ್ ಪ್ರಸಾರ ಸಮೂಹಕ್ಕೆ ಬಿಸಿಸಿಐ ಉತ್ತರ ನೀಡಿದೆ.

ಆಟಗಾರರ ಆಯ್ಕೆ ವಿಷಯದಲ್ಲಿ ಖಾಸಗಿ ಸಂಸ್ಥೆಗಳು ಅಥವಾ ವ್ಯಕ್ತಿಗಳು ಬಿಸಿಸಿಐ ಮಂಡಳಿಗೆ ಸಲಹೆ ನೀಡುವಂತಿಲ್ಲ. ಅದು ಆಯ್ಕೆ ಸಮಿತಿಯ ನಿರ್ಧಾರ ಎಂದು ಬಿಸಿಸಿಐ ಹೇಳಿದೆ.

ಬಿಸಿಸಿಐ-ಸ್ಟಾರ್ ವಾಹಿನಿ ಜಟಾಪಟಿಗೆ ಕಾರಣವಾದ ಕೊಹ್ಲಿ ಅನುಪಸ್ಥಿತಿ

ವಿರಾಟ್ ಕೊಹ್ಲಿ ಅವರನ್ನು ಟೂರ್ನಿಯಿಂದ ಹೊರಗಿಟ್ಟ ವಿಷಯದ ಬಗ್ಗೆ ಬಿಸಿಸಿಐ ಮತ್ತು ಸ್ಟಾರ್ ಸಮೂಹದ ನಡುವೆ ಬಿಸಿ-ಬಿಸಿ ಚರ್ಚೆಗಳು ನಡೆದಿವೆ. ಸ್ಟಾರ್ ಸಮೂಹ ಬಿಸಿಸಿಐಗೆ ಖಾರವಾದ ಮಾತುಗಳನ್ನು ಆಡಿದೆ.

ಏಷ್ಯಾಕಪ್ ಆಯೋಜಿಸಿರುವ ಏಷ್ಯಾ ಕ್ರಿಕೆಟ್ ಕೌನ್ಸಿಲ್‌ಗೆ ಪತ್ರ ಬರೆದಿರುವ ಸ್ಟಾರ್ ಸಮೂಹ ತಮ್ಮ ಹಾಗೂ ಬಿಸಿಸಿಐ ನಡುವಿನ ಎಂಟು ವರ್ಷದ ಕರಾರಿನಲ್ಲಿ ಉಲ್ಲೇಖಿತವಾದ ಕೆಲವು ಷರತ್ತುಗಳನ್ನು ಬಿಸಿಸಿಐ ಪಾಲಿಸಿಲ್ಲ ಎಂದು ಅದು ದೂರಿದೆ.

ಆಗಸ್ಟ್‌ನಲ್ಲಿ ಬಿಸಿಸಿಐ ಭಾರತೀಯ ಆಟಗಾರರಿಗೆ ನೀಡಿದ ವೇತನವೆಷ್ಟು ಗೊತ್ತೇ?

ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ತಂಡದಲ್ಲಿಲ್ಲದ ಕಾರಣ ಜಾಹೀರಾತದಾರರು ನಿರಾಸಕ್ತಿ ತೋರುತ್ತಿದ್ದು. ಸ್ಟಾರ್ ಸಮೂಹಕ್ಕೆ ನಷ್ಟವಾಗುತ್ತಿದೆ. ಹಾಗಾಗಿಯೇ ಅದು ಬಿಸಿಸಿಐ ಮೇಲೆ ಹರಿಹಾಯ್ದಿದೆ. ಏಷ್ಯಾಕಪ್ ಆಯೋಜಿಸಿರುವ ಏಷ್ಯಾ ಕ್ರಿಕೆಟ್ ಕೌನ್ಸಿಲ್‌ಗೆ ಪತ್ರ ಬರೆದಿರುವ ಸ್ಟಾರ್ ಸಮೂಹ ತಮ್ಮ ಹಾಗೂ ಬಿಸಿಸಿಐ ನಡುವಿನ ಎಂಟು ವರ್ಷದ ಕರಾರಿನಲ್ಲಿ ಉಲ್ಲೇಖಿತವಾದ ಕೆಲವು ಷರತ್ತುಗಳನ್ನು ಬಿಸಿಸಿಐ ಪಾಲಿಸಿಲ್ಲ ಎಂದು ಅದು ದೂರಿದೆ.

ಸ್ಟಾರ್ ವಾಹಿನಿಯ ಪ್ರಕಾರ ಕೊಹ್ಲಿ ಇಲ್ಲದ ಕಾರಣ ಶೇ.50 ಜಾಹಿರಾತು ಇಳಿಮುಖವಾಗಿದ್ದು, ದರಗಳು ಕೂಡ ಕಡಿಮೆ ಆಗಿವೆ. ಅಲ್ಲದೆ ಕೊಹ್ಲಿ ಬ್ಯಾಟಿಂಗ್ ಸಮಯದಲ್ಲಿ ಇರುವ ವೀಕ್ಷಕರು ಕೊಹ್ಲಿ ಇಲ್ಲದಾಗ ಇರುವುದಿಲ್ಲ ಹೇಳಿದೆ. ಕೊಹ್ಲಿ ತಂಡದಲ್ಲಿ ಇಲ್ಲದ್ದು ಕ್ರೀಡಾ ಪ್ರೇಮಿಗಳಿಗೆ ಬೇಸರತರುವ ಜೊತೆಗೆ ಮಾರುಕಟ್ಟೆಗೆ ಹೊಡೆತ ನೀಡಿದೆ.

For Quick Alerts
ALLOW NOTIFICATIONS
For Daily Alerts

    ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

    Story first published: Monday, September 17, 2018, 12:09 [IST]
    Other articles published on Sep 17, 2018
    POLLS

    myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ

    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more