Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೃನಾಲ್‌ಗೆ ಚಾಲೆಂಜ್ ಮಾಡಿದ್ದ ಹಾರ್ದಿಕ್‌ಗೆ ಸವಾಲೆಸೆದ ಕೊಹ್ಲಿ: ವೀಡಿಯೊ

Virat Kohli aces Hardik Pandya’s fly push-ups

ನವದೆಹಲಿ, ಜುಲೈ 3: ಟೀಮ್ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ತನ್ನ ಅಣ್ಣ ಕೃನಾಲ್ ಪಾಂಡ್ಯಗೆ ಒಂದು ಸವಾಲೆಸಿದಿದ್ದರು. ಫಿಟ್ನೆಸ್ ವರ್ಕೌಟ್‌ಗೆ ಸಂಬಂಧಿಸಿದ ಸವಾಲು ಇದಾಗಿತ್ತು. ಈಗ ಹಾರ್ದಿಕ್ ಪಾಂಡ್ಯಗೆ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಇನ್ನು ಕೊಂಚ ಕಷ್ಟದ ಸವಾಲೆಸೆದಿದ್ದಾರೆ.

ಜೂನ್ 20ರಂದು ಹಾರ್ದಿಕ್ ಪಾಂಡ್ಯ ತಾನು ಫ್ಲೈಯಿಂದ ಪುಶ್‌ಅಪ್ಸ್ ಮಾಡಿರುವ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಜೊತೆಗೆ 'ಸ್ಟ್ರಾಂಗ್ ಆಗಿದ್ದೇನೆ. ಫಿಟ್ ಆಗಿದ್ದೇನೆ. ಇನ್ನೂ ಫಿಟ್ನೆಸ್ ನಿರ್ಮಾಣ ಹಂತದಲ್ಲಿದೆ. ಅಣ್ಣ ಕೃನಾಲ್ ಪಾಂಡ್ಯ ನಿನಗೆ ಚಾಲೆಂಜ್ ಮಾಡುತ್ತಿದ್ದೇನೆ. ನೀನೆಷ್ಟು ಪುಶ್‌ಅಪ್ಸ್ ಮಾಡುತ್ತೀಯ ನೋಡೋಣ,' ಎಂದು ಬರೆದುಕೊಂಡಿದ್ದರು.

ಪಾಂಡ್ಯ ಪ್ರಯತ್ನವನ್ನು ಹೊಗಳಿರುವ ವಿರಾಟ್, ಈ ಬಾರಿ ಹಾರ್ದಿಕ್ ಪಾಂಡ್ಯಗೆ ಇನ್ನೂ ಸ್ವಲ್ಪ ಕಷ್ಟದ ಚಾಲೆಂಜ್ ಮಾಡಿದ್ದಾರೆ. ಇನ್‌ಸ್ಟಾಗ್ರಾಮ್ ವೀಡಿಯೊ ಶೇರ್ ಮಾಡಿರುವ ಕೊಹ್ಲಿ, ಫ್ಲೈಯಿಂಗ್ ಪುಶ್‌ಅಪ್ಸ್ ಜೊತೆಗೆ ಕ್ಲ್ಯಾಪ್ ಬಾರಿಸುವ ಚಾಲೆಂಜನ್ನು ಹಾರ್ದಿಕ್‌ನತ್ತ ಎಸೆದಿದ್ದಾರೆ.

ಕೊಹ್ಲಿ ಶೇರ್ ಮಾಡಿರುವ ವೀಡಿಯೋ ಜೊತೆಗೆ, 'ಹೇಯ್ ಹಾರ್ದಿಕ್ ಪಾಂಡ್ಯ. ನಿನ್ನ ಫ್ಲೈಯಿಂಗ್ ಪುಶ್‌ಅಪ್ಸ್ ಪ್ರಯತ್ನ ಇಷ್ಟವಾಯಿತು. ಇಲ್ಲಿ ಫ್ಲೈಯಿಂಗ್ ಪುಶ್‌ಅಪ್ಸ್‌ಗೆ ಕ್ಲ್ಯಾಪ್ (ಚಪ್ಪಾಳೆ) ಸೇರಿಸಿದ್ದೀನಿ' ಎಂದು ಸಾಲನ್ನು ಬರೆದುಕೊಂಡಿದ್ದಾರೆ. ಸದ್ಯ ಟೀಮ್ ಇಂಡಿಯಾ ಆಟಗಾರರು ಜೊತೆಯಾಗಿ ಮೈದಾನಕ್ಕಿಳಿದು ಅಭ್ಯಾಸ ನಡೆಸಿದ್ದು ಕಂಡು ಬಂದಿಲ್ಲ. ಆದರೆ ಕೆಲ ಆಟಗಾರರು ವೈಯಕ್ತಿಕವಾಗಿ ಅಭ್ಯಾಸ ಆರಂಭಿಸಿದ್ದಾರೆ.

Story first published: Friday, July 3, 2020, 13:37 [IST]
Other articles published on Jul 3, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+