For Quick Alerts
ALLOW NOTIFICATIONS  
For Daily Alerts
 

Virat Kohli-Naveen Ul Haq: ಪರಸ್ಪರ ದ್ವೇಷ ಮರೆತು ಒಂದಾದ ಕೊಹ್ಲಿ-ನವೀನ್; ಮೈದಾನದಲ್ಲೇ ತಬ್ಬಿಕೊಂಡ ಕ್ರಿಕೆಟಿಗರು

ಬುಧವಾರ, ಆಕ್ಟೋಬರ್ 11ರಂದು ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡದ ವಿರುದ್ಧ ಭಾರತ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಅಫ್ಘಾನಿಸ್ತಾನ ನೀಡಿದ್ದ 273 ರನ್‌ಗಳ ಸವಾಲಿನ ಮೊತ್ತದ ಗುರಿ ಬೆನ್ನಟ್ಟಿದ ಭಾರತ ರೋಹಿತ್ ಶರ್ಮಾ ಅವರ ಭರ್ಜರಿ ಶತಕ ಮತ್ತು ವಿರಾಟ್ ಕೊಹ್ಲಿ ಅರ್ಧಶತಕದ ನೆರವಿನಿಂದ ಕೇವಲ 35 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗೆಲುವಿನ ಕೇಕೆ ಹಾಕಿತು.

Virat Kohli and Naveen Ul Haq: Cricketers Who Set Aside Their On-Field Rivalry

ಇದೇ ವೇಳೆ ಭಾರತದ ವಿರಾಟ್ ಕೊಹ್ಲಿ ಮತ್ತು ಅಫ್ಘಾನಿಸ್ತಾನದ ನವೀನ್ ಉಲ್ ಹಕ್ ಪಂದ್ಯದ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು. ಮೈದಾನದಲ್ಲಿ ಮತ್ತೊಮ್ಮೆ ಇವರ ಕಾದಾಟವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಜಗತ್ತು ಕಾಯುತಲಿತ್ತು.

ಆದರೆ, ಭಾರತೀಯ ಕ್ರಿಕೆಟ್‌ನ ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿ ಮತ್ತು ಅಫ್ಘಾನಿಸ್ತಾನದ ಯುವ ವೇಗದ ಬೌಲರ್ ನವೀನ್-ಉಲ್-ಹಕ್ ಅವರು ಅಭಿಮಾನಿಗಳು ಮತ್ತು ಸಾಮಾಜಿಕ ಮಾಧ್ಯಮದ ಮೆಚ್ಚುಗೆ ಗೆಳಿಸುವ ಹೃದಯಸ್ಪರ್ಶಿ ಘಟನೆಗೆ ಕಾರಣರಾದರು. ಇದು 2023ರ ಐಸಿಸಿ ಏಕದಿನ ವಿಶ್ವಕಪ್‌ನ ಅನಿರೀಕ್ಷಿತ ಬೆಳವಣಿಗೆ ಎಂದೇ ಹೇಳಬಹುದು.

ವಿರಾಟ್ ಕೊಹ್ಲಿಯ ತವರಿನ ಅಂಗಳವು ಭಾರತ ಮತ್ತು ಅಫ್ಘಾನಿಸ್ತಾನ ಪಂದ್ಯದ ವೇಳೆ ಸುಂದರವಾದ ಸಂಧಾನದ ಕ್ಷಣಕ್ಕೆ ಸಾಕ್ಷಿಯಾಯಿತು. ಈ ಘಟನೆ ನಡೆಯುತ್ತಿರುವಾಗ ಗೌತಮ್ ಗಂಭೀರ್ ಅವರೇ ಹಿಂದಿಯಲ್ಲಿ ಕಾಮೆಂಟೇಟರಿ ಮಾಡುತ್ತಿರುವುದು ಕೇಳಿಬಂತು.

Virat Kohli and Naveen Ul Haq: Cricketers Who Set Aside Their On-Field Rivalry

ವಿರಾಟ್ ಕೊಹ್ಲಿ ಮತ್ತು ನವೀನ್-ಉಲ್-ಹಕ್ ಕೈ ಕುಲುಕುವುದು ಮತ್ತು ಒಂದು ಅಪ್ಪುಗೆಯು ಐಪಿಎಲ್‌ನ ದ್ವೇಷದ ಕಿಚ್ಚಿಗೆ ಅಂತ್ಯಹಾಡಿತು ಮತ್ತು ಮೈದಾನವು ರೋಮಾಂಚಕ ಸಮನ್ವಯಕ್ಕೆ ವೇದಿಕೆಯಾಯಿತು.

ಈ ರೀತಿಯ ಘಟನೆಯು ಇಬ್ಬರ ನಡುವಿನ ದ್ವೇಷಕ್ಕೆ ಪೂರ್ಣವಿರಾಮ ಇಡಲಾಗಿದೆ. 2023ರ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿರುವ ವಿರಾಟ್ ಕೊಹ್ಲಿ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಪರ ಆಡುತ್ತಿರುವ ನವೀನ್-ಉಲ್-ಹಕ್ ಲಕ್ನೋ ಕ್ರೀಡಾಂಗಣದಲ್ಲಿ ತೀವ್ರ ವಾಗ್ವಾದ ನಡೆಸಿದರು. ಈ ಜಗಳವು ಅತಿ ದೊಡ್ಡ ಘಟನೆಗಳಲ್ಲಿ ಒಂದಾಗಿದೆ.

ಆನಂತರ, ಇಬ್ಬರು ಕ್ರಿಕೆಟ್ ಮೈದಾನದಲ್ಲಿ ಮತ್ತೆ ಮುಖಾಮುಖಿಯಾಗಿರುವುದು ಇದೇ ಮೊದಲಾಗಿದೆ. "ಕೊಹ್ಲಿ ಕೊಹ್ಲಿ' ಘೋಷಣೆಗಳೊಂದಿಗೆ ಪ್ರೇಕ್ಷಕರಿಂದ ನವೀನ್ ಉಲ್ ಹಕ್ ಅವರನ್ನು ಗೇಲಿ ಮಾಡಲಾಯಿತು ಮತ್ತು ಇಬ್ಬರ ನಡುವೆ ಮತ್ತೊಂದು ತುರುಸಿನ ಸ್ಪರ್ಧೆಯನ್ನು ನಿರೀಕ್ಷಿಸಲಾಗಿತ್ತು.

ವಿರಾಟ್ ಕೊಹ್ಲಿಗೆ ನವೀನ್ ಉಲ್ ಹಕ್ ಅದ್ಭುತ ಬೌಲಿಂಗ್ ಮಾಡಿದರು. ಆದರೆ ಯಾವುದೇ ಅನಗತ್ಯ ವಿವಾದ ಮತ್ತು ಮಾತುಗಳು ಪರಸ್ಪರ ರವಾನೆಯಾಗಿದ್ದು ಎಲ್ಲಿಯೂ ಕಾಣಿಸಲಿಲ್ಲ.

ಪಂದ್ಯದ ನಡುವೆ ವಿರಾಟ್ ಕೊಹ್ಲಿ ಮತ್ತು ನವೀನ್ ಉಲ್ ಹಕ್ ಪರಸ್ಪರ ತಬ್ಬಿಕೊಂಡಾಗ ಪಂದ್ಯದ ಶಾಶ್ವತ ಚಿತ್ರಣವಾಗಿತ್ತು ಮತ್ತು ಘಟನೆಯ ಚಿತ್ರಗಳು ತಕ್ಷಣವೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದವು.

Story first published: Wednesday, October 11, 2023, 23:04 [IST]
Other articles published on Oct 11, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+