
ಕ್ರೀಡಾ ಲೋಕದಲ್ಲಿ ಅತ್ಯಂತ ಹೆಸರುವಾಸಿ ಹಾಗೂ ಅನೇಕರ ಹಾಟ್ ಫೇವರಿಟ್ ಜೋಡಿಯಾಗಿರುವ ವಿರಾಟ್ -ಅನುಷ್ಕಾ ದಂಪತಿಯು ಇತ್ತೀಚಿನ ದಿನಗಳಲ್ಲಿ ಮತ್ತಷ್ಟು ಸುದ್ದಿಯಲ್ಲಿದೆ. ಇತ್ತೀಚೆಗಷ್ಟೇ ಜಪಾನಿನ ಸಂಸ್ಥೆ ರಾಕುಟೆನ್ ನಡೆಸಿದ ಪ್ರಾಯೋಗಿಕ ಅಧ್ಯಯನದಲ್ಲಿ ಹಾಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಅವರನ್ನು ಅತ್ಯಂತ ಗೌರವಾನ್ವಿತ ಮತ್ತು ವಿಶ್ವಾಸಾರ್ಹ ಸೆಲೆಬ್ರಿಟಿ ದಂಪತಿ ಎಂದು ಗುರುತಿಸಲಾಗಿದೆ. ಇದರ ಜೊತೆಗೆ ವಿರುಷ್ಕಾ ದಂಪತಿಯು ಇದೀಗ ಮತ್ತೊಂದರಲ್ಲಿ ಸುದ್ದಿಯಾಗಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಅನುಷ್ಕಾ ಯುಎಇಯಲ್ಲಿಯೇ ಬಯೋ-ಬಬಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದೊಂದಿಗೆ ಇದ್ದಾರೆ. ಗರ್ಭಿಣಿ ಅನುಷ್ಕಾಳನ್ನು ವಿರಾಟ್ ತುಂಬಾ ಜಾಗರೂಕತೆಯಿಂದ, ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಅನುಷ್ಕಾಳ ಬಗ್ಗೆ ವಿರಾಟ್ ಎಷ್ಟು ಮುತುವರ್ಜಿ ವಹಿಸುತ್ತಾರೆ ಎಂಬುದಕ್ಕೆ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧದ ಆರ್‌ಸಿಬಿ ಪಂದ್ಯದ ಸಮಯದಲ್ಲಿ ಇದು ಮತ್ತೊಮ್ಮೆ ಸಾಭೀತಾಗಿದೆ.
ಅಕ್ಟೋಬರ್ 25ರಂದು ಭಾನುವಾರ ನಡೆದ ಆರ್‌ಸಿಬಿ vs ಸಿಎಸ್‌ಕೆ ಪಂದ್ಯದಲ್ಲಿ ವಿರಾಟ್ ಕೊಹ್ಲಿ-ಅನುಷ್ಕಾರ ವೀಡಿಯೋ ಇದೀಗ ತಡವಾಗಿ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ಸುದ್ದಿಯಾಗಿದೆ. ಆ ವಿಚಾರ ಏನಪ್ಪಾ ಅಂದ್ರೆ, ಕೊಹ್ಲಿ ಸಿಎಸ್‌ಕೆ ವಿರುದ್ಧದ ಪಂದ್ಯದ ವೇಳೆ ಅನುಷ್ಕಾ ಅವರನ್ನು ಪಂದ್ಯದ ಸಮಯದಲ್ಲಿ ಏನಾದರೂ ತಿಂದಿದ್ದೀರಾ? ಇಲ್ಲವೇ ಎಂದು ಕೇಳುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಬಾಲಿವುಡ್ ನಟಿ ಕೂಡ ಎಲ್ಲಾ ಪರ್ಫೆಕ್ಟ್ ಆಗಿದೆ ಅನ್ನೋ ರೀತಿಯಲ್ಲಿ ಸನ್ನೆ ಮಾಡಿದ್ದಾರೆ. ಇವರ ನಡುವಿನ ಮುದ್ದಾದ ಸನ್ನೆಗಳ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಶಂಸೆಗೆ ಪಾತ್ರವಾಗಿದೆ.
View this post on InstagramA post shared by MUSIC & MASTHI (@music__and__masthi) on
ಗೋ ಗ್ರೀನ್ ಪಂದ್ಯವಾದ ಇದರಲ್ಲಿ ಆರ್‌ಸಿಬಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಎಂಟು ವಿಕೆಟ್‌ಗಳ ಸೋಲನ್ನ ಕಂಡಿತು. ನಂತರದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧವೂ ಕೊಹ್ಲಿ ಪಡೆ ಮುಗ್ಗರಿಸಿದೆ.