'ಮಂಕಡೆಡ್'ನಿಂದ ಕೊಹ್ಲಿ ತಪ್ಪಿಸಿಕೊಂಡ ಗಮ್ಮತ್ತಿನ ವಿಡಿಯೋ ನೋಡಿ

ಕೋಲ್ಕತ್ತಾ, ಏಪ್ರಿಲ್ 20: ಈ ಬಾರಿಯ ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಆರ್ ಅಶ್ವಿನ್, ರಾಜಸ್ಥಾನ್ ರಾಯಲ್ಸ್ ಆರಂಭಿಕ ಆಟಗಾರ ಜೋಸ್ ಬಟ್ಲರನ್ನು ಮಂಕಡೆಡ್ ರೀತಿಯಲ್ಲಿ ಔಟ್ ಮಾಡಿದ ಬಳಿಕ ಹೆಚ್ಚಿನ ಪಂದ್ಯಗಳ ವೇಳೆ 'ಮಂಕಡ್' ವಿಚಾರ ಬಂದು-ಹೋಗುತ್ತಿದೆ. ವಿರಾಟ್ ಕೊಹ್ಲಿಯೂ ಮಂಕಡೆಡ್‌ನಿಂದ ತಪ್ಪಿಸಿಕೊಂಡ ದೃಶ್ಯ ಶುಕ್ರವಾರದ (ಏಪ್ರಿಲ್ 19) ಐಪಿಎಲ್ ಪಂದ್ಯದ ವೇಳೆ ಕಾಣಸಿಕ್ಕಿತು.
ಶುಕ್ರವಾರ ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆದ ಕೋಲ್ಕತ್ತ ನೈಟ್ ರೈಡರ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್ 35ನೇ ಪಂದ್ಯದಲ್ಲಿ ಆರ್‌ಸಿಬಿ ಇನ್ನಿಂಗ್ಸ್ ನಲ್ಲಿ ಕೊಹ್ಲಿ ತಮಾಷೆಯ ರೀತಿಯಲ್ಲಿ ಮಂಕಡೆಡ್ ನಿಂತ ತಪ್ಪಿಸಿಕೊಂಡಿದ್ದರು.
17.5ನೇ ಓವರ್ ವೇಳೆ ಸ್ಟ್ರೈಕ್‌ನಲ್ಲಿ ಮಾರ್ಕಸ್ ಸ್ಟೋಯ್ನಿಸ್-ನಾನ್ ಸ್ಟ್ರೈಕ್‌ನಲ್ಲಿ ವಿರಾಟ್ ಕೊಹ್ಲಿಯಿದ್ದರು. 17.6ನೇ ಓವರ್ ಎಸೆಯಲು ಮುಂದಾದ ಕೆಕೆಆರ್ ಆಲ್ ರೈಂಡರ್ ಸುನೀಲ್ ನರೇನ್ ಚೆಂಡು ಎಸೆಯದೆ ಅರ್ಧಕ್ಕೆ ನಿಂತರು. ಆಗ ಕೊಹ್ಲಿ ತಮಾಷೆ ರೀತಿಯಲ್ಲಿ ಕ್ರೀಸ್ ಬಿಟ್ಟುಕೊಡದೆ ಅಲ್ಲೇ ನಿಂತಿದ್ದರು (ಟ್ವಿಟರ್‌ನಲ್ಲಿ ವಿಡಿಯೋ ಲಿಂಕ್ ಇದೆ).
ನರೇನ್ ಅರ್ಧಕ್ಕೆ ನಿಂತಿದ್ದು 'ಮಂಕಡಿಂಗ್' ಎಚ್ಚರಿಕೆಗೋ ಅಥವಾ ಇನ್ನೇನಕ್ಕೋ ಗೊತ್ತಿಲ್ಲ. ಆದ್ರೆ ಕೊಹ್ಲಿ ಮಾತ್ರ ಚಾಲಾಕಿತನ ಮೆರೆದಿದ್ದು ತಮಾಷೆಯಾಗಿ ಕಾಣಿಸಿತ್ತು. ಈ ಸಂದರ್ಭ ಕೊಹ್ಲಿ-ನರೇನ್ ಇಬ್ಬರ ಮುಖದಲ್ಲೂ ನಗು ಮೂಡಿದ್ದನ್ನೂ ಗಮನಿಸಬಹುದು. ಪಂದ್ಯದಲ್ಲಿ ಆರ್‌ಸಿಬಿ 10 ರನ್ ಗೆಲುವನ್ನಾಚರಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications