ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ ದಾಖಲೆ: 1000ದ ಸರದಾರನಾದ ಟೀಮ್ ಇಂಡಿಯಾ ನಾಯಕ

ಅತಿ ವೇಗವಾಗಿ T 20 ಯಲ್ಲಿ ದಾಖಲೆಯ ಸರದಾರನಾದ ವಿರಾಟ್ | T20 | VIRAT KOHLI | ONEINDIA KANNADA
Virat Kohli Becomes Fastest Captain To 1000 Runs In T20Is

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರತಿ ಪಂದ್ಯದಲ್ಲೂ ಒಂದಲ್ಲಾ ಒಂದು ದಾಖಲೆಗೆ ಪಾತ್ರರಾಗುತ್ತಲೇ ಇದ್ದಾರೆ. ಅದ್ಭುತ ಪ್ರದರ್ಶನ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ನಿನ್ನೆಯ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಾಯಕನಾಗಿ ವೇಗವಾಗಿ ಟಿ20ಯಲ್ಲಿ 1000 ರನ್ ಸಿಡಿಸಿದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಹರ್ಭಜನ್ ಸಿಂಗ್ ಮಿಮಿಕ್ರಿ ಮಾಡಿ ಕಾಲೆಳೆದ ವಿರಾಟ್ ಕೊಹ್ಲಿ: ವೀಡಿಯೋಹರ್ಭಜನ್ ಸಿಂಗ್ ಮಿಮಿಕ್ರಿ ಮಾಡಿ ಕಾಲೆಳೆದ ವಿರಾಟ್ ಕೊಹ್ಲಿ: ವೀಡಿಯೋ

ಈ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ಈ ದಾಖಲೆಯನ್ನು ಮಾಡಲು 25 ರನ್ ಗಳ ಅವಶ್ಯಕತೆಯಿತ್ತು. ವಿರಾಟ್ ಕೊಹ್ಲಿ ಹೊರತುಪಡಿಸಿ ಮಹೇಂದ್ರ ಸಿಂಗ್ ಧೋನಿ ಮಾತ್ರವೇ ಈ ದಾಖಲೆಯನ್ನು ಮಾಡಿರುವ ಮತ್ತೋರ್ವ ಟೀಮ್ ಇಂಡಿಯಾ ಆಟಗಾರನಾಗಿದ್ದಾರೆ. ಧೋನಿ 62 ಪಂದ್ಯಗಳಿಂದ 1112ರನ್ ಗಳಿಸಿದ್ದಾರೆ. ಯಕನಾಗಿ ವಿರಾಟ್ ಕೊಹ್ಲಿ ಈ ದಾಖಲೆಯನ್ನು ಮಾಡಲು ತೆಗೆದುಕೊಂಡಿದ್ದು 30 ಇನ್ನಿಂಗ್ಸ್‌ಗಳನ್ನು ಮಾತ್ರ. ಒಟ್ಟಾರೆಯಾಗಿ ಈ ಸಾಧನೆಯನ್ನು ಕೇವಲ 6 ಆಟಗಾರರಷ್ಟೇ ಮಾಡಿದ್ದಾರೆ.

ನಿನ್ನೆಯ ಪಂದ್ಯದಲ್ಲಿ ಒಂದು ರನ್ ಗಳಿಸುವ ಮೂಲಕ ಮತ್ತೊಂದು ಮಹತ್ವದ ದಾಖಲೆಯನ್ನು ವಿರಾಟ್ ಕೊಹ್ಲಿ ತಮ್ಮ ಹೆಸರಿಗೆ ಬರೆಸಿಕೊಂಡಿದ್ದರು. ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ರೋಹಿತ್‌ ಶರ್ಮಾ ಹೊಂದಿದ್ದರು. ಇದನ್ನು ಮೀರಿಸಲು ವಿರಾಟ್ ಕೊಹ್ಲಿಗೆ ಕೇವಲ ಒಂದು ರನ್ ಅವಶ್ಯಕತೆಯಿತ್ತು. ನಿನ್ನೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಇದನ್ನು ಮೆಟ್ಟಿ ನಿಂತಿದ್ದಾರೆ.

ರೋಹಿತ್ ಶರ್ಮಾ ಹಿಂದಿಕ್ಕಿ ವಿಶ್ವದಾಖಲೆ ಬರೆದ ನಾಯಕ ವಿರಾಟ್ ಕೊಹ್ಲಿ!ರೋಹಿತ್ ಶರ್ಮಾ ಹಿಂದಿಕ್ಕಿ ವಿಶ್ವದಾಖಲೆ ಬರೆದ ನಾಯಕ ವಿರಾಟ್ ಕೊಹ್ಲಿ!

ಶ್ರೀಲಂಕಾ ವಿರುದ್ಧ ಎರಡನೇ ಪಂದ್ಯವನ್ನು ಟೀಮ್ ಇಂಡಿಯಾ ಗೆದ್ದು 1-0 ಅಂತರದಿಂದ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ವಿರಾಟ್ ಕೊಹ್ಲಿ ನಿನ್ನೆಯ ಪಂದ್ಯದಲ್ಲಿ 17ಎಸೆತಗಳಿಂದ 30 ರನ್ ಗಳಿಸಿದ್ದರು. ಆರಂಭಿಕ ಆಟಗಾರ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಉತ್ತಮ ಆಟ ಪ್ರದರ್ಶಿಸುವ ಮೂಲಕ ತಂಡ ಭರ್ಜರಿಯಾಗಿ ಗೆಲ್ಲಲು ಕಾರಣವಾಗಿದ್ದರು.

Story first published: Wednesday, January 8, 2020, 14:28 [IST]
Other articles published on Jan 8, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X