ಕ್ರಿಕೆಟ್‌ಗೆ ಹೊರತಾಗಿ ವಿಶೇಷ ದಾಖಲೆ ನಿರ್ಮಿಸಿದ ವಿರಾಟ್ ಕೊಹ್ಲಿ!

ನವದೆಹಲಿ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ರಂಗದಲ್ಲಿ ಸಾಲು ಸಾಲು ದಾಖಲೆಗಳನ್ನು ನಿರ್ಮಿಸುತ್ತಿರುವುದು ನಿಮಗೆಲ್ಲರಿಗೂ ಗೊತ್ತೇಯಿದೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿರುವ ಶತಕದ ಶತಕ ದಾಖಲೆ ಮುರಿಯಬಲ್ಲ ಒಬ್ಬನೇ ಒಬ್ಬ ಬ್ಯಾಟ್ಸ್‌ಮನ್ ಇದ್ದರೆ ಅದು ವಿರಾಟ್ ಕೊಹ್ಲಿ ಎಂದು ಕ್ರಿಕೆಟ್ ಜಗತ್ತು ಮಾತನಾಡಿಕೊಳ್ಳುತ್ತಿದೆ. ಕ್ರಿಕೆಟ್ ಜಗತ್ತಿನ ದಾಖಲೆಗಳ ಮಧ್ಯೆ ಕೊಹ್ಲಿ ಇನ್ನೊಂದು ಅಪರೂಪದ ದಾಖಲೆ ನಿರ್ಮಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ 150 ಮಿಲಿಯನ್ ಫಾಲೋವರ್ಸ್ ಪೂರೈಸಿದ ಅಪರೂಪದ ದಾಖಲೆ ಪಟ್ಟಿಗೆ ಕಿಂಗ್ ಕೊಹ್ಲಿ ಸೇರ್ಪಡೆಯಾಗಿದ್ದಾರೆ. ಏಷ್ಯಾದಲ್ಲೇ ಇಷ್ಟು ಇನ್‌ಸ್ಟಾಗ್ರಾ ಫಾಲೋವರ್ಸ್ ಯಾರಿಗೂ ಇಲ್ಲ. ಏಷ್ಯಾದಲ್ಲಿ 150+ ಮಿಲಿಯನ್ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಇರುವ ಮೊದಲ ಕ್ರಿಕೆಟಿಗನಾಗಿ, ಮೊದಲ ವ್ಯಕ್ತಿಯಾಗಿ ಕೊಹ್ಲಿ ದಾಖಲೆ ನಿರ್ಮಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿಗೆ ಸಿಕ್ಕಾಪಟ್ಟೆ ಫಾಲೋವರ್ಸ್
ಸಾಮಾಜಿಕ ಜಾಲತಾಣದಲ್ಲಿ ವಿರಾಟ್ ಕೊಹ್ಲಿ ಕ್ರಿಯಾಶೀಲರಾಗಿರುತ್ತಾರೆ. ಆಗು ಹೋಗುಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳನ್ನು ಹಾಕುತ್ತಿರುತ್ತಾರೆ. ಬೇಕಾಬಿಟ್ಟಿ ಪೋಸ್ಟ್‌ಗಳನ್ನು ಕೊಹ್ಲಿ ಹಾಕೋಲ್ಲ. ಆದರೆ ಪ್ರಮುಖ ಸಂಗತಿಗಳ ವೇಳೆ ಕೊಹ್ಲಿ ಪ್ರತಿಕ್ರಿಯಿಸುತ್ತಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಕೊಹ್ಲಿಗೆ ವಿಶ್ವದಗಲ ಅಭಿಮಾನಿಗಳಿದ್ದಾರೆ. ಈಗಾಗಿ ಟ್ವಿಟರ್, ಫೇಸ್ಬುಕ್, ಇನ್‌ಸ್ಟಾಗ್ರಾಮ್ ನಲ್ಲಿ ಕೊಹ್ಲಿಗೆ ಸಿಕ್ಕಾಪಟ್ಟೆ ಹಿಂಬಾಲಕರಿದ್ದಾರೆ. ವಿರಾಟ್ ಕೊಹ್ಲಿ 96 ಟೆಸ್ಟ್ ಪಂದ್ಯಗಳಲ್ಲಿ 7721 ರನ್, 27 ಶತಕಗಳು, 254 ಏಕದಿನ ಪಂದ್ಯಗಳಲ್ಲಿ 12169 ರನ್, 43 ಶತಕಗಳು, 89 ಟಿ20ಐ ಪಂದ್ಯಗಳಲ್ಲಿ 3159 ರನ್ ದಾಖಲೆ ಹೊಂದಿದ್ದಾರೆ. ಸದ್ಯ ಕೊಹ್ಲಿ ಭಾರತ vs ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಮುನ್ನಡೆಸುತ್ತಿದ್ದಾರೆ.

ಯಾಕೆ ವಿರಾಟ್‌ಗೆ ಇಷ್ಟು ಅಭಿಮಾನಿಗಳು?
ಕ್ರಿಕೆಟ್ ಪ್ರತಿಭಾನ್ವಿತರಲ್ಲಿ ವಿರಾಟ್ ಕೊಹ್ಲಿ ವಿಶ್ವ ಶ್ರೇಷ್ಠ ಆಟಗಾರ. ಏಕದಿನ, ಟೆಸ್ಟ್ ಮತ್ತು ಟಿ20ಐ ಈ ಮೂರೂ ಕ್ರಿಕೆಟ್ ಮಾದರಿಗಳಲ್ಲಿ ವಿಶ್ವ ನಂ.1 ಸ್ಥಾನಕ್ಕೆ ಏರಿದ್ದವರು. ಕೊಹ್ಲಿಯ ಬ್ಯಾಟಿಂಗ್ ನೋಡಲು ಹೆಚ್ಚಿನ ಕ್ರಿಕೆಟ್ ಪ್ರೇಮಿಗಳು ಇಷ್ಟಪಡುತ್ತಾರೆ. ಕೊಹ್ಲಿಯ ಬ್ಯಾಟಿಂಗ್ ದಾಖಲೆಗಳೂ ಗಮನಾರ್ಹವಾಗಿವೆ. ಎಲ್ಲದಕ್ಕಿಂತ ಹೆಚ್ಚಾಗಿ ಕೊಹ್ಲಿ ಕ್ರಿಕೆಟ್‌ಗೆ ಹೊರತಾಗಿಯೂ ಸ್ವಭಾವತಃ ಉತ್ತಮ ವ್ಯಕ್ತಿ. ಮೈದಾನದಲ್ಲಿ ಆಕ್ರಮಣಕಾರಿ ಸ್ವಭಾವ ತೋರುತ್ತಾರಾದರೂ ಮೈದಾನದಿಂದ ಹೊರಗೆ ಕೊಹ್ಲಿ ಎಲ್ಲರೊಂದಿಗೆ ಅಷ್ಟೇ ಸೌಜನ್ಯಯುತರಾಗಿ ಇರುತ್ತಾರೆ. ಮುಖ್ಯವಾಗಿ ಅಭಿಮಾನಿಗಳಿಗೆ ವಿಶೇಷ ಗೌರವ ನೀಡುತ್ತಾರೆ. ಕ್ರಿಕೆಟಿಗರನ್ನು ಭೇಟಿಯಾಗಲು ಅಭಿಮಾನಿಯೊಬ್ಬ ಕಾಯುತ್ತಿದ್ದಾಗ ಉಳಿದ ಆಟಗಾರರು ಆ ಅಭಿಮಾನಿಯನ್ನು ಕಡೆಗಣಿಸಿ ಮುಂದೆ ಸಾಗಿದರೂ ಕೊಹ್ಲಿ ತಾನೇ ಮುಂದೆ ಹೋಗಿ ಅಭಿಮಾನಿಯನ್ನು ಮಾತನಾಡಿಸಿರುವ ಅನೇಕ ಸಂದರ್ಭಗಳನ್ನು ನಾವು ನೋಡಿದ್ದೇವೆ. ಇದೇ ಕಾರಣಕ್ಕೆ ಕೊಹ್ಲಿಯನ್ನು ಪ್ರೀತಿಸುವವರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಆದ್ದರಿಂದಲೇ ಇನ್‌ಸ್ಟಾದಲ್ಲಿ ಕೊಹ್ಲಿ ದಾಖಲೆಯ ಸಂಖ್ಯೆಯ ಫಾಲೋವರ್ಸ್ ಹೊಂದಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ವಿರಾಟ್ ಕೊಹ್ಲಿ ಫಾಲೋವರ್ಸ್ ಹೆಚ್ಚಾಗಿದ್ದರ ಇಣುಕುನೋಟ
• ಕೊಹ್ಲಿ ಇನ್‌ಸ್ಟಾಗ್ರಾಮ್ ಆರಂಭಿಸಿದ್ದು - 23ನೇ ಜೂನ್ 2015
• 1 ಮಿಲಿಯನ್ ಫಾಲೋವರ್ಸ್ - 27ನೇ ಡಿಸೆಂಬರ್ 2015
• 50 ಮಿಲಿಯನ್ ಫಾಲೋವರ್ಸ್ - 18ನೇ ಫೆಬ್ರವರಿ 2020
• 100 ಮಿಲಿಯನ್ ಫಾಲೋವರ್ಸ್ - 3ನೇ ಮಾರ್ಚ್ 2021
• 150 ಮಿಲಿಯನ್ ಫಾಲೋವರ್ಸ್ - 3ನೇ ಸೆಪ್ಟೆಂಬರ್ 2021
• ಕೊನೆಯ 100 ಮಿಲಿಯನ್ ಅನುಯಾಯಿಗಳು - 562 ದಿನಗಳಲ್ಲಿ
• ಕೊನೆಯ 50 ಮಿಲಿಯನ್ ಅನುಯಾಯಿಗಳು - 187 ದಿನಗಳಲ್ಲಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications