'ಒತ್ತಡದ ಸಂದರ್ಭದಲ್ಲಿ ಸಚಿನ್ ಗಿಂತ ಕೊಹ್ಲಿ ಶ್ರೇಷ್ಠ ಬ್ಯಾಟ್ಸ್ ಮನ್'

By Mahesh

ನವದೆಹಲಿ, ಜೂನ್ 15: ಟೀಂ ಇಂಡಿಯಾದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ನೋಡಲು ಆನಂದವಾಗುತ್ತದೆ. ಒತ್ತಡ ಸಂದರ್ಭದಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಗಿಂತ ಹೆಚ್ಚಿನ ಸಮರ್ಥವಾಗಿ ಕೊಹ್ಲಿ ಆಡಬಲ್ಲರು ಎಂದು ಪಾಕಿಸ್ತಾನ ಮಾಜಿ ನಾಯಕ ಇಮ್ರಾನ್ ಖಾನ್ ಅವರು ಹಾಡಿ ಹೊಗಳಿದ್ದಾರೆ.

ಕೊಹ್ಲಿ ಎಂದು ಆಧುನಿಕ ರನ್ ಮಷಿನ್ ಎಂದು ಮಾಜಿ ಕ್ರಿಕೆಟರ್ ಗಳು ಕರೆಯುತ್ತಿರುವ ಬೆನ್ನಲ್ಲೇ ಕೊಹ್ಲಿ ಅವರನ್ನು ಸಚಿನ್ ತೆಂಡೂಲ್ಕರ್ ಜೊತೆ ಹೋಲಿಕೆ ಮಾಡಿ ಹೇಳಿಕೆ ನೀಡುತ್ತಿರುವವರ ಸಾಲಿಗೆ ಇಮ್ರಾನ್ ಖಾನ್ ಹೊಸದಾಗಿ ಸೇರ್ಪಡೆಯಾಗಿದ್ದಾರೆ.

Virat Kohli plays better than Sachin Tendulkar under pressure situations: Imran Khan

ಎಂಬತ್ತರ ದಶಕದಲ್ಲಿ ವಿವಿಯನ್ ರಿಚರ್ಡ್ಸ್, ನಂತರ ಬ್ರಿಯಾನ್ ಲಾರಾ ಹಾಗೂ ಸಚಿನ್ ತೆಂಡೂಲ್ಕರ್ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ವಿರಾಟ್ ಇವರೆಲ್ಲರಿಗಿಂತ ಭಿನ್ನವಾಗಿದ್ದು, ಕ್ರಿಕೆಟ್​ನ ಎಲ್ಲಾ ಹೊಡೆತಗಳನ್ನು ಹೊಂದಿದ್ದಾರೆ ಎಂದು ಹೊಗಳಿದ್ದಾರೆ.

1992ರಲ್ಲಿ ಪಾಕಿಸ್ತಾನಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟ ಇಮ್ರಾನ್ ಖಾನ್ ಅವರು ಕೊಹ್ಲಿ ಅವರ ಉಗ್ರ ಪ್ರತಾಪಿ ಮನೋಭಾವವನ್ನು ಮೆಚ್ಚುತ್ತಾ, ಪ್ರತಿಭೆ ಹಾಗೂ ತಾಂತ್ರಿಕತೆ ಜೊತೆಗೆ ತಂಡವನ್ನು ಮುನ್ನಡೆಸುವ ರೀತಿ ಅನನ್ಯ, ಕೊಹ್ಲಿ ವಿಕೆಟ್ ಪಡೆಯುವುದು ಎದುರಾಳಿ ತಂಡಕ್ಕೆ ಕಷ್ಟವೇ ಸರಿ ಎಂದಿದ್ದಾರೆ.

ಸಚಿನ್ ತಾಳ್ಮೆಯ ಆಟಕ್ಕೆ ಹೆಚ್ಚು ಗಮನ ನೀಡುತ್ತಿದ್ದರು. ಆದರೆ, ಕೊಹ್ಲಿ ಅಗ್ರೆಸಿವ್ ಆಗಿ ಆಡುತ್ತಾರೆ. ಇದು ಈ ಹಿಂದಿನ ಭಾರತೀಯ ಬ್ಯಾಟ್ಸ್ ಮನ್ ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿರಲಿಲ್ಲ ಎಂದು ಇಮ್ರಾನ್ ಹೇಳಿದ್ದಾರೆ.

ಐಪಿಎಲ್ 2016 ರಲ್ಲಿ ಕೊಹ್ಲಿ ಅವರು 973ರನ್ ಗಳಿಸಿದ್ದಲ್ಲದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಫೈನಲಿಗೆ ಕೊಂಡೊಯ್ದಿದ್ದು ಗಮನಾರ್ಹ (ಒನ್ಇಂಡಿಯಾ ಸುದ್ದಿ)

For Quick Alerts
Subscribe Now
For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Wednesday, June 15, 2016, 21:50 [IST]
Other articles published on Jun 15, 2016

Latest Videos

    + More
    POLLS
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more