Virat Kohli: ಪಂಜಾಬ್ ವಿರುದ್ಧ 3 ಬೌಂಡರಿ ಬಾರಿಸುತ್ತಿದ್ದಂತೆ ದಾಖಲೆ ಬರೆದ ವಿರಾಟ್
ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ನಡುವಣ ಐಪಿಎಲ್ ಫೈನಲ್ ಪಂದ್ಯಕ್ಕೆ ಅಹಮದಾಬಾದ್ ಮೈದಾನ ಸಾಕ್ಷಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ, ನಿಗದಿತ ಓವರ್‌ಗಳಲ್ಲಿ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕಿತು. ಈ ಪಂದ್ಯದಲ್ಲಿ ಆರ್‌ಸಿಬಿ ತಂಡದ ಸ್ಟಾರ್ ಆಟಗಾರರು ಬಿಗ್ ಇನಿಂಗ್ಸ್ ಕಟ್ಟದೇ ಇದ್ದರೂ ಸಹ ಸಮಯೋಚಿತ ಬ್ಯಾಟಿಂಗ್ ನಡೆಸಿದರು. ಈ ವೇಳೆ ವಿರಾಟ್ ಕೊಹ್ಲಿ ಕಲಾತ್ಮಕ ಆಟದ ಪ್ರದರ್ಶನ ನೀಡಿ ದಾಖಲೆಯ ಪುಟಕ್ಕೆ ಕೆಲಸ ನೀಡಿದರು.
ಮಂಗಳವಾರ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಫಿಲ್ ಸಾಲ್ಟ್ ಜೊತೆಗೂಡಿ ಇನಿಂಗ್ಸ್ ಆರಂಭಿಸಿದ ಸ್ಟಾರ್ ವಿರಾಟ್ ಕೊಹ್ಲಿ ಅಮೋಘ ಬ್ಯಾಟಿಂಗ್ ನಡೆಸಿದರು. ಆದರೆ ಇವರಿಗೆ ಯಾವೊಬ್ಬ ಬ್ಯಾಟರ್ ದೊಡ್ಡ ಆಟದ ಕಾಣಿಕೆ ನೀಡಲಿಲ್ಲ. ಇವರು ಕೊಂಚ ವಿಭಿನ್ನ ರೀತಿಯಲ್ಲಿ ಬ್ಯಾಟಿಂಗ್ ಮಾಡಿದರು. ಪಿಚ್ ಮರ್ಮ್ ಅರಿತು ಬ್ಯಾಟ್ ಮಾಡಿದ ವಿರಾಟ್ ಅಬ್ಬರಿಸಿದರು. 122ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಮಾಡಿದ ವಿರಾಟ್, 35 ಎಸೆತಗಳಲ್ಲಿ 43 ರನ್ ಬಾರಿಸಿದರು. ಈ ವೇಳೆ ಇವರ ಇನಿಂಗ್ಸ್‌ನಲ್ಲಿ ಮೂರು ಬೌಂಡರಿಗಳು ಮೂಡಿ ಬಂದುವು.

ವಿರಾಟ್ ಕೊಹ್ಲಿ ಈ ಮೂರು ಬೌಂಡರಿಗಳ ನೆರವಿನಿಂದ ಐಪಿಎಲ್ ಮತ್ತೊಂದು ದಾಖಲೆಯನ್ನು ನಿರ್ಮಿಸಿದರು. ಈಗಾಗಲೇ ಐಪಿಎಲ್‌ನಲ್ಲಿ ಹಲವು ದಾಖಲೆಗಳಿಗೆ ತಮ್ಮ ಹೆಸರನ್ನು ನಮೂದಿಸಿರುವ ವಿರಾಟ್, ಐಪಿಎಲ್ ಫೈನಲ್‌ನಲ್ಲಿ ಮತ್ತೊಂದು ದಾಖಲೆಯ ನಿರ್ಮಿಸಿದರು.
ಐಪಿಎಲ್‌ನಲ್ಲಿ ವಿರಾಟ್ ದಾಖಲೆ
ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಅತಿ ಹೆಚ್ಚು ಬೌಂಡರಿ ಬಾರಿಸಿದ ದಾಖಲೆಯನ್ನು ನಿರ್ಮಿಸಿದರು. ವಿರಾಟ್ ಕೊಹ್ಲಿ 267 ಇನಿಂಗ್ಸ್‌ಗಳಲ್ಲಿ 771 ಬೌಂಡರಿಗಳನ್ನು ಬಾರಿಸಿದರು. ಈ ಮೂಲಕ ಇವರು ಶಿಖರ್ ಧವನ್ ಅವರ ದಾಖಲೆಯನ್ನು ಅಳಿಸಿ ಹಾಕಿದರು. ಈ ಪಂದ್ಯದಲ್ಲಿ ವಿರಾಟ್ ಒಂದೇ ಒಂದು ಬೌಂಡರಿ ಬಾರಿಸಿದರೂ, ಶಿಖರ್ ಧವನ್ ದಾಖಲೆ ಉಡೀಸ್ ಆಗ್ತಾ ಇತ್ತು. ಈ ಪಂದ್ಯದಲ್ಲಿ ವಿರಾಟ್ ಮೂರು ಬೌಂಡರಿ ಬಾರಿಸಿ ಅಬ್ಬರಿಸಿದರು. ಈ ಮೂಲಕ ಐಪಿಎಲ್‌ನಲ್ಲಿ ಅತಿ ಹೆಚ್ಚು ಬೌಂಡರಿ ಬಾರಿಸಿದ ದಾಖಲೆಯನ್ನು ಬರೆದರು.
ಐಪಿಎಲ್‌ನಲ್ಲಿ ಅತಿ ಹೆಚ್ಚು ಬೌಂಡರಿ ಬಾರಿಸಿದ ಬ್ಯಾಟರ್ಸ್
ವಿರಾಟ್ ಕೊಹ್ಲಿ, 267 ಪಂದ್ಯ, 771 ಬೌಂಡರಿ
ಶಿಖರ್ ಧವನ್, 222 ಪಂದ್ಯ, 768 ಬೌಂಡರಿ
ಡೇವಿಡ್ ವಾರ್ನರ್, 184 ಪಂದ್ಯ, 663 ಬೌಂಡರಿ
ರೋಹಿತ್ ಶರ್ಮಾ, 272 ಪಂದ್ಯ, 640 ಬೌಂಡರಿ
ಅಜಿಂಕ್ಯ ರಹಾನೆ, 198 ಪಂದ್ಯ, 514 ಬೌಂಡರಿ
ವಿರಾಟ್ ಮತ್ತೊಂದು ರೆಕಾರ್ಡ್
ಐಪಿಎಲ್ ಇತಿಹಾಸದಲ್ಲಿ ಮತ್ತೊಂದು ದಾಖಲೆಯನ್ನು ಬರೆದರು. ವಿರಾಟ್ ಕೊಹ್ಲಿ ಒಂದೇ ತಂಡದ ವಿರುದ್ಧ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟರ್ ಆದರು. ಇವರು ಪಂಜಾಬ್ ವಿರುದ್ಧ 159 ರನ್ ಗಳಿಸಿದ್ದಾರೆ. ಈ ಮೊದಲು ಇವರು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 1146 ರನ್ ಬಾರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications