ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತ್ವರಿತಗತಿಯಲ್ಲಿ 25ನೇ ಶತಕ, ಬ್ರಾಡ್ಮನ್ ನಂತರ ಕೊಹ್ಲಿಯೇ ಕಿಂಗ್

ಡಾನ್ ಬ್ರಾಡ್ಮನ್ ನಂತರ ಕೊಹ್ಕಿಯೆ Don..! | Oneindia Kannada
India vs Australia, 2nd Test: Virat Kohli breaks many of records en route to remarkable 25th Test century

ಪರ್ತ್, ಡಿಸೆಂಬರ್ 16: ಇಲ್ಲಿನ ಹೊಚ್ಚ ಹೊಸ ಗ್ರೀನ್ ಪಿಚ್ ನಲ್ಲಿ ​ ನಡೆದಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ನಾಯಕ ವಿರಾಟ್ ಕೊಹ್ಲಿ ಶತಕ ಬಾರಿಸಿದ್ದಾರೆ.

ಇದು ಕೊಹ್ಲಿ ಅವರ ವೃತ್ತಿ ಬದುಕಿನ 25 ನೇ ಶತಕವಾಗಿದೆ. ಇದರೊಂದಿಗೆ ಟೆಸ್ಟ್​ ಕ್ರಿಕೆಟ್​ನಲ್ಲಿ ಅತ್ಯಂತ ಕಡಿಮೆ ಇನ್ನಿಂಗ್ಸ್ ಗಳಲ್ಲಿ ತ್ವರಿತವಾಗಿ 25ನೇ ಶತಕ ಬಾರಿಸಿದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ.

ದಾಖಲೆಯಲ್ಲಿ ತೆಂಡೂಲ್ಕರ್, ದ್ರಾವಿಡ್ ಸಾಲಿಗೆ ಸೇರಿಕೊಂಡ ವಿರಾಟ್ ಕೊಹ್ಲಿ! ದಾಖಲೆಯಲ್ಲಿ ತೆಂಡೂಲ್ಕರ್, ದ್ರಾವಿಡ್ ಸಾಲಿಗೆ ಸೇರಿಕೊಂಡ ವಿರಾಟ್ ಕೊಹ್ಲಿ!

ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಅವರು ಡಿಸೆಂಬರ್ 16ರಂದು 123ರನ್ ಗಳಿಸಿ, ಪ್ಯಾಟ್ ಕಮಿನ್ಸ್ ಗೆ ವಿಕೆಟ್ ಒಪ್ಪಿಸಿದ್ದಾರೆ. 127ಇನ್ನಿಂಗ್ಸ್ ಗಳಲ್ಲಿ 25ನೇ ಶತಕ ಬಾರಿಸಿದ್ದಾರೆ. ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ 326ರನ್ ಹಾಗೂ ಭಾರತ 283ರನ್ ಗಳಿಸಿದೆ.

'ಚಮತ್ಕಾರಿಕ ಕ್ಯಾಚ್‌'ನಿಂದ ಹ್ಯಾಂಡ್ಸ್‌ಕಾಂಬ್ ಪೆವಿಲಿಯನ್‌ಗಟ್ಟಿದ ವಿರಾಟ್ ಕೊಹ್ಲಿ! 'ಚಮತ್ಕಾರಿಕ ಕ್ಯಾಚ್‌'ನಿಂದ ಹ್ಯಾಂಡ್ಸ್‌ಕಾಂಬ್ ಪೆವಿಲಿಯನ್‌ಗಟ್ಟಿದ ವಿರಾಟ್ ಕೊಹ್ಲಿ!

ಸರ್​ ಡಾನ್​ ಬ್ರಾಡ್ಮನ್​ಅವರು 68ನೇ ಇನ್ನಿಂಗ್ಸ್​ನಲ್ಲಿ 25 ಟೆಸ್ಟ್​ ಶತಕಗಳನ್ನು ಬಾರಿಸಿ ಆಗ್ರಸ್ಥಾನದಲ್ಲಿದ್ದರೆ, ಕೊಹ್ಲಿ ತಮ್ಮ 127ನೇ ಟೆಸ್ಟ್​ ಇನ್ನಿಂಗ್ಸ್​​ನಲ್ಲಿ 25 ಶತಕಗಳನ್ನು ಬಾರಿಸಿ ಎರಡನೇ ಸ್ಥಾನದಲ್ಲಿದ್ದಾರೆ.

ತ್ವರಿತಗತಿಯಲ್ಲಿ 25ಟೆಸ್ಟ್ ಶತಕ

ತ್ವರಿತಗತಿಯಲ್ಲಿ 25ಟೆಸ್ಟ್ ಶತಕ

ಸರ್​ಡಾನ್​ಬ್ರಾಡ್ಮನ್​ಅವರು 68ನೇ ಇನ್ನಿಂಗ್ಸ್​ನಲ್ಲಿ 25 ಟೆಸ್ಟ್​ ಶತಕಗಳನ್ನು ಬಾರಿಸಿ ಆಗ್ರಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ತಮ್ಮ 127ನೇ ಟೆಸ್ಟ್​ಇನ್ನಿಂಗ್ಸ್​ನಲ್ಲಿ 25 ಶತಕಗಳನ್ನು ಬಾರಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಸಚಿನ್ ತೆಂಡೂಲ್ಕರ್ ಅವರು 130 ಇನ್ನಿಂಗ್ಸ್ ಗಳಲ್ಲಿ 25 ಶತಕ ಬಾರಿಸಿ ಮೂರನೇ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಸುನಿಲ್ ಗವಾಸ್ಕರ್ (138) ಹಾಗೂ ಮ್ಯಾಥ್ಯೂ ಹೇಡನ್ (139) ಇದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಶತಕ ದಾಖಲೆ

ಆಸ್ಟ್ರೇಲಿಯಾ ವಿರುದ್ಧ ಶತಕ ದಾಖಲೆ

2012ರಲ್ಲಿ ಕೊಹ್ಲಿ ಅವರು ಆಸ್ಟ್ರೇಲಿಯಾ ವಿರುದ್ಧ ಮೊಟ್ಟ ಮೊದಲ ಶತಕ ಬಾರಿಸಿದರು. ನಂತರದ ಪ್ರವಾಸದಲ್ಲಿ 5 ಶತಕ ಬಾರಿಸಿದ್ದಾರೆ. ಒಟ್ಟಾರೆ, ಸಚಿನ್ ತೆಂಡೂಲ್ಕರ್ ನಂತರ ಕೊಹ್ಲಿ ಅವರು 6 ಟೆಸ್ಟ್ ಶತಕ ಬಾರಿಸಿದ್ದಾರೆ. ವೆಸ್ಟ್ ಇಂಡೀಸ್ ನ ಕ್ಲೈವ್ ಲಾಡ್,ಇಂಗ್ಲೆಂಡಿನ ಅಲೆಸ್ಟರ್ ಕುಕ್ ಹಾಗೂ ಡೇವಿಡ್ ಗೋವರ್ ಅವರು ತಲಾ 5 ಬಾರಿ ಶತಕ ಗಳಿಸಿದ್ದಾರೆ.

ಎಲ್ಲಾ ರಾಷ್ಟ್ರಗಳ ವಿರುದ್ಧ ಶತಕ

ಎಲ್ಲಾ ರಾಷ್ಟ್ರಗಳ ವಿರುದ್ಧ ಶತಕ

ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಹಾಗೂ ಅಸ್ಟ್ರೇಲಿಯಾ ವಿರುದ್ಧ ಒಂದೇ ಕ್ರಿಕೆಟ್ ವರ್ಷದಲ್ಲಿ ಟೆಸ್ಟ್ ಶತಕ ಬಾರಿಸಿದ ಮೊದಲ ಏಷ್ಯನ್ ಕ್ರಿಕೆಟರ್ ವಿರಾಟ್ ಕೊಹ್ಲಿ.

ಪ್ರವಾಸದ ವೇಳೆ ನಾಯಕನೊಬ್ಬನಿಂದ ಹೆಚ್ಚು ಶತಕ:
4 : ಕ್ಲೈವ್ ಲ್ಯಾಂಡ್
4: ವಿರಾಟ್ ಕೊಹ್ಲಿ

ವರ್ಷದಲ್ಲಿ 11 ಶತಕ ಗಳಿಕೆ

ವರ್ಷದಲ್ಲಿ 11 ಶತಕ ಗಳಿಕೆ

ಕೊಹ್ಲಿ ಅವರು ಪರ್ತ್ ನಲ್ಲಿ 100 ರನ್ ಗಳಿಸಿದ್ದು, ಈ ವರ್ಷದಲ್ಲಿ ಒಟ್ಟು 11 ಶತಕ ಗಳಿಸಿದಂತಾಗಿದೆ. 2017ರಲ್ಲೂ 10ಕ್ಕಿಂತ ಅಧಿಕ ಶತಕವನ್ನು ಬಾರಿಸಿದ್ದರು. ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರು 2003ರಲ್ಲಿ 11ಶತಕ ಗಳಿಸಿದ್ದರು. 1998ರಲ್ಲಿ ಸಚಿನ್ ತೆಂಡೂಲ್ಕರ್ ಅವರು 12 ಶತಕ ಗಳಿಸಿದ್ದು ಇನ್ನು ದಾಖಲೆಯಾಗಿ ಉಳಿದಿದೆ.

ನಂ.4 ಕ್ರಮಾಂಕದಲ್ಲಿ ಆಡಿ ತ್ವರಿತಗತಿಯಲ್ಲಿ 7000ರನ್

ನಂ.4 ಕ್ರಮಾಂಕದಲ್ಲಿ ಆಡಿ ತ್ವರಿತಗತಿಯಲ್ಲಿ 7000ರನ್

ಟೆಸ್ಟ್ ಕ್ರಿಕೆಟ್ ನಲ್ಲಿ 4ನೇ ಕ್ರಮಾಂಕದಲ್ಲಿ ಆಡಿ ತ್ವರಿತಗತಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 7000ರನ್ ಗಳಿಕೆ ಪಟ್ಟಿಯಲ್ಲಿ ಕೊಹ್ಲಿ ಅಗ್ರಸ್ಥಾನಕ್ಕೇರಿದ್ದಾರೆ.
133 ಇನ್ನಿಂಗ್ಸ್ : ವಿರಾಟ್ ಕೊಹ್ಲಿ

146 : ಸಚಿನ್ ತೆಂಡೂಲ್ಕರ್
148 : ಮೊಹಮ್ಮದ್ ಯೂಸುಫ್

149 : ಜಾಕ್ವಸ್ ಕಾಲಿಸ್
159 : ಬ್ರಿಯಾನ್ ಲಾರಾ

25ನೇ ಶತಕ ನಂತರದ ದಾಖಲೆಗಳು

25ನೇ ಶತಕ ಬಾರಿಸಿದ ಬಳಿಕ ವಿರಾಟ್ ಕೊಹ್ಲಿ ಸಾಧಿಸಿದ ದಾಖಲೆಗಳತ್ತ ಒಂದು ನೋಟ

https://kannada.mykhel.com/cricket/virat-kohli-breaks-many-of-records-en-route-to-remarkable-25th-test-century-006990.html

Story first published: Tuesday, December 18, 2018, 11:51 [IST]
Other articles published on Dec 18, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X