For Quick Alerts
ALLOW NOTIFICATIONS  
For Daily Alerts
 

Virat Kohli: ವಿರಾಟ್ ಚೆನ್ನೈ ವಿರುದ್ಧ ಆರ್ಭಟ: ಇಲ್ಲಿದೆ ಕೊಹ್ಲಿ ನಿರ್ಮಿಸಿದ ದಾಖಲೆಗಳ ಪಟ್ಟಿ

ಆರ್‌ಸಿಬಿ ತಂಡದ ಬ್ಯಾಟಿಂಗ್ ಬೆನ್ನೆಲುಬು ಎಂದೇ ಖ್ಯಾತಿ ಪಡೆದಿರುವ ವಿರಾಟ್‌ ಕೊಹ್ಲಿ, 2025ರ ಐಪಿಎಲ್‌ನಲ್ಲಿ ತಮ್ಮ ಅಮೋಘ ಫಾರ್ಮ್‌ ಮುಂದುವರೆಸಿದ್ದಾರೆ. ಆರಂಭಿಕ ಪಂದ್ಯದಲ್ಲಿ ಬೆಂಗಳೂರಿನ ಎಂ ಚಿನಸ್ವಾಮಿ ಅಂಗಳದಲ್ಲಿ ರನ್‌ ಕಲೆ ಹಾಕುವಲ್ಲಿ ವಿಫಲರಾಗಿದ್ದ ವಿರಾಟ್‌, ಈಗ ಲಯ ಕಂಡು ಕಂಡಿದ್ದಾರೆ. ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿ ಹಲವು ದಾಖಲೆಗಳನ್ನು ಬರೆದಿದ್ದಾರೆ.

18ನೇ ಆವೃತ್ತಿಯ ಐಪಿಎಲ್‌ ಆರ್‌ಸಿಬಿ ಪರ ಆಡುತ್ತಿರುವ ವಿರಾಟ್‌ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಐಪಿಎಲ್‌ ಇತಿಹಾಸದಲ್ಲಿ 8ನೇ ಬಾರಿ 500ಕ್ಕೂ ಹೆಚ್ಚು ರನ್‌ ಕಲೆ ಹಾಕಿದ ಹಿರಿಮೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ವಿರಾಟ್‌ ಆರೆಂಜ್ ಕ್ಯಾಪ್‌ನ್ನು ತಮ್ಮ ತಲೆಯ ಮೇಲೆ ಇಟ್ಟುಕೊಂಡಿದ್ದಾರೆ. ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸಿ, ಪ್ರಸಕ್ತ ಐಪಿಎಲ್‌ನಲ್ಲಿ ಏಳನೇ ಅರ್ಧಶತಕ ಬಾರಿಸಿ ಮಿಂಚಿದರು.

Virat Kohli Breaks Multiple IPL Records with Blazing Knock Against Chennai Super Kings

ಶನಿವಾರ ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ವಿರಾಟ್‌ ತಮ್ಮ ನೈಜ್ಯ ಬ್ಯಾಟಿಂಗ್‌ಗೆ ವಿರುದ್ಧವಾಗಿ ಬ್ಯಾಟ್ ಮಾಡಿದರು. ಇವರು ತಮ್ಮ ಇನಿಂಗ್ಸ್‌ನಲ್ಲಿ 5 ಬೌಂಡರಿ, 5 ಸಿಕ್ಸರ್‌ ಸಿಡಿಸಿದರು. ವಿರಾಟ್ ಬಾರಿಸಿದ ಫ್ಲಿಕ್ ಶಾಟ್‌ಗೆ ಅಭಿಮಾನಿಗಳು ಫಿದಾ ಆದ್ರು. ವಿರಾಟ್‌ 33 ಎಸೆತಗಳಲ್ಲಿ 62 ರನ್‌ ಸಿಡಿಸಿ ಅಬ್ಬರಿಸಿದರು. ಈ ಮೂಲಕ ಹಲವು ದಾಖಲೆಗಳನ್ನು ಬಾರಿಸಿದರು.

1- 500ಕ್ಕೂ ಹೆಚ್ಚು ರನ್‌

ವಿರಾಟ್‌ ಕೊಹ್ಲಿ ಈ ಆವೃತ್ತಿಯ ಐಪಿಎಲ್‌ನಲ್ಲಿ 11 ಪಂದ್ಯಗಳಲ್ಲಿ ಬ್ಯಾಟ್ ಮಾಡಿ 63ರ ಸರಾಸರಿಯಲ್ಲಿ 505 ರನ್‌ ಸಿಡಿಸಿದ್ದಾರೆ. ಈ ಮೂಲಕ ಆರೆಂಜ್‌ ಕ್ಯಾಪ್‌ಗೆ ಅಧಿಪತಿಯಾದ್ರು.

2- ಒಂದೇ ತಂಡದ ವಿರುದ್ಧ ಹೆಚ್ಚು ರನ್‌

ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಅತಿ ಹೆಚ್ಚು ರನ್‌ ಕಾಲಿಹಾಕಿದ ಬ್ಯಾಟರ್‌ ಎಂಬ ಖ್ಯಾತಿ ವಿರಾಟ್ ಅವರ ಪಾಲಾಯಿತು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಐಪಿಎಲ್‌ನಲ್ಲಿ 1146 ರನ್ ಗಳಿಸಿದ್ದಾರೆ. ಈ ಮೂಲಕ ವಿರಾಟ್‌ ಡೇವಿಡ್‌ ವಾರ್ನರ್ ಅವರ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಡೇವಿಡ್ ವಾರ್ನರ್‌ ಪಂಜಾಬ್‌ ಕಿಂಗ್ಸ್‌ ವಿರುದ್ಧ ಒಟ್ಟು 1134 ರನ್ ಗಳಿಸಿದ್ದರು.

Virat Kohli Breaks Multiple IPL Records with Blazing Knock Against Chennai Super Kings

3- ಮೂರು ತಂಡಗಳ ವಿರುದ್ಧ 1100ಕ್ಕೂ ಹೆಚ್ಚು ರನ್‌

ವಿರಾಟ್‌ ಕೊಹ್ಲಿ ಐಪಿಎಲ್‌ನಲ್ಲಿ ಒಂದೇ ತಂಡದ ವಿರುದ್ಧ 1100ಕ್ಕೂ ಹೆಚ್ಚು ರನ್‌ ದಾಖಲೆಯ ಮಾಡಿದ್ದಾರೆ. ಈಗಾಗಲೇ ವಿರಾಟ್ ಕೊಹ್ಲಿ ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್‌ ಕಿಂಗ್ಸ್‌ ವಿರುದ್ಧ ಈ ಮೊದಲು ಈ ಸಾಧನೆ ಮಾಡಿದ್ದರು. ಈಗ ಚೆನ್ನೈ ಸೂಪರ್‌ ಕಿಂಗ್ಸ್ ವಿರುದ್ಧವೂ ಈ ಸಾಧನೆ ಮಾಡಿದ್ದಾರೆ.

4- ಆರ್‌ಸಿಬಿ ಪರ ಹೆಚ್ಚು ಸಿಕ್ಸರ್‌

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ದಾಖಲೆಯನ್ನು ವಿರಾಟ್ ಕೊಹ್ಲಿ ತಮ್ಮದಾಗಿಸಿಕೊಂಡಿದ್ದಾರೆ. ಇವರು ಟಿ20 ಮಾದರಿಯಲ್ಲಿ ಯಾವುದೇ ತಂಡಕ್ಕಾಗಿ 300 ಅಥವಾ ಅದಕ್ಕಿಂತ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಮೊದಲ ಆಟಗಾರ ಎಂಬ ಖ್ಯಾತಿ ತಮ್ಮದಾಗಿಸಿಕೊಂಡಿದ್ದಾರೆ.

ಟಿ20ಯಲ್ಲಿ ತಂಡವೊಂದಕ್ಕೆ ಅತಿ ಹೆಚ್ಚು ಸಿಕ್ಸರ್‌ಗಳು

301 - ವಿರಾಟ್ ಕೊಹ್ಲಿ, ಆರ್‌ಸಿಬಿ
263 - ಕ್ರಿಸ್ ಗೇಲ್, ಆರ್‌ಸಿಬಿ
262 - ರೋಹಿತ್ ಶರ್ಮಾ, ಮುಂಬೈ
258 - ಕೀರನ್ ಪೊಲಾರ್ಡ್, ಮುಂಬೈ
257 - ಎಂಎಸ್ ಧೋನಿ, ಸಿಎಸ್‌ಕೆ

5- ಒಂದೇ ಮೈದಾನದಲ್ಲಿ ಅತಿ ಹೆಚ್ಚು ಸಿಕ್ಸರ್‌

ವಿರಾಟ್ ಕೊಹ್ಲಿ ಒಂದೇ ಮೈದಾನದಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ವಿರಾಟ್‌ ಕೊಹ್ಲಿ ಎಂ ಚಿನ್ನಸ್ವಾಮಿ ಅಂಗಳದಲ್ಲಿ 154 ಸಿಕ್ಸರ್‌ ಬಾರಿಸಿದ ಹಿರಿಮೆ ಹೊಂದಿದ್ದಾರೆ. ಇದೇ ಅಂಗಳದಲ್ಲಿ ಕ್ರಿಸ್‌ ಗೇಲ್‌ 151 ಸಿಕ್ಸರ್ ಬಾರಿಸಿದ್ದರು.

Story first published: Saturday, May 3, 2025, 22:31 [IST]
Other articles published on May 3, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+