Virat Kohli: ಸಚಿನ್ ಮತ್ತೊಂದು ದಾಖಲೆ ಅಳಿಸಿದ ವಿರಾಟ್
ವಡೋದರಾ: ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ್ದಾರೆ. 7 ರನ್‌ಗಳಿಂದ ವಿರಾಟ್ ಮತ್ತೊಂದು ಶತಕವನ್ನು ಬಾರಿಸುವಲ್ಲಿ ವಂಚಿತರಾದರೂ ಸಹ ಹಲವು ದಾಖಲೆಗಳನ್ನು ಬರೆದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಅಮೋಘ ಫಾರ್ಮ್ ಮುಂದುವರಿಸಿದ ವಿರಾಟ್, ನೆರೆದ ಅಭಿಮಾನಿಗಳನ್ನು ರಂಜಿಸಿದರು.
ರೋಹಿತ್ ಶರ್ಮಾ ಔಟ್ ಆಗುತ್ತಿದ್ದಂತೆ ಕ್ರೀಸ್‌ಗೆ ಬಂದ ವಿರಾಟ್ ಕೊಹ್ಲಿ ಆರಂಭದಿಂದಲೇ ಲಯದಲ್ಲಿ ಇದ್ದಂತೆ ಕಂಡು ಬಂದರು. ಮೈದಾನಕ್ಕೆ ಇಳಿಯುತ್ತಲೇ ನ್ಯೂಜಿಲೆಂಡ್ ಬೌಲರ್‌ಗಳನ್ನು ಕಾಡಲು ಪ್ಲ್ಯಾನ್ ಮಾಡಿಕೊಂಡಿದ್ದರು. ಇವರು ಈ ಪಂದ್ಯದಲ್ಲಿ ತಮ್ಮ ಖಾತೆಯನ್ನು ಸಹ, ಬೌಂಡರಿ ಬಾರಿಸುವ ಮೂಲಕವೇ ಓಪನ್ ಮಾಡಿದರು. ಇಲ್ಲಿಂದ ವಿರಾಟ್ ಹಿಂತಿರೂಗಿ ನೋಡಲೇ ಇಲ್ಲ. ಈ ಪಂದ್ಯದಲ್ಲಿ ವಿರಾಟ್ ಯಾವ ಹಂತದಲ್ಲೂ ಕೆಟ್ಟ ಹೊಡೆತವನ್ನು ಬಾರಿಸಲಿಲ್ಲ.

ವಿರಾಟ್ ಈ ಪಂದ್ಯದಲ್ಲಿ ಹಲವು ದಾಖಲೆಗಳನ್ನು ಬರೆದರು. ಇವರು 91 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ಸಹಾಯದಿಂದ 93 ರನ್ ಸಿಡಿಸಿ ಔಟ್ ಆದರು. ಈ ಪಂದ್ಯದ 13ನೇ ಓವರ್‌ನ 4ನೇ ಎಸೆತದಲ್ಲಿ ಬೌಂಡರಿ ಬಾರಿಸುತ್ತಲೇ ವಿರಾಟ್ ಕೊಹ್ಲಿ ದೊಡ್ಡ ದಾಖಲೆ ಬರೆದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗವಾಗಿ 28 ಸಾವಿರ ರನ್ ಕಲೆ ಹಾಕಿದ ಹೆಗ್ಗಳಿಕೆಗೆ ಪಾತ್ರರಾದರು. ಈ ಮೂಲಕ ದಿಗ್ಗಜ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಅಳಿಸಿ ಹಾಕಿದರು.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗವಾಗಿ 28 ಸಾವಿರ ರನ್ ಬಾರಿಸಿದ ಆಟಗಾರರು
ವಿರಾಟ್ ಕೊಹ್ಲಿ, ಭಾರತ, 624 ಇನಿಂಗ್ಸ್
ಸಚಿನ್ ತೆಂಡೂಲ್ಕರ್, ಭಾರತ, 644 ಇನಿಂಗ್ಸ್
ಕುಮಾರ್ ಸಂಗಕ್ಕಾರ, ಶ್ರೀಲಂಕಾ, 666 ಇನಿಂಗ್ಸ್
ಭಾನುವಾರ ವಿರಾಟ್ ಕೊಹ್ಲಿ 93 ರನ್ ಬಾರಿಸುತ್ತಲೇ ಸಚಿನ್ ತೆಂಡೂಲ್ಕರ್ ಅವರ ಮತ್ತೊಂದು ದಾಖಲೆಯ ಸಮಕ್ಕೆ ನಿಂತಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಹೆಗ್ಗಳಿಕೆಯನ್ನು ಸಹ ವಿರಾಟ್ ತಮ್ಮದಾಗಿಸಿಕೊಂಡರು. ಸಚಿನ್ ತೆಂಡೂಲ್ಕರ್ ನ್ಯೂಜಿಲೆಂಡ್ ವಿರುದ್ಧ 42 ಪಂದ್ಯಗಳಲ್ಲಿ 1750 ರನ್ ಸೇರಿಸಿದ್ದರು. ವಿರಾಟ್ 34 ಪಂದ್ಯಗಳಲ್ಲಿ ಇಷ್ಟೇ ರನ್ ಕಲೆ ಹಾಕಿದ್ದಾರೆ.
ಸಂಗಾ ದಾಖಲೆ ಅಳಿಸಿದ ವಿರಾಟ್
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟರ್ ಪಟ್ಟಿಯಲ್ಲಿ ವಿರಾಟ್ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದರು. ಈ ಮೂಲಕ ವಿರಾಟ್, ಶ್ರೀಲಂಕಾದ ದಿಗ್ಗಜ ಆಟಗಾರ ಕುಮಾರ್ ಸಂಗಕ್ಕಾರ ಅವರ ದಾಖಲೆಯನ್ನು ಅಳಿಸಿ ಹಾಕಿದರು. ಸಂಗಾ 28,016 ರನ್ ಸಿಡಿಸಿದ್ದರು. ವಿರಾಟ್ 28,017 ರನ್ ಕಲೆ ಹಾಕಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳನ್ನು ಕಲೆ ಹಾಕಿದ ಹೆಗ್ಗಳಿಕೆ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದ್ದು, ಇವರು 34,357 ರನ್ ಕಲೆ ಹಾಕಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications