Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Virat Kohli: ರಾಂಚಿಯಲ್ಲಿ ವಿರಾಟ್ ಮಿಂಚು: ಇಲ್ಲಿದೆ ಚೇಸಿಂಗ್‌ ಮಾಸ್ಟಾರ್‌ ಬರೆದ ದಾಖಲೆಗಳ ಪಟ್ಟಿ

ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್‍‌ ವಿರಾಟ್‌ ಕೊಹ್ಲಿ, ಏಕದಿನ ಕ್ರಿಕೆಟ್‌ನಲ್ಲಿ ದೊಡ್ಡ ಇತಿಹಾಸ ನಿರ್ಮಿಸಿದ್ದಾರೆ. ಕ್ರಿಕೆಟ್‌ ಇತಿಹಾಸದಲ್ಲಿ ಯಾವೊಬ್ಬ ಬ್ಯಾಟರ್ ಯಾವುದೇ ಫಾರ್ಮೆಟ್‌ನಲ್ಲಿ ಮಾಡದ ದಾಖಲೆಯನ್ನು ವಿರಾಟ್‌ ಬರೆದಿದ್ದಾರೆ. ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್‌ ಕೊಹ್ಲಿ ಬರೆದಿರುವ ದಾಖಲೆ ಯಾವುದು ಎಂಬ ಬಗ್ಗೆ ವರದಿ ಇಲ್ಲಿದೆ.

ಭಾನುವಾರ ರಾಂಚಿಯಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಭಾರತದ ವಿರಾಟ್‌ ಕೊಹ್ಲಿ, ತಮ್ಮ ನೈಜ ಆಟಕ್ಕೆ ವಿರುದ್ಧವಾಗಿ ಬ್ಯಾಟ್ ಮಾಡಿದರು. ಸಾಮಾನ್ಯವಾಗಿ ವಿರಾಟ್‌ ಸ್ಟ್ರೈಕ್‌ ರೋಟೆಟ್‌ ಮಾಡುವ ಆಟಗಾರ. ಆದರೆ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಬೌಂಡರಿ ಸಿಕ್ಸರ್‌ಗಳನ್ನು ಸಹ ಸಿಡಿಸಿ ಅಬ್ಬರಿಸಿದರು. ಆಸ್ಟ್ರೇಲಿಯಾದ ಸಿಡ್ನಿ ಮೈದಾನದಲ್ಲಿ ಆಡಿದ ಧಾಟಿಯಲ್ಲಿ ಬ್ಯಾಟ್ ಮಾಡಿದರು. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಆರಂಭದಿಂದಲೂ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಮಣೆ ಹಾಕಿದ ವಿರಾಟ್‌ ಅಬ್ಬರಿಸಿದರು.

Virat Kohli breaks Sachin Tendulkar s record with 6th ODI century against South Africa

ಚಾಂಪಿಯನ್ಸ್‌ ಟ್ರೋಫಿಯಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿದ ಬಳಿಕ, ಈಗ ಮತ್ತೊಮ್ಮೆ ಏಕದಿನ ಕ್ರಿಕೆಟ್‌ನಲ್ಲಿ ಮೂರಂಕಿ ಮುಟ್ಟಿ ಸಂಭ್ರಮಿಸಿದರು. ದಕ್ಷಿಣ ಆಫ್ರಿಕಾ ಬೌಲರ್‌ಗಳನ್ನು ಕಾಡಿದ ವಿರಾಟ್‌ ತಮ್ಮ ಪರ್ಫೆಕ್ಟ್‌ ಶಾಟ್‌ಗಳ ಮೂಲಕ ರನ್‌ ಕಲೆ ಹಾಕಿ ಮಿಂಚಿದರು. ಈ ಶತಕದ ಮೂಲಕ ವಿರಾಟ್‌ ಕೊಹ್ಲಿ ತಮ್ಮ ಗುರು ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮೀರಿ ನಿಂತರು. ವಿರಾಟ್‌ ಕೊಹ್ಲಿ 102 ಎಸೆತಗಳಲ್ಲಿ 7 ಬೌಂಡರಿ, 5 ಸಿಕ್ಸರ್ ಸಹಾಯದಿಂದ ಶತಕ ಬಾರಿಸಿ ಮಿಂಚಿದರು. ಈ ಮೂಲಕ ವಿಶ್ವ ಕ್ರಿಕೆಟ್‌ನ ಯಾವುದೇ ಫಾರ್ಮೆಟ್‌ನಲ್ಲಿ 52 ಶತಕಗಳನ್ನು ಯಾರು ಬಾರಿಸಿಲ್ಲ. ಇದಕ್ಕೂ ಮೊದಲು ಸಚಿನ್ ತೆಂಡೂಲ್ಕರ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ 51 ಶತಕ ಬಾರಿಸಿದ ಹಿರಿಮೆ ತಮ್ಮದಾಗಿಸಿಕೊಂಡಿದ್ದರು.

ದಾಖಲೆಯ ಸರದಾರ

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ 5 ಶತಕ ಬಾರಿಸಿದ ಹಿರಿಮೆ ಹೊಂದಿದ್ದರು. ಈ ದಾಖಲೆಯನ್ನು ವಿರಾಟ್ ಅಳಿಸಿ ಹಾಕಿದರು. ವಿರಾಟ್‌ ದಕ್ಷಿಣ ಆಫ್ರಿಕಾ ವಿರುದ್ಧದ 32ನೇ ಪಂದ್ಯದಲ್ಲಿ 6ನೇ ಶತಕ ಬಾರಿಸಿ ಅಬ್ಬರಿಸಿದರು. ಈ ಇನಿಂಗ್ಸ್‌ ಮೂಲಕ ವಿರಾಟ್‌ ಕೊಹ್ಲಿ ಮತ್ತೊಂದು ದಾಖಲೆಯನ್ನು ಸಹ ಬರೆದರು. ವಿರಾಟ್‌ ಕೊಹ್ಲಿ ದಕ್ಷಿಣ ಆಫ್ರಿಕಾದ ಸೂಪರ್ ಸ್ಟಾರ್ ಪ್ಲೇಯರ್‌ ಎಬಿಡಿ ವಿಲಿಯರ್ಸ್‌, ಕ್ವಿಂಟನ್ ಡಿಕಾಕ್‌ ಭಾರತದ ವಿರುದ್ಧ 6 ಶತಕ ಬಾರಿಸಿದ್ದರು. ಈಗ ವಿರಾಟ್‌ ಇವರ ದಾಖಲೆಯ ಸಮಕ್ಕೆ ನಿಂತರು.

Virat Kohli breaks Sachin Tendulkar s record with 6th ODI century against South Africa

ದಕ್ಷಿಣ ಆಫ್ರಿಕಾ, ಭಾರತ ವಿರುದ್ಧ ಅತಿ ಹೆಚ್ಚು ರನ್‌ ಬಾರಿಸಿದ ಎರಡನೇ ಆಟಗಾರ ಎಂಬ ಹಿರಿಮೆ ತಮ್ಮದಾಗಿಸಿಕೊಂಡರು. ಈ ಮೂಲಕ ವಿರಾಟ್‌ ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಜಾಕ್‌ ಕಾಲಿಸ್‌ ಅವರ ದಾಖಲೆಯನ್ನು ಅಳಿಸಿ ಹಾಕಿದರು. ಜಾಕ್‌ ಕಾಲಿಸ್ ಭಾರತದ ವಿರುದ್ಧ 37 ಪಂದ್ಯಗಳಲ್ಲಿ 1535 ರನ್‌ ಬಾರಿಸಿದ್ದರು. ಈ ದಾಖಲೆಯನ್ನು ವಿರಾಟ್‌ ಕೊಹ್ಲಿ ಅಳಿಸಿ ಹಾಕಿದರು. ಮೊದಲ ಪಂದ್ಯದಲ್ಲಿ 32 ರನ್‌ ಬಾರಿಸುತ್ತಲೇ ವಿರಾಟ್‌ ಈ ದಾಖಲೆ ಬರೆದರು.

Story first published: Sunday, November 30, 2025, 16:19 [IST]
Other articles published on Nov 30, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+