For Quick Alerts
ALLOW NOTIFICATIONS  
For Daily Alerts
 

Virat Kohli: ಐಸಿಸಿ ವೈಟ್‌ಬಾಲ್ ಟೂರ್ನಿಯಲ್ಲಿ ಸಚಿನ್ ತೆಂಡೂಲ್ಕರ್ ಮತ್ತೊಂದು ದಾಖಲೆ ಮುರಿದ ವಿರಾಟ್ ಕೊಹ್ಲಿ!

ಭಾನುವಾರ, ಅಕ್ಟೋಬರ್ 8ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧದ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಐಸಿಸಿ ವೈಟ್-ಬಾಲ್ ಪಂದ್ಯಾವಳಿಗಳಲ್ಲಿ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದರು.

ವಿರಾಟ್ ಕೊಹ್ಲಿ ತಮ್ಮ 67ನೇ ಐಸಿಸಿ ಪಂದ್ಯದಲ್ಲಿ 2785 ರನ್‌ ಗಳಿಸುವ ಮೂಲಕ 61 ಪಂದ್ಯಗಳಲ್ಲಿ 2,719 ರನ್‌ ಗಳಿಸಿದ್ದ 'ಮಾಸ್ಟರ್ ಬ್ಲಾಸ್ಟರ್' ಸಚಿನ್ ತೆಂಡೂಲ್ಕರ್ ಅವರ ಬೃಹತ್ ದಾಖಲೆಯನ್ನು ಮುರಿದರು. ಎರಡು ಶತಕ ಮತ್ತು 25 ಅರ್ಧಶತಕ ಸೇರಿದಂತೆ 65.23ರ ಸರಾಸರಿಯೊಂದಿಗೆ ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದರು.

Virat Kohli Broke Sachin Tendulkars Record For Scoring Most Runs in the ICC White-ball Tournament

ಮತ್ತೊಂದೆಡೆ, ಸಚಿನ್ ತೆಂಡೂಲ್ಕರ್ ವೈಟ್-ಬಾಲ್ ಐಸಿಸಿ ಪಂದ್ಯಾವಳಿಗಳಲ್ಲಿ 52.28ರ ಸರಾಸರಿಯಲ್ಲಿ ಏಳು ಶತಕಗಳು ಮತ್ತು 16 ಅರ್ಧಶತಕಗಳೊಂದಿಗೆ 2,719 ರನ್ ಗಳಿಸಿದ್ದಾರೆ.

ಇನ್ನು ಈ ದಾಖಲೆಯ ಸಂದರ್ಭವನ್ನು ಗಮನಿಸುವುದು ಮುಖ್ಯವಾಗಿದ್ದು, ಐಸಿಸಿ ಏಕದಿನ ವಿಶ್ವಕಪ್, ಐಸಿಸಿ ಏಕದಿನ ಚಾಂಪಿಯನ್ಸ್ ಟ್ರೋಫಿ ಮತ್ತು ಐಸಿಸಿ ಟಿ20 ವಿಶ್ವಕಪ್ ಸೇರಿದಂತೆ ಎಲ್ಲಾ ಮೂರು ಪ್ರಮುಖ ವೈಟ್-ಬಾಲ್ ಐಸಿಸಿ ಪಂದ್ಯಾವಳಿಗಳಲ್ಲಿ ಭಾಗವಹಿಸುವ ಮೂಲಕ ವಿರಾಟ್ ಕೊಹ್ಲಿ ಈ ಸಾಧನೆಯನ್ನು ಸಾಧಿಸಿದ್ದಾರೆ.

ಆದರೆ, ಸಚಿನ್ ತೆಂಡೂಲ್ಕರ್ ಅವರು ಟಿ20 ವಿಶ್ವಕಪ್‌ಗಳಲ್ಲಿ ತಮ್ಮ ಪರಾಕ್ರಮ ಪ್ರದರ್ಶಿಸುವ ಅವಕಾಶವನ್ನು ಹೊಂದಿರಲಿಲ್ಲ. ಏಕದಿನ ವಿಶ್ವಕಪ್ ಮತ್ತು ಏಕದಿನ ಚಾಂಪಿಯನ್ಸ್ ಟ್ರೋಫಿಯಲ್ಲಿ ಮಾತ್ರ ಭಾಗವಹಿಸಿದ್ದಾರೆ.

Virat Kohli Broke Sachin Tendulkars Record For Scoring Most Runs in the ICC White-ball Tournament

ಭಾರತ ತಂಡದ ನಾಯಕ ರೋಹಿತ್ ಶರ್ಮಾ, 2011ರ ವಿಶ್ವಕಪ್ ವಿಜೇತ ಆಲ್‌ರೌಂಡರ್ ಯುವರಾಜ್ ಸಿಂಗ್, ಮಾಜಿ ನಾಯಕರಾದ ಸೌರವ್ ಗಂಗೂಲಿ ಮತ್ತು ಎಂಎಸ್ ಧೋನಿ ಮತ್ತು ಪ್ರಸ್ತುತ ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ವೈಟ್-ಬಾಲ್ ಐಸಿಸಿ ಪಂದ್ಯಾವಳಿಗಳಲ್ಲಿ ನಂತರದ ಅತ್ಯುತ್ತಮ ಭಾರತೀಯ ಬ್ಯಾಟರ್‌ಗಳಾಗಿದ್ದಾರೆ.

ರೋಹಿತ್ ಶರ್ಮಾ ಐಸಿಸಿ ಸೀಮಿತ-ಓವರ್‌ಗಳ ಪಂದ್ಯಾವಳಿಗಳಲ್ಲಿ 46.19ರ ಸರಾಸರಿಯಲ್ಲಿ 2422 ರನ್ ಬಾರಿಸಿದ್ದರೆ, ಯುವರಾಜ್ ಸಿಂಗ್ 34.77ರ ಸರಾಸರಿಯಲ್ಲಿ 1707 ರನ್ ಗಳಿಸಿದ್ದಾರೆ.

ಭಾರತ ತಂಡದ ಪರ ವೈಟ್ ಬಾಲ್ ಐಸಿಸಿ ಟೂರ್ನಿಗಳಲ್ಲಿ ಸೌರವ್ ಗಂಗೂಲಿ 1671 ರನ್, ಎಂಎಸ್ ಧೋನಿ 1492 ರನ್ ಮತ್ತು ರಾಹುಲ್ ದ್ರಾವಿಡ್ 1487 ರನ್ ಗಳಿಸಿದ್ದಾರೆ.

ಪಂದ್ಯದ ಕುರಿತು ಮಾತನಾಡುತ್ತಾ, 200 ರನ್‌ಗಳ ಸುಲಭ ಗುರಿ ಬೆನ್ನಟ್ಟಿದ ಭಾರತ ತಂಡ ಅಗ್ರ ಕ್ರಮಾಂಕದ ಮೂವರು ಬ್ಯಾಟರ್‌ಗಳ ವೈಫಲ್ಯದ ಹೊರತಾಗಿಯೂ, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅವರ ಅತ್ಯದ್ಭುತ ಜೊತೆಯಾಟದ ನೆರವಿನಿಂದ 41.2 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 201 ರನ್ ಗಳಿಸಿ ಗುರಿ ತಲುಪಿತು.

ಭಾರತದ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಹಾಗೂ ನಾಲ್ಕನೇ ಕ್ರಮಾಂಕದಲ್ಲಿ ಬಂದ ಶ್ರೇಯಸ್ ಅಯ್ಯರ್ ಅವರನ್ನು ಸೊನ್ನೆಗೆ ಔಟ್ ಮಾಡುವ ಮೂಲಕ ಆಸ್ಟ್ರೇಲಿಯಾ ಬೌಲರ್‌ಗಳು ಆರಂಭಿಕ ಮುನ್ನಡೆ ಸಾಧಿಸಿದ್ದರು.

ಭಾರತ ತಂಡ ಈ ಹಂತದಲ್ಲಿ 2 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿತ್ತು. ಈ ವೇಳೆ ಜೊತೆಯಾದ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ 4ನೇ ವಿಕೆಟ್‌ಗೆ 166 ರನ್‌ಗಳ ಜೊತೆಯಾಟದ ಮೂಲಕ ಪುನಃ ಇನ್ನಿಂಗ್ಸ್ ಕಟ್ಟಿದರು ಮತ್ತು ಭಾರತಕ್ಕೆ ಗೆಲುವು ಖಚಿತಪಡಿಸಿದರು.

ಶತಕದ ಸನಿಹದಲ್ಲಿದ್ದ ವಿರಾಟ್ ಕೊಹ್ಲಿ 116 ಎಸೆತಗಳಲ್ಲಿ 6 ಬೌಂಡರಿ ಸಮೇತ ಅಮೂಲ್ಯ 85 ರನ್ ಬಾರಿಸಿದರು. ಈ ವೇಳೆ ದೊಡ್ಡ ಶಾಟ್ ಬಾರಿಸಲು ಹೋಗಿ ಔಟಾಗಬೇಕಾಯಿತು.

ಮತ್ತೊಂದೆಡೆ, ಕೆಎಲ್ ರಾಹುಲ್ 115 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್ ಮೂಲಕ 97 ರನ್ ಬಾರಿಸಿದರು. ವಿರಾಟ್ ಕೊಹ್ಲಿ ಔಟಾದ ನಂತರ ಬಂದ ಹಾರ್ದಿಕ್ ಪಾಂಡ್ಯ 8 ಎಸೆತಗಳಲ್ಲಿ 1 ಸಿಕ್ಸರ್ ಸಮೇತ 11 ರನ್ ಗಳಿಸಿದರು. ಕೆಎಲ್ ರಾಹುಲ್ ಸಿಕ್ಸರ್ ಮೂಲಕ ತಂಡವನ್ನು ಗೆಲ್ಲಿಸಿದ್ದು ಸೊಗಸಾಗಿತ್ತು.

Story first published: Sunday, October 8, 2023, 23:19 [IST]
Other articles published on Oct 8, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+