For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 75ರಿಂದ 80 ಶತಕ ದಾಖಲಿಸಲಿದ್ದಾರಂತೆ!

virat kohli to get 75-80 100 2019

ಹೊಸದಿಲ್ಲಿ, ಆಗಸ್ಟ್‌ 13: ಟೀಮ್‌ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 75ರಿಂದ 80 ಶತಕಗಳನ್ನು ದಾಖಲಿಸಲಿದ್ದಾರೆ ಎಂದು ಭಾರತ ತಂಡದ ಮಾಜಿ ಆಟಗಾರ ವಾಸಿಂ ಜಾಫರ್‌ ಅಭಿಪ್ರಾಯಪಟ್ಟಿದ್ದಾರೆ.

ಆತಿಥೇಯ ವೆಸ್ಟ್‌ ಇಂಡೀಸ್‌ ವಿರುದ್ಧದ 3 ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಭಾನುವಾರ ನಡೆದ 2ನೇ ಪಂದ್ಯದಲ್ಲಿ ವಿರಾಟ್‌ ತಮ್ಮ ಏಕದಿನ ಕ್ರಿಕೆಟ್‌ ವೃತ್ತಿ ಬದುಕಿನ 42ನೇ ಶತಕ ದಾಖಲಿಸಿದ್ದರು. ಕಳೆದ 11 ಇನಿಂಗ್ಸ್‌ಗಳಲ್ಲಿ ಶತಕದ ಬರ ಅನುಭವಿಸಿದ್ದ ವಿರಾಟ್‌ ಕೊನೆಗೂ ಮೂರಂಕಿಯ ಮೊತ್ತ ಪೇರಿಸಿ ಸಂಭ್ರಮಿಸಿದರು. ಸದ್ಯ 5 ಇನಿಂಗ್ಸ್‌ಗೆ 1 ಶತಕದ ಸರಾಸರಿ ಕೊಹ್ಲಿ ಅವರದ್ದು.

ಇನ್ನು ಏಕದಿನ ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ಶತಕಗಳನ್ನು ಬಾರಿಸಿದವರ ಪಟ್ಟಿಯಲ್ಲಿ ಕೇವಲ ಸಚಿನ್‌ ತೆಂಡೂಲ್ಕರ್‌ (49) ಮಾತ್ರವೇ ವಿರಾಟ್‌ ಕೊಹ್ಲಿ (42) ಅವರಿಗಿಂತಲೂ ಮುಂದಿದ್ದಾರೆ.

"11 ಇನಿಂಗ್ಸ್‌ಗಳ ವಿರಾಮದ ಬಳಿಕ ಎಂದಿನ ಸೇವೆ ಆರಂಭಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್‌ 75ರಿಂದ 80 ಶತಕಳನ್ನು ದಾಖಲಿಸಬಲ್ಲರು," ಎಂದು ಜಾಫರ್‌ ಹೇಳಿದ್ದಾರೆ. ರಣಜಿ ಕ್ರಿಕೆಟ್‌ನಲ್ಲಿ ರನ್‌ಗಳ ಶಿಖರವನ್ನೇ ನಿರ್ಮಿಸಿದ್ದ ಜಾಫರ್‌, ಟೀಮ್‌ ಇಂಡಿಯಾದಲ್ಲಿ ತಮ್ಮ ಸ್ಥಾನ ಭದ್ರ ಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದರು. ಜಾಫರ್‌ ಮಂದ ಗತಿಯ ಫೀಲ್ಡರ್‌ ಎಂಬ ಕಾರಣಕ್ಕೆ ಅವರನ್ನು ತಂಡದಿಂದ ಹೊರಗಿಡಲಾಗಿತ್ತು. ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ 19147 ರನ್‌ ಗಳಿಸಿರುವ ಬ್ಯಾಟ್ಸ್‌ಮನ್‌ ಜಾಫರ್‌.

ವಿಂಡೀಸ್‌ ಬೌಲಿಂಗ್‌ ದಾಳಿಯನ್ನು ದಿಟ್ಟವಾಗಿ ಎದುರಿಸಿದ ಕೊಹ್ಲಿ, 125 ಎಸೆತಗಳಲ್ಲಿ 120 ರನ್‌ಗಳ ಅಮೋಘ ಶತಕ ದಾಖಲಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದರು. ಇದೇ ವೇಳೆ ವೆಸ್ಟ್‌ ಇಂಡೀಸ್‌ ವಿರುದ್ಧ ಒಡಿಐನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಂಡ ವಿರಾಟ್‌, ಭಾರತದ ಪರ ಅತಿ ಹೆಚ್ಚು ಏಕದಿನ ಕ್ರಿಕೆಟ್‌ ರನ್‌ ದಾಖಲಿಸಿದವರ ಪೈಕಿ ಸೌರವ್‌ ಗಂಗೂಲಿ (11,221) ಅವರನ್ನು ಹಿಂದಿಕ್ಕಿ ದ್ವಿತೀಯ ಸ್ಥಾನಕ್ಕೇರಿದ್ದಾರೆ. ಗಂಗೂಲಿ 297 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದರೆ, ಕೊಹ್ಲಿ ಕೇವಲ 229 ಇನಿಂಗ್ಸ್‌ಗಳಲ್ಲಿ ಈ ಮೈಲುಗಲ್ಲು ಮುಟ್ಟಿದ್ದಾರೆ.

ಕೊಹ್ಲಿ ಅವರ ಈ ಸಾಧನೆಯ ಕೆಲವೇ ಸಮಯದ ಬಳಿಕ ಟ್ವೀಟ್‌ ಮಾಡಿದ ಗಂಗೂಲಿ, "ವಿರಾಟ್‌ ಕೊಹ್ಲಿ ಅವರಿಂದ ಮತ್ತೊಂದು ಮಾಸ್ಟರ್‌ಕ್ಲಾಸ್‌ ಹೊರಬಂದಿದೆ. ಅಬ್ಬಾ ಎಂಥಹ ಆಟಗಾರ!," ಎಂದು ಟ್ವೀಟ್‌ ಮೂಲಕ ಗುಣಗಾನ ಮಾಡಿದ್ದರು. ಕೊಹ್ಲಿ ಸಮಗ್ರ ಸಾರ್ವಕಾಲಿಕ ಅತಿ ಹೆಚ್ಚು ರನ್‌ಗಳಿಸಿದವರ ಪೈಕಿ 7ನೇ ಸ್ಥಾನಕ್ಕೇರಿದ್ದಾರೆ. ಜಾಕ್‌ ಕಾಲಿಸ್‌, ಇಂಝಮಾಮ್‌ ಉಲ್‌ ಹಕ್‌, ಮಹೇಲಾ ಜಯವರ್ಧನೆ, ಸನತ್‌ ಜಯಸೂರ್ಯ, ರಿಕಿ ಪಂಟಿಂಗ್‌, ಕುಮಾರ ಸಂಗಕ್ಕಾರ ಮತ್ತು ಸಚಿನ್‌ ತೆಂಡೂಲ್ಕರ್‌ ಈ ಪಟ್ಟಿಯಲ್ಲಿ ವಿರಾಟ್‌ಗಿಂತಲೂ ಮುಂದಿದ್ದಾರೆ.

Story first published: Tuesday, August 13, 2019, 15:56 [IST]
Other articles published on Aug 13, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+