Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಚಿನ್‌ ತೆಂಡೂಲ್ಕರ್‌ ಈ ದಾಖಲೆ ಬೆನ್ನಟ್ಟಿರುವ ವಿರಾಟ್ ಕೊಹ್ಲಿ

ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರ ವಿರಾಟ್‌ ಕೊಹ್ಲಿ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಇವರು ಸದ್ಯ ಮೈದಾನಕ್ಕೆ ಇಳಿಯುತ್ತಲೇ ದಾಖಲೆಗಳು ನಿರ್ಮಾಣವಾಗುತ್ತವೆ. ಅಂದು ಸಚಿನ್ ತೆಂಡೂಲ್ಕರ್ ಅವರು ದಾಖಲೆಗಳನ್ನು ನಿರ್ಮಿಸಿದಾಗ ಅವುಗಳನ್ನು ಅಳಿಸಲು ಅಸಾಧ್ಯ ಎಂದು ನಂಬಲಾಗಿತ್ತು. ಆದರೆ ಈಗ ವಿರಾಟ್‌ ಕೊಹ್ಲಿ ಆ ದಾಖಲೆಗಳನ್ನು ಒಂದೊಂದಾಗಿ ಬೆನ್ನು ಹತ್ತಿದ್ದಾರೆ. ಹಲವು ದಾಖಲೆಗಳ ಬೆನ್ನು ಹತ್ತಿರುವ ವಿರಾಟ್‌ ಕೊಹ್ಲಿ, ಈಗ ಮತ್ತೊಂದು ದಾಖಲೆಯ ಹಿಂಬಾಲಿಸುತ್ತಿದ್ದಾರೆ. ಹಾಗಿದ್ದರೆ ಆ ದಾಖಲೆ ಯಾವುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ರಾಂಚಿಯಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ವಿರಾಟ್‌ ಕೊಹ್ಲಿ ಅಬ್ಬರಿಸಿದರು. ಈ ಪಂದ್ಯದಲ್ಲಿ ವಿರಾಟ್‌ ಶತಕ ಬಾರಿಸುವ ಮೂಲಕ ಹಲವು ದಾಖಲೆಗಳನ್ನು ಬರೆದರು. ಕ್ರಿಕೆಟ್‌ನ ಯಾವುದೇ ಫಾರ್ಮೆಟ್‌ನಲ್ಲಿ ಯಾವೊಬ್ಬ ಬ್ಯಾಟರ್‌ ಮಾಡದ ದಾಖಲೆಯನ್ನು ವಿರಾಟ್ ನಿರ್ಮಿಸಿದ್ದಾರೆ. ಒಂದೇ ಸ್ವರೂಪದಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯುವಲ್ಲಿ ಯಶಸ್ವಿಯಾಗಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಸಚಿನ್ 51 ಶತಕಗಳನ್ನು ಗಳಿಸಿದ ದಾಖಲೆಯನ್ನು ನಿರ್ಮಿಸಿದ್ದರು.

Virat Kohli Chasing Sachin s All-Time International Player of the Match Record

ವಿರಾಟ್‌ ಕೊಹ್ಲಿ ಭರ್ಜರಿ ಶತಕದ ಪರಿಣಾಮ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದು ಬೀಗಿದರು. ಈ ಮೂಲಕ ವಿರಾಟ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 70 ನೇ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಇದರಲ್ಲಿ ಟೆಸ್ಟ್‌, ಏಕದಿನ, ಟಿ20 ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿ ಪಡೆದ ಪಂದ್ಯ ಶ್ರೇಷ್ಠ ಪ್ರಶಸ್ತಿಗಳು ಸೇರಿವೆ. ಅತಿ ಹೆಚ್ಚು ಪಂದ್ಯ ಶ್ರೇಷ್ಠ ಪ್ರಶಸ್ತಿಗಳನ್ನು ಗೆದ್ದ ಎರಡನೇ ಆಟಗಾರ ಎಂಬ ಹೆಗ್ಗಳಿಕೆ ವಿರಾಟ್ ಅವರದ್ದಾಗಿದೆ.

76 ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿರುವ ಸಚಿನ್

ಸಚಿನ್ ತೆಂಡೂಲ್ಕರ್‌ ಒಟ್ಟಾರೆ ತಮ್ಮ ಅಂತಾರಾಷ್ಟ್ರೀಯ ವೃತ್ತಿ ಜೀವನದಲ್ಲಿ 76 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆದ್ದಿದ್ದಾರೆ.ಇದರ ಅರ್ಥ ವಿರಾಟ್‌ ಕೊಹ್ಲಿ ಸಚಿನ್ ದಾಖಲೆಯನ್ನು ಮುರಿಯಲು ಇನ್ನು ಏಳು ಬಾರಿ ಪಂದ್ಯ ಶ್ರೇಷ್ಠ ಪ್ರಸಸ್ತಿಯನ್ನು ಗೆದ್ದರೆ, ಸಚಿನ್ ತೆಂಡೂಲ್ಕರ್ ಅವರ ದಾಖಲೆಯ ಸಮಕ್ಕೆ ನಿಲ್ಲುತ್ತಾರೆ. ಆದರೆ ವಿರಾಟ್ ಕೊಹ್ಲಿ ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟಿ20 ಹಾಗೂ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಹೀಗಾಗಿ ಇವರು ಬರೀ ಏಕದಿನ ಫಾರ್ಮೆಟ್‌ನಲ್ಲಿ ಮಾತ್ರ ತಂಡದ ಪರ ಬ್ಯಾಟ್ ಮಾಡುತ್ತಿದ್ದಾರೆ. ಹೀಗಾಗಿ ಈ ದಾಖಲೆ ಮುರಿಯುವುದು ಕೊಹ್ಲಿ ಅವರಿಗೆ ಕೊಂಚ ಕಷ್ಟವಾಗಿದೆ.

Virat Kohli Chasing Sachin s All-Time International Player of the Match Record

ರಾಂಚಿಯಲ್ಲಿ ವಿರಾಟ್‌ ಕೊಹ್ಲಿ ಅವರು ಆಡಿದ ಧಾಟಿಯನ್ನು ನೋಡಿದರೆ, ಇವರು ದಕ್ಷಿಣ ಆಫ್ರಿಕಾದಲ್ಲಿ 2027ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಆಡಬಹುದು ಎನ್ನಲಾಗುತ್ತಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ವಿರಾಟ್ ಆಡಿದ ಧಾಟಿ ಹಾಗೂ ರನ್‌ಗಳನ್ನು ಪಡೆಯಲು ಓಡುತ್ತಿದ್ದ ಪರಿಯನ್ನು ನೋಡಿದರೆ, ಇವರ ಫಿಟ್ನೆಸ್‌ ಈಗಲೂ ಹೇಗಿದೆ ಎಂಬುದು ಅರ್ಥವಾಗುತ್ತದೆ.

Story first published: Monday, December 1, 2025, 18:07 [IST]
Other articles published on Dec 1, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+