ಕೊಹ್ಲಿ ಫಾರ್ಮ್ ವೈಫಲ್ಯ: ಅಕಾಡೆಮಿಗೆ ವಾಪಸ್ ಬಾ ಎಂದ ಕೊಹ್ಲಿ ಬಾಲ್ಯದ ಕೋಚ್

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಸತತ ಬ್ಯಾಟಿಂಗ್ ವೈಫಲ್ಯ ಅವರ ಅಭಿಮಾನಿಗಳಿಗಷ್ಟೇ ಅಲ್ಲದೆ, ಬಾಲ್ಯದ ಕೋಚ್ ರಾಜಕುಮಾರ್ ಶರ್ಮಾಗೂ ಚಿಂತೆಗೀಡುಮಾಡಿದೆ. ನನ್ನ ಗರಡಿಯಲ್ಲಿ ಬೆಳೆದು ಇಷ್ಟು ದೊಡ್ಡ ಹೆಸರು ಮಾಡಿದ್ದ ವಿರಾಟ್ ಕೊಹ್ಲಿ ಇಷ್ಟರ ಮಟ್ಟಿಗೆ ವೈಫಲ್ಯ ಕಾಣಲು ಏನು ಕಾರಣ ಎಂಬುದನ್ನ ಅರಿಯಲು ಕೊಹ್ಲಿಗೆ ವಾಪಸ್ ಅಕಾಡೆಮಿಗೆ ಬರಲು ತಿಳಿಸಿದ್ದಾರೆ.
ಇತ್ತೀಚೆಗೆ ಶ್ರೀಲಂಕಾ ವಿರುದ್ಧ ಬೆಂಗಳೂರಿನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಕೇವಲ 36 ರನ್‌ಗಳಷ್ಟೇ ಗಳಿಸಲು ಸಾಧ್ಯವಾಯಿತು. ಶ್ರೀಲಂಕಾ ಸ್ಪಿನ್ನರ್‌ಗೆ ಎರಡು ಬಾರಿ ಒಂದೇ ರೀತಿಯಲ್ಲಿ ವಿಕೆಟ್ ಒಪ್ಪಿಸಿದ್ರು.
ವಿರಾಟ್ ಕೊಹ್ಲಿ 71ನೇ ಅಂತರಾಷ್ಟ್ರೀಯ ಶತಕಕ್ಕಾಗಿ ಕ್ರಿಕೆಟ್ ಅಭಿಮಾನಿಗಳು 2019ರಿಂದಲೂ ಕಾಯುತ್ತಲೇ ಬಂದಿದ್ದಾರೆ. ಎರಡು ವರ್ಷದಿಂದ ಕೊಹ್ಲಿಗೆ ಒಂದು ಶತಕ ಸಿಡಿಸಲು ಸಾಧ್ಯವಾಗುತ್ತಿಲ್ಲ. ವಿರಾಟ್ ಬ್ಯಾಟಿಂಗ್ ಟೆಕ್ನಿಕ್‌ನಲ್ಲಿ ಏನೋ ಸಮಸ್ಯೆ ಕಂಡುಬರುತ್ತಿದೆ ಎಂದು ಆತನ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ ಹೇಳಿದ್ದಾರೆ. ಜೊತೆಗೆ ಅಕಾಡೆಮಿಗೆ ಹಿಂತಿರುಗಿ ಬ್ಯಾಟಿಂಗ್ ಬೇಸಿಕ್ ಮೇಲೆ ಅಭ್ಯಾಸ ನಡೆಸಬೇಕಿದೆ ಎಂದಿದ್ದಾರೆ.
''ವಿರಾಟ್ ತನ್ನ ಬೇಸಿಕ್ ವಿಷಯಗಳಿಗೆ ಹಿಂತಿರುಗಬೇಕಾಗಿದೆ. ಆತ ಅಕಾಡೆಮಿಗೆ ಹಿಂತಿರುಗಬೇಕೆಂದು ನಾನು ಖಂಡಿತವಾಗಿಯೂ ಬಯಸುತ್ತೇನೆ. ನಾನು ನಿನ್ನೆಯಿಂದ ಈ ಬಗ್ಗೆ ಯೋಚಿಸುತ್ತಿದ್ದೆ ಮತ್ತು ನಾನು ಅವನೊಂದಿಗೆ ಮಾತನಾಡುತ್ತೇನೆ. ಅವನು ಅಕಾಡೆಮಿಯಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಆತ್ಮವಿಶ್ವಾಸ ಬರಬೇಕು"ಎಂದು ರಾಜ್‌ಕುಮಾರ್ ಹೇಳಿದ್ದಾರೆ ಎಂದು ಇಂಡಿಯಾ.ಕಾಮ್ ಉಲ್ಲೇಖಿಸಿದೆ.
"ಆತ ನಿಜವಾಗಿಯೂ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದ, ಆದರೆ ದುರದೃಷ್ಟವಶಾತ್ ಆತ ತುಂಬಾ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡುತ್ತಿದ್ದಾನೆ. ಅವನು ತನ್ನ ಸಂಪೂರ್ಣ ವೃತ್ತಿಜೀವನದಲ್ಲಿ ಇದ್ದಂತೆ, ಸ್ವಲ್ಪ ಹೆಚ್ಚು ಮುಕ್ತವಾಗಿ ಬ್ಯಾಟಿಂಗ್ ಮಾಡಲು ಪ್ರಾರಂಭಿಸಿದರೆ ಶೀಘ್ರದಲ್ಲೇ ಅವನು ತನ್ನ ಅತ್ಯುತ್ತಮ ಸ್ಥಿತಿಗೆ ಮರಳುತ್ತಾನೆ. ಅಂತಹ ವಿಕೆಟ್‌ಗಳಲ್ಲಿ ನೀವು ರಿಷಬ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಅವರಂತೆ ಹೆಚ್ಚಿನ ಅವಕಾಶಗಳನ್ನು ತೆಗೆದುಕೊಳ್ಳಬೇಕಾಗುತ್ತದೆ, "ಎಂದು ಅವರು ಸೇರಿಸಿದರು.
2017 ರಿಂದ ಮೊದಲ ಬಾರಿಗೆ ವಿರಾಟ್ ಕೊಹ್ಲಿ ಟೆಸ್ಟ್ ಬ್ಯಾಟಿಂಗ್ ಸರಾಸರಿ 50 ಕ್ಕಿಂತ ಕಡಿಮೆಯಾಗಿದೆ. ಕೊಹ್ಲಿ ಬ್ಯಾಟಿಂಗ್ ಸರಾಸರಿ 49.95ರಷ್ಟಿದೆ. 101 ಟೆಸ್ಟ್ ಪಂದ್ಯಗಳಲ್ಲಿ ಅವರು 28 ಅರ್ಧಶತಕಗಳು ಮತ್ತು 27 ಶತಕಗಳೊಂದಿಗೆ 8,043 ರನ್ ಗಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications