
ಪೂಣೆ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಾಖಲೆ ಪಟ್ಟಿಗೆ ಮತ್ತೊಂದು ಸಾಧನೆ ಸೇರ್ಪಡೆಯಾಗಿದೆ. ಪೂಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ಶುಕ್ರವಾರ (ಮಾರ್ಚ್ 26) ನಡೆದ ಭಾರತ-ಇಂಗ್ಲೆಂಡ್ ದ್ವಿತೀಯ ಏಕದಿನ ಪಂದ್ಯದಲ್ಲಿ ಕೊಹ್ಲಿ ಈ ಸಾಧನೆ ತೋರಿದ್ದಾರೆ.
ಇಂಗ್ಲೆಂಡ್ ಎದುರಿನ ದ್ವಿತೀಯ ಪಂದ್ಯದ ಮೂಲಕ 253ನೇ ಏಕದಿನ ಪಂದ್ಯವನ್ನಾಡಿದ ಕೊಹ್ಲಿ ಏಕದಿನದಲ್ಲಿ ಮೂರನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದು 10000 ರನ್ ಬಾರಿಸಿದ ಸಾಧಕರ ಪಟ್ಟಿಗೆ ಸೇರಿಕೊಂಡಿದ್ದಾರೆ. 3ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದು ಒಟ್ಟು 190 ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ ಈ ರನ್ ಗಡಿ ದಾಡಿದ್ದಾರೆ.
ಶುಕ್ರವಾರದ ಪಂದ್ಯದಲ್ಲಿ ಕೊಹ್ಲಿ 30+ ರನ್ ಬಾರಿಸುವ ಮೂಲಕ ವಿರಾಟ್ 3ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದು 10,000 ರನ್ ಬಾರಿಸಿದ್ದಾರೆ. ಈ ದಾಖಲೆ ಪಟ್ಟಿಯಲ್ಲಿ ಭಾರತದ ಸಚಿನ್ ತೆಂಡೂಲ್ಕರ್ ಮತ್ತು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಕೂಡ ಇದ್ದಾರೆ.
2, 3ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದು 10000 ರನ್ ದಾಖಲೆ
* ಸಚಿನ್ ತೆಂಡೂಲ್ಕರ್, ಭಾರತ, ನಂ. 2ರಲ್ಲಿ ಬಂದು 13,685 ರನ್.
* ರಿಕಿ ಪಾಂಟಿಂಗ್, ಆಸ್ಟ್ರೇಲಿಯಾ, ನಂ. 3ರಲ್ಲಿ ಬಂದು 12,662 ರನ್.
* ವಿರಾಟ್ ಕೊಹ್ಲಿ, ಭಾರತ, ನಂ. 3ರಲ್ಲಿ ಬಂದು 10,000 ರನ್.