Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Virat Kohli: 31 ರನ್‌ಗಳ ಇನಿಂಗ್ಸ್‌ನಲ್ಲಿ ದೊಡ್ಡ ದಾಖಲೆ ಬರೆದ ವಿರಾಟ್‌

ಆರ್‌ಸಿಬಿ ತಂಡದ ಸೂಪರ್‌ ಸ್ಟಾರ್ ವಿರಾಟ್ ಕೊಹ್ಲಿ, ಶುಕ್ರವಾರ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಚಿಕ್ಕ ಇನಿಂಗ್ಸ್ ಕಟ್ಟಿ ಅಭಿಮಾನಿಗಳ ಮನ ಗೆದ್ದರು. ಈ ಚಿಕ್ಕ ಇನಿಂಗ್ಸ್‌ನಲ್ಲೂ ವಿರಾಟ್‌ ದೊಡ್ಡ ದಾಖಲೆಯನ್ನು ಮಾಡಿದ್ದಾರೆ. ಈ ಮೂಲಕ ಈ ಸಾಧನೆಯನ್ನು ಸಿಎಸ್‌ಕೆ ವಿರುದ್ಧ ಈ ಮೊದಲು ಯಾವುದೇ ಬ್ಯಾಟರ್‌ ಮಾಡಿರಲಿಲ್ಲ. ವಿರಾಟ್‌ ಕೊಹ್ಲಿ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಶಿಖರ್ ಧವನ್ ಅವರ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ಉತ್ತಮ ಆರಂಭವನ್ನು ಕಂಡಿತು. ಆರಂಭಿಕರಾಗಿ ಕಾಣಿಸಿಕೊಂಡ ವಿರಟ್ ಕೊಹ್ಲಿ 30 ಎಸೆತಗಳಲ್ಲಿ 2 ಬೌಂಡರಿ 1 ಸಿಕ್ಸರ್ ಸಹಾಯದಿಂದ 31 ರನ್‌ ಸಿಡಿಸಿ ಔಟ್ ಆದರು. ಈ ಮೂಲಕ ಐಪಿಎಲ್‌ನಲ್ಲಿ ದೊಡ್ಡ ಇತಿಹಾಸವನ್ನು ಬರೆದರು.

Virat Kohli Creates History Against CSK Surpasses Shikhar Dhawan to Become Highest Run-Scorer

ಶಿಖರ್‌ ಧವನ್ ದಾಖಲೆ ಮೀರಿದ ವಿರಾಟ್

ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಅತಿ ಹೆಚ್ಚು ರನ್ ಬಾರಿಸಿದ ಕೀರ್ತಿ ವಿರಾಟ್ ಕೊಹ್ಲಿ ಅವರದ್ದಾಗಿದೆ. ಈ ಮೂಲಕ ವಿರಾಟ್‌ ಶಿಖರ್ ಧವನ್‌ ಅವರ ದಾಖಲೆಯನ್ನು ಅಳಿಸಿ ಹಾಕಿದ್ರು. ಈ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ 34 ಪಂದ್ಯಗಳಲ್ಲಿ 1054 ರನ್ ಗಳಿಸಿದ್ದರು. ಇವರಿಗಿಂತ ಮೊದಲು ಈ ಪಟ್ಟಿಯಲ್ಲಿ ಶಿಖರ್ ಧವನ್ ಇದ್ದರು. ಶಿಖರ್‌ ಧವನ್ ಸಿಎಸ್‌ಕೆ ವಿರುದ್ಧ 1057 ರನ್‌ ಸಿಡಿಸಿದ್ದರು. ಹೀಗಾಗಿ ಸಿಎಸ್‌ಕೆ ವಿರುದ್ಧ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ವಿರಾಟ್‌ಗೆ ಜಸ್ಟ್‌ 3 ರನ್ ಅವಶ್ಯಕತೆ ಇತ್ತು. ಶುಕ್ರವಾರದ ಪಂದ್ಯದಲ್ಲಿ ವಿರಾಟ್ 31 ರನ್‌ ಬಾರಿಸುತ್ತಾ ಇದ್ದಂತೆ ದೊಡ್ಡ ಸಾಧನೆ ಮಾಡಿದರು.

ಚೆನ್ನೈ ವಿರುದ್ಧ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ವಿರಾಟ್‌ಗೆ ಈಗ ಅಗ್ರ ಸ್ಥಾನ. ವಿರಾಟ್‌ ಕೊಹ್ಲಿ 1084 ರನ್‌ಗಳನ್ನು ಬಾರಿಸಿ ಅಬ್ಬರಿಸಿದ್ದಾರೆ. ಚೆನ್ನೈ ವಿರುದ್ಧ ವಿರಾಟ್‌ ಒಟ್ಟು 9 ಅರ್ಧಶತಕಗಳನ್ನು ಬಾರಿಸಿದ ಹಿರಿಮೆ ಹೊಂದಿದ್ದಾರೆ.

ವಿರಾಟ್ ಕೊಹ್ಲಿ ಐಪಿಎಲ್‌ ಇತಿಹಾಸದಲ್ಲಿ 254 ಪಂದ್ಯಗಳನ್ನು ಆಡಿದ್ದು, 38.91 ಸರಾಸರಿಯಲ್ಲಿ 8094 ರನ್‌ ಸಿಡಿಸಿದ್ದಾರೆ. ಈ ವೇಳೆ 8 ಶತಕ ಹಾಗೂ 56 ಅರ್ಧಶತಕಗಳು ಸೇರಿವೆ. ವಿರಾಟ್‌ ಕೊಹ್ಲಿ ಈ ಪಂದ್ಯದಲ್ಲಿ ಮತ್ತೊಂದು ದಾಖಲೆಯನ್ನು ಬರೆಯುವ ಹತ್ತಿರದಲ್ಲಿದ್ದರು. ಆದರೆ ಈ ದಾಖಲೆ ಬರೆಯಲು ಸಾಧ್ಯವಾಗಲಿಲ್ಲ. ವಿರಾಟ್ ಒಟ್ಟಾರೆ 401 ಟಿ20 ಪಂದ್ಯದಲ್ಲಿ 12976 ರನ್‌ ಸಿಡಿಸಿದ್ದಾರೆ. ಮುಂದಿನ ಪಂದ್ಯದಲ್ಲಿ 24 ರನ್ ಬಾರಿಸುತ್ತಿದ್ದಂತೆ ವಿರಾಟ್‌ ದೊಡ್ಡ ದಾಖಲೆಯನ್ನು ಬರೆಯಲಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈನ ಎಂ ಚಿದಾಂಬರಂ ಅಂಗಳದಲ್ಲಿ ಕಳೆದ 17 ವರ್ಷಗಳಿಂದ ಒಂದು ಪಂದ್ಯವನ್ನು ಗೆದ್ದಲ್ಲಿ. ಕೊನೆಯ ಬಾರಿಗೆ ಆರ್‌ಸಿಬಿ ಈ ಅಂಗಳದಲ್ಲಿ ಜಯ ಸಾಧಿಸಿತ್ತು.

Story first published: Friday, March 28, 2025, 22:30 [IST]
Other articles published on Mar 28, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+