ಜಹೀರ್ ಎಂಗೇಜ್ ಮೆಂಟ್ ಗೆ ಸಾಕ್ಷಿಯಾದ ಕ್ರಿಕೆಟ್ ತಾರೆಯರು
ಮುಂಬೈ, ಮೇ 24: ವೇಗದ ಬೌಲರ್ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ನಾಯಕ ಜಹೀರ್ ಖಾನ್ ಅವರು ಮಂಗಳವಾರ (ಜೂ. 23) ಬಾಲಿವುಡ್ ನಟಿ ಸಾಗರಿಕಾ ಘಟ್ಗೆ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡರು.
ಮುಂಬೈನಲ್ಲಿ ನಡೆದ ಈ ಸಮಾರಂಭಕ್ಕೆ ಹಲವಾರು ಮಾಜಿ ಹಾಗೂ ಹಾಲಿ ಕ್ರಿಕೆಟಿಗರು, ಬಾಲಿವುಡ್ ಸೆಲೆಬ್ರಿಟಿಗಳು ಹಾಜರಾಗಿ ಸಮಾರಂಭಕ್ಕೆ ಮೆರೆಗು ತಂದರು. ಶೀಘ್ರದಲ್ಲೇ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗಾಗಿ ಲಂಡನ್ ಗೆ ತೆರಳುವ ಮುನ್ನ ಈ ಸಮಾರಂಭದಲ್ಲಿ ಎಲ್ಲರೂ ಭಾಗಿಯಾಗಿದ್ದು ವಿಶೇಷ.
ಇವರಲ್ಲಿ ಹೆಚ್ಚು ಗಮನ ಸೆಳೆದಿದ್ದು ಸಚಿನ್ ತೆಂಡೂಲ್ಕರ್ ಅವರ ಉಪಸ್ಥಿತಿ. ಈ ಜಗ ಮೆಚ್ಚಿನ ಕ್ರಿಕೆಟಿಗ ತಮ್ಮ ಪತ್ನಿಯ ಅಂಜಲಿ ಜತೆಗೆ ಆಗಮಿಸಿ ಭಾವಿ ದಂಪತಿಯನ್ನು ಆಶೀರ್ವದಿಸಿದರು. ಕೆಲವು ದಿನಗಳ ಹಿಂದಷ್ಟೇ, ಜಹೀರ್ ಖಾನ್ ಅವರು ತಾವು ಸಾಗರಿಕ ಜತೆಗೆ ಶೀಘ್ರದಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿರುವುದಾಗಿ ಟ್ವಿಟರ್ ನಲ್ಲಿ ಹೇಳಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಇತ್ತೀಚೆಗೆ, ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ಸಾಗರಿಕಾ ಕೂಡ, ಐಪಿಎಲ್ ಟೂರ್ನಿ ಮುಗಿದ ನಂತರ, ತಮ್ಮ ಹಾಗೂ ಜಹೀರ್ ಖಾನ್ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದ್ದರು.

ಮಿಂಚಿದ ಜಹೀರ್-ಸಾಗರಿಕಾ ಜೋಡಿ
ನಿಶ್ಚಿತಾರ್ಥ ಸಮಾರಂಭಕ್ಕೂ ಮುನ್ನ ನಡೆದ ಫೋಟೋ ಸೆಷನ್ಸ್ ನಲ್ಲಿ ಈ ಯುವ ಜೋಡಿ ಕ್ಯಾಮೆರಾಗಳಿಗೆ ಪೋಸು ನೀಡಿದ್ದು ಹೀಗೆ. ಜಹೀರ್ ಖಾನ್ ಬೂದು ಬಣ್ಣದ ಸೂಟ್ ನಲ್ಲಿ ಕಾಣಿಸುತ್ತಿದ್ದರೆ, ಸಾಗರಿಕಾ ಹಸಿರು ಬಣ್ಣದ ದಿರಿಸಿನಲ್ಲಿ ಮಿಂಚುತ್ತಿದ್ದರು.

ಇವರ ನಿಶ್ಚಿತಾರ್ಥ ಯಾವಾಗ?
ಸಮಾರಂಭಕ್ಕೆ ನಟಿ ಅನುಷ್ಕಾ ಶರ್ಮಾ ಹಾಗೂ ಅವರ ಪ್ರಿಯಕರ ಮತ್ತು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಆಗಮಿಸಿದ್ದರು. ಈ ಇಬ್ಬರ ಲವ್ ಸ್ಟೋರಿ ಶುರುವಾಗಿ ತುಂಬಾ ದಿನಗಳೇ ಕಳೆದಿವೆ. ಇವರಿಬ್ಬರ ನಿಶ್ಚಿತಾರ್ಥ ಅದ್ಯಾವಾಗ ನಡೆಯುವುದೋ ಏನೋ?

ರೋಹಿತ್ ಜೋಡಿ ಆಗಮನ
ಹಾಲಿ ಐಪಿಎಲ್ ಚಾಂಪಿಯನ್ ತಂಡ ಮುಂಬೈ ಇಂಡಿಯನ್ಸ್ ನ ನಾಯಕ ರೋಹಿತ್ ಶರ್ಮಾ, ತಮ್ಮ ಪತ್ನಿ ರಿತಿಕಾ ಜತೆ ಸಮಾರಂಭಕ್ಕೆ ಬಂದಿದ್ದು ಹೀಗೆ.

ಸಮಾರಂಭಕ್ಕೆ ವಿಶೇಷ ಮೆರುಗು
ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ತಮ್ಮ ಪತ್ನಿ ಅಂಜಲಿ ಜತೆಗೆ ಆಗಮಿಸಿ ಸಮಾರಂಭಕ್ಕೆ ಕಳೆ ತಂದರು. ಕಪ್ಪು ಬಣ್ಣದ ದಿರಿಸಿನಲ್ಲಿ ಮಿಂಚಿದ ಅವರ ಕಡೆಗೆ ತಿರುಗಿದ್ದ ಮಾಧ್ಯಮದ ಕಣ್ಣುಗಳು ತುಂಬಾ ಹೊತ್ತು ಬೇರೆಡೆಗೆ ಕದಲಲೇ ಇಲ್ಲ!

ಜೀನ್ಸ್ ನಲ್ಲಿ ಕಂಗೊಳಿಸಿದ ಕುಲಕರ್ಣಿ
ಧವಳ ಕುಲಕರ್ಣಿ ಅವರು ತಮ್ಮ ಪತ್ನಿ ಜತೆಗೆ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದು ಹೀಗೆ. ಸಿಂಪಲ್ಲಾಗಿ ಜೀನ್ಸ್ ಪ್ಯಾಂಟ್ ಹಾಗೂ ಕ್ಯಾಶ್ಯುಯಲ್ ಶರ್ಟ್ ಧರಿಸಿ ಬಂದಿದ್ದ ಅವರು ವಿಭಿನ್ನವಾಗಿ ಕಂಡರು.

ಎಲ್ಲೆಲ್ಲೂ ಲವಲವಿಕೆ
ಭಾರತೀಯ ಕ್ರಿಕೆಟ್ ತಂಡದ ಹಿರಿಯ ಕ್ರಿಕೆಟಿಗ ಯುವರಾಜ್ ಸಿಂಗ್ ಅವರು ತಮ್ಮ ಮಿತ್ರರೊಡನೆ ಪಾರ್ಟಿಯಲ್ಲಿ ಕಾಣಿಸಿಕೊಂಡಿರು. ಯಾಕೋ ತುಂಬಾ ಸುಸ್ತಾದಂತೆ ಕಂಡರೂ ಅವರ ಲವಲವಿಕೆಯಲ್ಲಿ ಯಾವುದೇ ಕೊರತೆ ಕಂಡು ಬರಲಿಲ್ಲ.

ಜೀನ್ಸ್ ನಲ್ಲಿ ಕಂಗೊಳಿಸಿದ ವೇಗಿ
ಭಾರತೀಯ ಕ್ರಿಕೆಟ್ ರಂಗ ಕಂಡ ಮತ್ತೊಬ್ಬ ಪ್ರತಿಭೆ ಆಶೀಶ್ ನೆಹ್ರಾ ಅವರು ತಮ್ಮ ಪತ್ನಿ ರುಷ್ಮಾ ಜತೆಗೆ ಸಮಾರಂಭಕ್ಕೆ ಆಗಮಿಸಿದರು. ಅವರೂ ಅಷ್ಟೇ, ಸಿಂಪಲ್ಲಾಗಿ ಒಂದು ಜೀನ್ಸ್ ಪ್ಯಾಂಟ್ ಹಾಗೂ ಕಾಟನ್ ಶರ್ಟ್ ಧರಿಸಿದ್ದರು.

ಬೂದು ಬಣ್ಣದ ಸೂಟ್ ನಲ್ಲಿ ಮಿಂಚಿದ ರಾಯಲ್ ಕ್ರಿಕೆಟಿಗ
ಇನ್ನು, ತಮ್ಮ ಪತ್ನಿ ಆದಿತಿ ಜತೆಗೆ ಬಂದ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ, ಬೂದು ಬಣ್ಣದ ಸೂಟ್ ನಲ್ಲಿ ಮಿಂಚುತ್ತಿದ್ದರು. ಅವರ ಪತ್ನಿ ಸಹ ಟ್ರೆಂಡಿ ಉಡುಪಿನಲ್ಲಿ ಎಲ್ಲರ ಗಮನ ಸೆಳೆದರು.

ಮಾಜಿ, ಹಾಲಿ ಜುಗಲ್ ಬಂದಿ
ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಹಾಗೂ ವಿಕೆಟ್ ಕೀಪರ್-ಕಂ- ಬ್ಯಾಟ್ಸ್ ಮನ್ ಪಾರ್ಥೀವ್ ಪಟೇಲ್ ಜತೆಗೆ ಕ್ಯಾಮೆರಾಕ್ಕೆ ಪೋಸು ನೀಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications