ವಿಶ್ವಕಪ್ ಗೆಲುವಿನ ನಂತರ ಸಚಿನ್‌ರನ್ನು ಹೆಗಲ ಮೇಲೆ ಹೊತ್ತು ಗೌರವಿಸಿದ ಕಾರಣ ಹೇಳಿದ ಕೊಹ್ಲಿ

2011ರ ವಿಶ್ವಕಪ್‌ನ ಗೆಲುವಿನ ಪ್ರತೀ ಕ್ಷಣವೂ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಸವಿನೆನಪು. ಅದರಲ್ಲೂ ಟೀಮ್ ಇಂಡಿಯಾ ನಾಯಕ ಎಂಎಸ್ ಧೋನಿ ವಾಂಖೆಡೆ ಕ್ರೀಡಾಂಗಣದಲ್ಲಿ ನುವಾನ್ ಕುಲಸೇಕರ ಎಸೆತವನ್ನು ಸಿಕ್ಸರ್‌ಗೆ ಅಟ್ಟಿ ಗೆಲುವನ್ನು ಖಚಿತಪಡಿಸಿದ ಸಂದರ್ಭ ಅತ್ಯಂತ ಸ್ಮರಣೀಯವಾಗಿ ಉಳಿದುಬಿಟ್ಟಿದೆ. ಪಂದ್ಯದ ಮತ್ತೊಂದು ಮುಖ್ಯ ಮರೆಯಲಾಗದ ದೃಶ್ಯವೆಂದರೆ ಸಚಿನ್ ತೆಂಡೂಲ್ಕರ್‌ರನ್ನು ತಂಡದ ಸಹ ಆಟಗಾರರು ಹೊತ್ತು ಮೆರೆದಾಡಿದ್ದು.
ಈ ಸ್ಮರಣೀಯ ವಿಶ್ವಕಪ್ ತಂಡದ ಭಾಗವಾಗಿದ್ದ ವಿರಾಟ್ ಕೊಹ್ಲಿ ವಿಶೇಷ ಕ್ಷಣದ ಬಗ್ಗೆ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಟೀಮ್ ಇಂಡಿಯಾದ ಸಹ ಆಟಗಾರರು ಸಚಿನ್ ತೆಂಡೂಲ್ಕರ್ ಅವರನ್ನು ಹೊತ್ತು ಮೆರೆದಾಡಿದ್ದು ಯಾಕೆ ಎಂದು ವಿವರಿಸಿದ್ದಾರೆ.

ಎಲ್ಲರ ಗಮನ ಸಚಿನ್ ಮೇಲೆಯೇ ಕೇಂದ್ರೀಕೃತವಾಗಿತ್ತು
ವಿಶ್ವಕಪ್‌ನಲ್ಲಿ ಗೆಲುವನ್ನು ಸಾಧಿಸಿದ ಕಾರಣಕ್ಕೆ ನಮ್ಮ ಸಂತಸಕ್ಕೆ ಪಾರವೇ ಇರಲಿಲ್ಲ. ನಾನಂತು ಸಂತಸದಲ್ಲಿ ತೇಲಾಡುತ್ತಿದ್ದೆ ಎಂದು ಮಯಾಂಕ್ ಅಗರ್ವಾಲ್ ಜೊತೆಗಿನ ಸಂದರ್ಶನದಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಗೆಲುವಿನ ನಂತರ ಏಕರೂಪವಾಗಿ ಎಲ್ಲರ ಭಾವನೆ ಸಚಿನ್ ತೆಂಡೂಲ್ಕರ್ ಸುತ್ತ ಕೇಂದ್ರೀಕೃತವಾಗಿತ್ತು ಎಂದು ಕೊಹ್ಲಿ ವಿವರಿಸಿದ್ದಾರೆ.

ವಿಶ್ವಕಪ್ ಗೆಲುವಿಗೆ ಕೊನೆಯ ಅವಕಾಶ
ಭಾರತದ ತಂಡದ ಪ್ರಮುಖ ಸದಸ್ಯನಾಗಿ ಇಷ್ಟು ವರ್ಷಗಳ ಕಾಲ ಆಡಿದ ಪಂದ್ಯಗಳು, ಗೆಲುವಿಗೆ ನೀಡಿದ ಕೊಡುಗೆಗಳಿಗೆ ಪ್ರತಿಯೊಬ್ಬರು ಸಚಿನ್ ಅವರನ್ನು ಸುತ್ತುವರಿದರು. ಏಕೆಂದರೆ ಇದು ವಿಶ್ವಕಪ್ ಗೆಲ್ಲುವ ಕೊನೆಯ ಅವಕಾಶ ಎಂದು ನಮಗೆ ತಿಳಿದಿತ್ತು ಎಂದು ವಿರಾಟ್ ಕೊಹ್ಲಿ ತಿಳಿಸಿದ್ದಾರೆ.

21 ವರ್ಷ ದೇಶದ ಭಾರ ಹೊತ್ತಿದ್ದಕ್ಕೆ!
ಈ ಸ್ಮರಣೀಯ ವಿಶ್ವಕಪ್ ಗೆಲುವಿನ ದಿನದಂದು ಸಚಿನ್ ತೆಂಡೂಲ್ಕರ್‌ಗೆ ಗೌರವ ಸಲ್ಲಿಸಿದ ಬಗ್ಗೆ ವಿರಾಟ್ ಕೊಹ್ಲಿ ಅದ್ಭುತ ಮಾತೊಂದನ್ನು ಹೇಳಿದ್ದರು. ಕಳೆದ 21 ವರ್ಷಗಳಿಂದ ಸಚಿನ್ ದೇಶದ ಭಾರವನ್ನು ತಮ್ಮ ಹೆಗಲಲ್ಲಿ ಹೊತ್ತಿದ್ದರು. ಈಗ ಅವರನ್ನು ನಮ್ಮ ಭುಜದಲ್ಲಿ ಹೊತ್ತು ತಿರುಗುವ ಅವಕಾಶ' ಎಂದು ವಿರಾಟ್ ಹೇಳಿದ್ದರು.

ಸಚಿನ್ ಶ್ರೇಷ್ಠ ಪ್ರದರ್ಶನ
37ನೇ ವಯಸ್ಸಿನಲ್ಲಿ ಸಚಿನ್ ತಮ್ಮ ಕೊನೆಯ ವಿಶ್ವಕಪ್‌ಅನ್ನು ಆಡಿದ್ದರು. ಆದರೆ ಇ ಟೂರ್ನಿಯಲ್ಲೂ ಸಚಿನ್ ಅದ್ಭುತ ಪ್ರದರ್ಶನದೊಂದಿಗೆ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಲಿಸಿದ ಎರಡನೇ ಆಟಗಾರನಾಗಿ ಹೊರಹೊಮ್ಮಿದ್ದರು. 9 ಪಂದ್ಯಗಳಲ್ಲಿ ಸಚಿನ್ 53.55ರ ಸರಾಸರಿಯಲ್ಲಿ 482 ರನ್ ಗಳಿಸಿದ್ದರು. ಇದರಲ್ಲಿ ಎರಡು ಶತಕ ಹಾಗೂ ಎರಡು ಅರ್ಧಶತಕಗಳು ಒಳಗೊಂಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications