For Quick Alerts
ALLOW NOTIFICATIONS  
For Daily Alerts
 

ಹಾರ್ದಿಕ್-ಕೃನಾಲ್ ಪಾಂಡ್ಯ ತಂದೆ ಸಾವಿಗೆ ವಿರಾಟ್ ಕೊಹ್ಲಿ ಸಂತಾಪ

Virat Kohli expresses condolences after Hardik Pandya, Krunal Pandyas father passes away

ನವದೆಹಲಿ: ಶನಿವಾರ ಸಾವನ್ನಪ್ಪಿರುವ ಭಾರತದ ಆಲ್ ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಅವರ ತಂದೆಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಂತಾಪ ವ್ಯಕ್ತಪಡಿಸಿದ್ದಾರೆ. ಸುದ್ದಿ ಕೇಳಿ ನನ್ನ ಹೃದಯ ಒಡೆದಂತಾಯಿತು ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.

'ಹಾರ್ದಿಕ್ ಮತ್ತು ಕೃನಾಲ್ ಅವರ ತಂದೆ ಸಾವಿಗೀಡಾಗಿದ್ದು ಕೇಳಿ ನನ್ನ ಹೃದಯ ಒಡೆದಂತಾಯಿತು. ಒಂದೆರಡು ಬಾರಿ ಅವರ ಜೊತೆ ಮಾತನಾಡಿದ್ದೆ. ನೋಡುವಾಗ ಅವರೊಬ್ಬ ತಮಾಷೆಯಾಗಿರುವ, ಬದುಕನ್ನು ಸಂಭ್ರಮಿಸುತ್ತಿರುವ ವ್ಯಕ್ತಿಯಂತೆ ಕಂಡರು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಹಾರ್ದಿಕ್-ಕೃನಾಲ್ ಇಬ್ಬರೂ ಧೈರ್ಯ ತಗೊಳ್ಳಿ,' ಎಂದು ಕೊಹ್ಲಿ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಪಾಂಡ್ಯ ತಂದೆ ಹಿಮಾಂಶು ಪಾಂಡ್ಯ ಕೊನೆಯುಸಿರೆಳೆದಿರುವುದರಿಂದಾಗಿ ಬರೋಡಾ ತಂಡದ ನಾಯಕರಾಗಿರುವ ಹಾರ್ದಿಕ್ ಹಿರಿಯ ಸಹೋದರ ಕೃನಾಲ್ ಪಾಂಡ್ಯ ಬಯೋಬಬಲ್ ತೊರೆದು ಕುಟುಂಬಸ್ಥರನ್ನು ಸೇರಿಕೊಂಡಿದ್ದಾರೆ. ಸಯ್ಯದ್ ಮುಷ್ತಾಕ್ ಟ್ರೋಫಿ ಇನ್ನುಳಿದ ಪಂದ್ಯಗಳಲ್ಲಿ ಕೃನಾಲ್ ಆಡುತ್ತಿಲ್ಲ.

ಬರೋಡಾ ತಂಡ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20ಯಲ್ಲಿ ಎಲೈಟ್ ಗ್ರೂಪ್‌ 'ಸಿ'ಯಲ್ಲಿದೆ. ಹಾರ್ದಿಕ್ ಪಾಂಡ್ಯ ಅವರು ಸಯ್ಯದ್ ಮುಷ್ತಾಕ್ ಅಲಿ ಟ್ರೊಫಿಯಲ್ಲಿ ಆಡುತ್ತಿಲ್ಲ. ಆದರೆ ಮುಂಬರಲಿರುವ ಇಂಗ್ಲೆಂಡ್ ವಿರುದ್ಧದ ನಿಯಮಿತ ಓವರ್‌ಗಳ ಕ್ರಿಕೆಟ್‌ಗಾಗಿ ಹಾರ್ದಿಕ್ ಶೀಘ್ರ ಅಭ್ಯಾಸ ಆರಂಭಿಸಲಿದ್ದಾರೆ.

Story first published: Saturday, January 16, 2021, 13:29 [IST]
Other articles published on Jan 16, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+