For Quick Alerts
ALLOW NOTIFICATIONS  
For Daily Alerts
 

Virat Kohli: 46 ರನ್‌ ಬಾರಿಸುತ್ತಿದ್ದಂತೆ ದಾಖಲೆ ಬರೆಯಲಿರುವ ವಿರಾಟ್

ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್‌ ವಿರಾಟ್‌ ಕೊಹ್ಲಿ ಭರ್ಜರಿ ಪಾರ್ಮ್‌ನಲ್ಲಿದ್ದಾರೆ. ಚಾಂಪಿಯನ್ಸ್‌ ಟ್ರೋಫಿಯ ಲೀಗ್‌ ಹಂತದ ಪಂದ್ಯದಲ್ಲಿ ಪಾಕ್‌ ವಿರುದ್ಧ ಶತಕ ಬಾರಿಸಿ ಅಬ್ಬರಿಸಿದರೆ, ಸೆಮಿಫೈನಲ್‌ ಹಂತದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಮಿಂಚಿದರು. ಈ ಟೂರ್ನಿಯಲ್ಲಿ ಲಯಕ್ಕೆ ಮರಳಿರುವ ವಿರಾಟ್‌ ಮತ್ತೊಂದು ದಾಖಲೆ ಬರೆಯುವ ಕನಸಿನಲ್ಲಿದ್ದಾರೆ.

ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್‌ನಲ್ಲಿ ತಮ್ಮ ಅಮೋಘ ಬ್ಯಾಟಿಂಗ್ ನಿಂದ ವಿಶಿಷ್ಠ ಛಾಪು ಮೂಡಿಸಿದ ಆಟಗಾರ. ಇವರು ಏಕದಿನ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ಬರೆದ ಧೀರ. ಹಲವು ವಿಶ್ವ ದಾಖಲೆಗಳಿಗೆ ತಮ್ಮ ಹೆಸರನ್ನು ನಮೂದಿಸಿರುವ ವಿರಾಟ್ ಕೊಹ್ಲಿ, ಈಗ ಚಾಂಪಿಯನ್ಸ್ ಟ್ರೋಫಿಯಲ್ಲಿ ಮತ್ತೊಂದು ದಾಖಲೆ ಬರೆಯುವ ಕನಸಿನಲ್ಲಿದ್ದಾರೆ.

Virat Kohli Eyes Chris Gayle s Record and the Golden Bat in ICC Champions Trophy Final

ಪ್ರಸಕ್ತ ಚಾಂಪಿಯನ್ಸ್ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ ಆಡಿರುವ 4 ಪಂದ್ಯಗಳಲ್ಲಿ 217 ರನ್‌ ಸಿಡಿಸಿದ್ದಾರೆ. ಈ ವೇಳೆ 1 ಶತಕ ಹಾಗೂ 1 ಅರ್ಧಶತಕ ಸಿಡಿಸಿದ್ದಾರೆ. ಈ ವೇಳೆ ಇವರ ಸರಾಸರಿ 72 ಆಗಿದೆ. ಈ ಟೂರ್ನಿಯಲ್ಲಿ ವಿರಾಟ್ ಗೋಲ್ಡನ್ ಬ್ಯಾಟ್ ಮೇಲೆ ಕಣ್ಣು ನೆಟ್ಟಿದ್ದಾರೆ. ಇವರು ಈ ಟೂರ್ನಿಯಲ್ಲಿ ಗರಿಷ್ಠ ರನ್‌ ಸಾಧಕರಿಗೆ ಗೋಲ್ಡನ್‌ ಬ್ಯಾಟ್ ಪ್ರಶಸ್ತಿಯನ್ನು ನೀಡುತ್ತಾರೆ.

Take a Poll

ಗೇಲ್‌ ದಾಖಲೆ ಮೇಲೆ ಕಣ್ಣು

ಚಾಂಪಿಯನ್ಸ್ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ ಫೈನಲ್ ಪಂದ್ಯದಲ್ಲಿ 46 ರನ್‌ ಸಿಡಿಸುತ್ತಿದ್ದಂತೆ ಮತ್ತೊಂದು ದಾಖಲೆ ಬರೆಯಲಿದ್ದಾರೆ. ಸದ್ಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್‌ ಸಾಧಕರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ವಿರಾಟ್ ಆಡಿದ 17 ಪಂದ್ಯಗಳಲ್ಲಿ 82ರ ಸರಾಸರಿಯಲ್ಲಿ 746 ರನ್‌ ಸಿಡಿಸಿದ್ದಾರೆ. ಈ ವೇಳೆ 1 ಶತಕ ಹಾಗೂ 6 ಅರ್ಧಶತಕಗಳು ಸೇರಿವೆ. ಇವರು ಕ್ರಿಸ್‌ ಗೇಲ್ ದಾಖಲೆ ಮೇಲೆ ಕಣ್ಣು ನೆಟ್ಟಿದ್ದಾರೆ. ಕ್ರಿಸ್ ಗೇಲ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿದ 17 ಪಂದ್ಯಗಳಲ್ಲಿ 3 ಶತಕ ಹಾಗೂ 1 ಅರ್ಧಶತಕದ ಬಲದಿಂದ 791 ರನ್‌ ಸಿಡಿಸಿದ್ದಾರೆ. ಈ ದಾಖಲೆಯನ್ನು ಮುರಿಯಲು ವಿರಾಟ್‌ಗೆ 46 ರನ್‌ ಸಿಡಿಸಿದ್ದಾರೆ.

Virat Kohli Eyes Chris Gayle s Record and the Golden Bat in ICC Champions Trophy Final

ವಿರಾಟ್ ಕೊಹ್ಲಿ ಈಗಾಗಲೇ ಐಸಿಸಿ ಟೂರ್ನಿಯ ನಾಕೌಟ್ ಹಂತದ ಪಂದ್ಯಗಳಲ್ಲಿ ಒಂದು ಸಾವಿರ ರನ್‌ ಕಲೆ ಹಾಕಿದ ವಿಶ್ವ ದಾಖಲೆ ಬರೆದಿದ್ದಾರೆ. ವಿರಾಟ್ ಈಗಾಗಲೇ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಶತಕ ಬಾರಿಸಿದ್ದು, ತಮ್ಮ ಶತಕದ ಬರವನ್ನು ನೀಗಿಸಿದ್ದಾರೆ. ಫೈನಲ್‌ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿ ಟೀಮ್ ಇಂಡಿಯಾಕ್ಕೆ ಚಾಂಪಿಯನ್ಸ್ ಟ್ರೋಫಿ ಮುಕುಟ ತೊಡಿಸುವ ಕನಸು ಕಾಣುತ್ತಿದ್ದಾರೆ. ತಮ್ಮ ನಾಯಕತ್ವದಲ್ಲಿ ಮಾಡಲು ಆಗದ ಸಾಧನೆಯನ್ನು ತಮ್ಮ ಆಪ್ತ ಸ್ನೇಹಿತನ ಮುಂದಾಳತ್ವದಲ್ಲಿ ವಿರಾಟ್ ಕೊಹ್ಲಿ ಮಾಡುವ ಇರಾದೆ ಹೊಂದಿದ್ದಾರೆ. ವಿರಾಟ್ ಕೊಹ್ಲಿ ಮುಂದಾಳತ್ವದಲ್ಲಿ ಭಾರತ 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ಗೆ ಅರ್ಹತೆ ಪಡೆದಿತ್ತು. ಆದರೆ ಆಗ ಸೋಲು ಅನುಭವಿಸಿತ್ತು.

Story first published: Thursday, March 6, 2025, 19:21 [IST]
Other articles published on Mar 6, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+