Virat Kohli: ಎಲೈಟ್ ಕ್ಲಬ್ ಸೇರುವ ಕನಸಿನಲ್ಲಿ ವಿರಾಟ್: ಯಾವದದು ದಾಖಲೆ?
ಚಾಂಪಿಯನ್ಸ್ ಟ್ರೋಫಿ ಕರಾಚಿಯಲ್ಲಿ ಆರಂಭವಾಗಿದೆ. "ಬಿ" ಗುಂಪಿನ ಮೊದಲ ಪಂದ್ಯ ಗುರುವಾರ ದುಬೈನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಕಾದಾಟ ನಡೆಸಲಿವೆ. ಈ ವೇಳೆ ಮೈದಾನಕ್ಕೆ ಹಲವು ಸೂಪರ್ ಸ್ಟಾರ್ ಆಟಗಾರರು ಇಳಿಯಲಿದ್ದಾರೆ. ಟೀಮ್ ಇಂಡಿಯಾದ ಪರ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಐಸಿಸಿ ಏಕದಿನ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನ ಪಡೆದಿರುವ ಶುಭಮನ್ ಗಿಲ್, ಕಣಕ್ಕೆ ಇಳಿಯಲಿದ್ದು ಕುತೂಹಲ ಮೂಡಿಸಿದೆ.
ಟೀಮ್ ಇಂಡಿಯಾದ ಪರ ಹಲವು ಸ್ಟಾರ್ ಆಟಗಾರರು ಇತಿಹಾಸ ನಿರ್ಮಿಸುವ ಕನಸಿನಲ್ಲಿದ್ದಾರೆ. ರೋಹಿತ್ ಶರ್ಮಾ, ಜಡೇಜಾ, ಮೊಹಮ್ಮದ್ ಶಮಿ ಸಹ ಇತಿಹಾಸದ ಹೊಸ್ತಿಲಲ್ಲಿ ನಿಂತಿದ್ದಾರೆ. ಈ ವೇಳೆ ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್ ಕೊಹ್ಲಿ ಸಹ ಮತ್ತೊಂದು ದಾಖಲೆಯನ್ನು ನಿರ್ಮಿಸುವ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಆ ಪ್ಲ್ಯಾನ್ ಯಾವುದು ಎಂಬ ಬಗ್ಗೆ ವರದಿ ಇಲ್ಲಿದೆ.

ಟೀಮ್ ಇಂಡಿಯಾದ ವಿರಾಟ್ ಕೊಹ್ಲಿ ಕಳೆದ ಕೆಲವು ದಿನಗಳಿಂದ ಫಾರ್ಮ್‌ಗಾಗಿ ಪರದಾಟ ನಡೆಸಿದ್ದರು. ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ವಿರಾಟ್ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ. ಹೀಗಾಗಿ ಟೀಕೆಗೆ ಗುರಿಯಾಗಿದ್ದರು. ಅಲ್ಲದೆ ತವರಿಗೆ ಆಗಮಿಸುತ್ತಿದ್ದಂತೆ ರಣಜಿ ಟೂರ್ನಿಯನ್ನು ಆಡುವಂತೆ ಬಿಸಿಸಿಐ ಸಲಹೆಯನ್ನು ನೀಡಿತು. ಇದರಂತೆ ದೇಹಲಿ ಪರ ವಿರಾಟ್ 12 ವರ್ಷಗಳ ಬಳಿಕ ದೇಶೀಯ ಟೂರ್ನಿ ಆಡಿ, ಮತ್ತೆ ಟೀಮ್ ಇಂಡಿಯಾ ಸೇರಿಕೊಂಡರು.
ಲಯ ಕಂಡುಕೊಂಡಿರುವ ವಿರಾಟ್
ತವರಿನಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ವಿರಾಟ್ ಮೊದಲ ಎರಡು ಪಂದ್ಯಗಳಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಆದರೆ ಅಹಮದಾಬಾದ್‌ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿ ಅರ್ಧಶತಕ ಬಾರಿಸಿದರು. ಈ ಮೂಲಕ ಮಿನಿ ವಿಶ್ವಕಪ್‌ಗೂ ಮುನ್ನ ಫಾರ್ಮ್‌ಗೆ ಮರಳಿದರು. ಈಗ ದುಬೈನಲ್ಲಿ ಬಾಂಗ್ಲಾ ವಿರುದ್ಧ ಬಿಗ್ ಇನಿಂಗ್ಸ್ ಕಟ್ಟಿದರೆ ದಾಖಲೆ ಫಿಕ್ಸ್.
ದುಬೈನಲ್ಲಿ ನಡೆಯಲಿರುವ ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ ವಿರಾಟ್ ಬಿಗ್ ಇನಿಂಗ್ಸ್ ಕಟ್ಟುವ ನಿಟ್ಟಿನಲ್ಲಿ ಚಿತ್ತ ನೆಟ್ಟಿದ್ದಾರೆ. ಈ ವೇಳೆ ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲಿ ವಿರಾಟ್ 90 ರನ್ ಬಾರಿಸುವಲ್ಲಿ ಯಶಸ್ವಿಯಾದರೆ, ಎಲೈಟ್ ಕ್ಲಬ್ ಸೇರಲಿದ್ದಾರೆ. ವಿರಾಟ್ ಕೊಹ್ಲಿ ಬಾಂಗ್ಲಾದೇಶದ ವಿರುದ್ಧ 16 ಏಕದಿನ ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಅವರು 75.83 ಸರಾಸರಿಯಲ್ಲಿ 910 ರನ್ ಗಳಿಸಿದ್ದಾರೆ. ಈ ವೇಳೆ ಐದು ಶತಕಗಳು ಮತ್ತು ಮೂರು ಅರ್ಧಶತಕ ಸೇರಿವೆ. ಗುರುವಾರ 90 ರನ್ ಸಿಡಿಸಿದರೆ ಬಾಂಗ್ಲಾ ವಿರುದ್ಧ ಒಂದು ಸಾವಿರ ರನ್ ಕಲೆ ಹಾಕಿದ ದಾಖಲೆ ನಿರ್ಮಿಸಲಿದ್ದಾರೆ.

ಬಾಂಗ್ಲಾ ವಿರುದ್ಧ ಸಾವಿರ ರನ್ ಬಾರಿಸಿದ ಆಟಗಾರರು
ಬ್ರೆಂಡನ್ ಟೇಲರ್ (ಜಿಂಬಾಬ್ವೆ),1508 ರನ್
ಕುಮಾರ್ ಸಂಗಕ್ಕಾರ, (ಶ್ರೀಲಂಕಾ), 1206 ರನ್
ಎಲ್ಟನ್ ಚಿಗುಂಬುರಾ (ಜಿಂಬಾಬ್ವೆ), 1199 ರನ್
ಹ್ಯಾಮಿಲ್ಟನ್ ಮಸಕಡ್ಜಾ (ಜಿಂಬಾಬ್ವೆ), 1189 ರನ್
ಸನತ್ ಜಯಸೂರ್ಯ (ಶ್ರೀಲಂಕಾ), 1030 ರನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications