ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗುತ್ತಿದ್ದಾರೆ. ಇವರು ಇತ್ತೀಚಿಗೆ ನಡೆದ ಆಸ್ಟ್ರೇಲಿಯಾ ಪ್ರವಾಸದಲ್ಲೂ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಇವರು ರನ್ ಬರ ಅನುಭವಿಸಿದ್ದರಿಂದ ಟೀಕೆಗೆ ಗುರಿಯಾಗಿದ್ದರು. ಇವರ ಆಟವನ್ನು ಕಂಡು ಬಿಸಿಸಿಐ ಸಹ ಗರಂ ಆಗಿತ್ತು. ಈಗ ತಮ್ಮ ತಪ್ಪನ್ನು ತಿದ್ದಿಕೊಂಡು ಅಂತಾರಾಷ್ಟ್ರೀಯ ಅಂಗಳದಲ್ಲಿ ಭರ್ಜರಿ ಕಂ ಬ್ಯಾಕ್ ಮಾಡಲು ವಿರಾಟ್ ವೇದಿಕೆಯನ್ನು ಸಿದ್ಧ ಪಡಿಸಿಕೊಂಡಿದ್ದಾರೆ.
ಪಾಕಿಸ್ತಾನದ ಆಶ್ರಯದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ವಿರಾಟ್‌ಗೆ ಸ್ಥಾನ ಲಭಿಸಿದೆ. ಭಾರತದ ಪಂದ್ಯಗಳು ದುಬೈನಲ್ಲಿ ನಡೆಯಲಿವೆ. ಫಾರ್ಮ್ ಇಲ್ಲದೆ ಪರದಾಡುತ್ತಿದ್ದ ಸೂಪರ್ ಸ್ಟಾರ್ ಆಟಗಾರನ ಭವಿಷ್ಯದ ದೃಷ್ಟಿಯಿಂದ ಇದು ದೊಡ್ಡ ವೇದಿಕೆ. ಈ ವೇದಿಕೆಯನ್ನು ಸರಿಯಾಗಿ ಬಳಸಿಕೊಂಡು ಆರ್ಭಟಿಸಲು ವಿರಾಟ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್‌ನಲ್ಲೂ ವಿರಾಟ್ ದಾಖಲೆ ಬರೆಯುವ ಹುಮ್ಮಸ್ಸಿನಲ್ಲಿದ್ದಾರೆ.

ಐಸಿಸಿ ಮೆಗಾ ಈವೆಂಟ್‌ಗಳಲ್ಲಿ ವಿರಾಟ್ ಅಮೋಘ ಪ್ರದರ್ಶನ ನೀಡಿರುವ ಪ್ಲೇಯರ್. ಅದು ಏಕದಿನ ಕ್ರಿಕೆಟ್ ಟೂರ್ನಿಯೇ ಆಗಿರಲಿ. ಟಿ20 ಫಾರ್ಮೆಟ್ ಆಗಿರಲಿ. ವಿರಾಟ್ ಅಂಗಳಕ್ಕೆ ಇಳಿದರೆ ದಾಖಲೆ ಫಿಕ್ಸ್. ಈಗಲೂ ಫೆಬ್ರವರಿಯಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ವಿರಾಟ್ ದೊಡ್ಡ ದಾಖಲೆಯನ್ನು ಬರೆಯುವ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಈ ಟೂರ್ನಿಯಲ್ಲಿ ಇವರು ಗರಿಷ್ಠ ರನ್ ಬಾರಿಸಿದ ಹಿರಿಮೆ ತಮ್ಮದಾಗಿಸಿಕೊಳ್ಳುವ ಸುವರ್ಣ ಅವಕಾಶಇದೆ.
ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದ ಆಟಗಾರರ ಪಟ್ಟಿಯಲ್ಲಿ ಕ್ರಿಸ್ ಗೇಲ್‌ಗೆ ಮೊದಲ ಸ್ಥಾನ. ಇವರು ಒಟ್ಟಾರೆ ಚಾಂಪಿಯನ್ಸ್ ಟ್ರೋಫಿಯಲ್ಲಿ 791 ರನ್ ಸಿಡಿಸಿದ್ದಾರೆ. ಇನ್ನು ವಿರಾಟ್ ಈ ಪಟ್ಟಿಯಲ್ಲಿ ಬಹಳ ಕೆಳಗಿದ್ದಾರೆ. ವಿರಾಟ್‌ಗೂ ಮುಂಚಿತವಾಗಿ ಈ ಪಟ್ಟಿಯಲ್ಲಿ ಇಬ್ಬರು ಭಾರತೀಯ ಆಟಗಾರರು ಸ್ಥಾನ ಪಡೆದಿದ್ದಾರೆ. ವಿರಾಟ್ ಚಾಂಪಿಯನ್ಸ್ ಟ್ರೋಫಿಯಲ್ಲಿ 529 ರನ್ ಸಿಡಿಸಿದ್ದಾರೆ.

ಕ್ರಿಸ್ ಗೇಲ್, ವೆಸ್ಟ್ ಇಂಡೀಸ್, 791 ರನ್
ಮಹೇಲ್ ಜಯವರ್ಧನೆ, ಶ್ರೀಲಂಕಾ, 742 ರನ್
ಶಿಖರ್ ಧವನ್, ಭಾರತ, 701 ರನ್
ಕುಮಾರ್ ಸಂಗಕ್ಕಾರ, ಶ್ರೀಲಂಕಾ 683 ರನ್
ಸೌರವ್ ಗಂಗೂಲಿ, ಭಾರತ 665 ರನ್
ಭಾರತದ ಪರ ವಿರಾಟ್ ಕೊಹ್ಲಿ ಈಗಾಗಲೇ ಮೂರು ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು ಆಡಿದ್ದಾರೆ. 2009, 2013 ಮತ್ತು 2017 ರಲ್ಲಿ ವಿರಾಟ್ ಆರ್ಭಟ ನಡೆಸಿದ್ದಾರೆ. ಕೊಹ್ಲಿ ಆಡಿದ 13 ಪಂದ್ಯಗಳ 12 ಇನ್ನಿಂಗ್ಸ್‌ಗಳಲ್ಲಿ 529 ರನ್ ಗಳಿಸಿದ್ದು, ಇವರ ಸ್ಟ್ರೈಕ್ ರೇಟ್ 92.32 ಆಗಿದೆ. ವಿರಾಟ್ ಕೊಹ್ಲಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಒಟ್ಟು ಐದು ಅರ್ಧಶತಕ ಬಾರಿಸಿದ್ದು, ಒಂದೇ ಒಂದು ಶತಕ ಸಹ ದಾಖಲಾಗಿಲ್ಲ.