ಒಂದೇ ಬೌಂಡರಿಗೆ ಕೊಹ್ಲಿ ಸಂಭ್ರಮ, ಟ್ವಿಟರ್‌ನಲ್ಲಿ ಟ್ರೋಲ್ ಆದ ವಿರಾಟ್

ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ಕೆಕೆಆರ್ ವಿರುದ್ಧ ಅಮೋಘ ಪ್ರದರ್ಶನ ತೋರಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) 82 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಎಬಿ ಡಿ ವಿಲಿಯರ್ಸ್ ಅಬ್ಬರದ ಬ್ಯಾಟಿಂಗ್‌ಗೆ ಕೆಕೆಆರ್ ನೆಲಕಚ್ಚಿತು.
ಸೋಮವಾರ ಶಾರ್ಜಾದಲ್ಲಿ ನಡೆದ ಎಬಿ ಡಿವಿಲಿಯರ್ಸ್ ಬ್ಯಾಟಿಂಗ್ ಬಗ್ಗೆ ದಿಗ್ಗಜರೇ ಹಾಡಿ ಹೊಗಳಿದ್ದಾರೆ. ಅಷ್ಟೇ ಏಕೆ ಕೇವಲ 33 ಎಸೆತಗಳಲ್ಲಿ ಅಜೇಯ 73 ರನ್ ಗಳಿಸಿದ ಎಬಿಡಿ ಆರು ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿದ್ರು. ಎರಡು ಬಾರಿ ಚೆಂಡು ಸ್ಟೇಡಿಯಂ ದಾಟಿ ಹೊರಗೆ ಚಲಿಸುತ್ತಿದ್ದ ಕಾರಿಗೆ ಅಪ್ಪಳಿಸಿತು.
ಆದರೆ ಮತ್ತೊಂದೆಡೆ ಎಬಿಡಿ ಜೊತೆಗೆ ಶತಕದ ಜೊತೆಯಾಟಕ್ಕೆ ಸಾಕ್ಷಿಯಾದ ವಿರಾಟ್ ಕೊಹ್ಲಿ ಬೌಂಡರಿ ಸಿಡಿಸಲು 19ನೇ ಓವರ್‌ವರೆಗೆ ಕಾಯಬೇಕಾಯಿತು. ಅದೂ ಕೂಡ ತಮ್ಮ 25 ಎಸೆತವನ್ನು ಎದುರಿಸುವಾಗ ಅನ್ನೋದು ಆಶ್ಚರ್ಯಕ್ಕೆ ಎಡೆಮಾಡಿತು.
ಇನ್ನಿಂಗ್ಸ್‌ನ 19 ನೇ ಓವರ್‌ನಲ್ಲಿ ಪ್ರಸಿದ್ಧ್ ಕೃಷ್ಣ ಬೌಲಿಂಗ್‌ನಲ್ಲಿ ಚೆಂಡು ಬ್ಯಾಟ್‌ನ ಅಂಚಿಗೆ ತಾಗಿ ಥರ್ಡ್ ಮ್ಯಾನ್ ಮೂಲಕ ಬೌಂಡರಿ ಗೆರೆ ಮುಟ್ಟಿತು. ಇದರಿಂದ ಕೊಹ್ಲಿ ತನ್ನ ಮೊದಲ ಬೌಂಡರಿ ಹೊಡೆದಿದ್ದಕ್ಕೆ ಸಂತೋಷದಿಂದ ರೋಮಾಂಚಗೊಂರು. ಅವರು ತಮ್ಮ ಮುಷ್ಟಿ ಪಂಪ್ ಮೂಲಕ ಬೌಂಡರಿ ಸಿಡಿಸಿದ್ದನ್ನ ಸಂಭ್ರಮಿಸಿದರು.
ಏಕೈಕ ಬೌಂಡರಿಯೊಂದಿಗೆ ಇನ್ನಿಂಗ್ಸ್ ಅನ್ನು ಕೊನೆಗೊಳಿಸಿದ ಅವರು ಇನಿಂಗ್ಸ್ನ 8 ನೇ ಓವರ್‌ನಲ್ಲಿ ಬ್ಯಾಟಿಂಗ್ ಮಾಡಲು ಬಂದ ನಂತರ 28 ಎಸೆತಗಳಲ್ಲಿ 33 ರನ್ ಗಳಿಸಿ ಅಜೇಯರಾಗಿದ್ದರು.
ಏತನ್ಮಧ್ಯೆ, ವಿರಾಟ್ ಕೊಹ್ಲಿ ಬೌಂಡರಿ ಹೊಡೆದ ನಂತರ ಅವರ ಪ್ರತಿಕ್ರಿಯೆಗಾಗಿ ಟ್ವಿಟರ್‌ನಲ್ಲಿ ಸಾಕಷ್ಟು ಜನರು ಟ್ರೋಲ್ ಮಾಡಲಾಯಿತು. ತನ್ನ ಪಾಲುದಾರನಿಗೆ(ಎಬಿಡಿ) ಹೋಲಿಸಿದರೆ ಅವನು ತುಂಬಾ ನಿಧಾನವಾಗಿದ್ದರಿಂದ ಮತ್ತು ಅಲ್ಲಿಯವರೆಗೆ ಅವನು ಉಳಿದುಕೊಂಡ ಸಮಯದಲ್ಲಿ ಅನೇಕ ಚೆಂಡುಗಳನ್ನು ಎದುರಿಸಿದ್ದರು ಮೊದಲು ಬೌಂಡರಿ ಸಂಭ್ರಮವನ್ನು ನೋಡಿ ಟ್ವಿಟರ್ನಲ್ಲಿ ಟ್ರೋಲ್ ಮಾಡಲಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications