For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ಬೌಲರ್‌ಗಳನ್ನು ಕಾಡಲು ರೆಡಿಯಾಗಿದ್ದಾರೆ ವಿರಾಟ್: ತವರಿನಲ್ಲಿ ಕೊಹ್ಲಿ ಆರ್ಭಟ

ಭಾರತ ಹಾಗೂ ಇಂಗ್ಲೆಂಡ್ ನಡುವಣ ಏಕದಿನ ಸರಣಿ ಗುರುವಾರದಿಂದ ಆರಂಭವಾಗಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾದ ಪರ ಸೂಪರ್ ಸ್ಟಾರ್ ಆಟಗಾರರು ಅಂಗಳ ಪ್ರವೇಶಿಸಲಿದ್ದಾರೆ. ಈ ವೇಳೆ ಅನುಭವಿ ಆಟಗಾರರು ಕಣ್ಣು ದಾಖಲೆಯ ಮೇಲೆ ನೆಟ್ಟಿರಲಿದೆ. ಇನ್ನು ಟೀಮ್ ಇಂಡಿಯಾದ ಆಟಗಾರರು ಚಾಂಪಿಯನ್ಸ್‌ ಟ್ರೋಫಿಗೂ ಮುನ್ನವೇ ಲಯಕ್ಕೆ ಮರಳಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.

ದೇಶೀಯ ಟೂರ್ನಿಗಳಲ್ಲಿ ಆಡಿದ ಬಳಿಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶುಭಮನ್‌ ಗಿಲ್, ರವೀಂದ್ರ ಜಡೇಜಾ ಈಗ ರಾಷ್ಟ್ರೀ ತಂಡದ ಪರ ಮಿಂಚಲು ತಯಾರಾಗಿದ್ದಾರೆ. ಭಾರತದ ಪರ ಅಬ್ಬರಿಸಲು ಸ್ಟಾರ್ ಆಟಗಾರರು ತಯಾರಾಗಿದ್ದಾರೆ. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಸೇರಿದಂತೆ ಹಲವು ಆಟಗಾರರು ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ. ಈ ವೇಳೆ ವಿರಾಟ್‌ ಕೊಹ್ಲಿ ಅವರ ದಾಖಲೆ ನಿಜಕ್ಕೂ ಇಂಗ್ಲೆಂಡ್ ಕ್ಯಾಂಪ್ ಚಿಂತೆಯನ್ನು ದ್ವಿಗುಣಗೊಳಿಸಿದೆ.

Virat Kohli Gears Up to Dominate England Bowlers in ODI Series

ಇಂಗ್ಲೆಂಡ್ ವಿರುದ್ಧ ಭಾರತದಲ್ಲಿ ಹೇಗಿದೆ ದಾಖಲೆ?

ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಹೀಗಾಗಿ ಟೀಕೆಗಳು ಸಹ ಕೇಳಿ ಬಂದಿದ್ದವು. ವಿರಾಟ್ ಲಯವನ್ನು ಕಂಡುಕೊಳ್ಳಲು ಭಾರತದಲ್ಲಿ ದೇಶೀಯ ಟೂರ್ನಿಗಳನ್ನು ಆಡಿದ್ದಾರೆ. ಆದರೆ ಈ ವೇಳೆಯೂ ರನ್‌ ಕಲೆ ಹಾಕುವಲ್ಲಿ ವಿಫಲರಾಗಿದ್ದಾರೆ. ಆದರೆ ಇವರಿಗೆ ಮ್ಯಾಚ್ ಪ್ರ್ಯಾಕ್ಟಿಸ್ ಆಗಿದ್ದರಿಂದ ಇಂಗ್ಲೆಂಡ್ ವಿರುದ್ಧ ಅಬ್ಬರಿಸಬಹುದು ಎಂಬ ಪ್ಲ್ಯಾನ್ ಮಾಡಿಕೊಳ್ಳಲಾಗಿದೆ.

ಅಂದಹಾಗೆ ವಿರಾಟ್ ಕೊಹ್ಲಿ ಅಂಕಿ ಅಂಶಗಳು ತವರಿನಲ್ಲಿ ಇಂಗ್ಲೆಂಡ್‌ ವಿರುದ್ಧ ಅಮೋಘವಾಗಿವೆ. ಇಂಗ್ಲೆಂಡ್ ವಿರುದ್ಧ ಕೊಹ್ಲಿ ಭಾರತದಲ್ಲಿ ಒಟ್ಟು 18 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಅವರ ಸರಾಸರಿ 49 ಆಗಿದ್ದು, 747 ರನ್‌ ಕಲೆ ಹಾಕಿದ್ದಾರೆ. ಇದರಲ್ಲಿ 5 ಅರ್ಧಶತಕಗಳು ಹಾಗೂ 2 ಶತಕಗಳು ಸೇರಿವೆ. ಇನ್ನು ನಾಗ್ಪುರ್‌ ಅಂಗಳದಲ್ಲಿ ವಿರಾಟ್ ಹೇಗೆ ಬ್ಯಾಟಿಂಗ್ ನಡೆಸಲಿದ್ದಾರೆ ಎಂಬ ಬಗ್ಗೆ ಪ್ರಶ್ನೆಗಳು ಎದ್ದಿವೆ.

ಒಟ್ಟಾರೆ ದಾಖಲೆ ಅದ್ಭುತ

ಇಂಗ್ಲೆಂಡ್‌ ವಿರುದ್ಧ ವಿರಾಟ್ ದಾಖಲೆ ಅಮೋಘವಾಗಿದೆ. ಇವರು ಇಂಗ್ಲೆಂಡ್ ವಿರುದ್ಧ ಆಡಿದ 36 ಪಂದ್ಯಗಳಲ್ಲಿ 41ರ ಸರಾಸರಿಯಲ್ಲಿ 1340 ರನ್‌ ಸಿಡಿಸಿದ್ದಾರೆ. ಈ ವೇಳೆ 3 ತತಕ ಹಾಗೂ 9 ಅರ್ಧಶತಕಗಳು ಸೇರಿವೆ. ಈ ಸರಣಿಯಲ್ಲಿ ವಿರಾಟ್ ಕೊಹ್ಲಿ ತಾವು ಕಳೆದುಕೊಂಡಿರುವ ಫಾರ್ಮ್‌ ಮತ್ತೆ ಮರಳಿ ಪಡೆಯುವ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಆದರೆ ವಿರಾಟ್‌ ಅವರ ಆಟಕ್ಕೆ ಕಡಿವಾಣ ಹಾಕಲು ಇಂಗ್ಲೆಂಡ್ ಬೌಲರ್‌ಗಳು ಸಹ ರೆಡಿಯಾಗಿದ್ದಾರೆ.

Virat Kohli Gears Up to Dominate England Bowlers in ODI Series

ಫೆಬ್ರವರಿ 19 ರಿಂದ ಆರಂಭವಾಗುವ ಚಾಂಪಿಯನ್ಸ್‌ ಟ್ರೋಫಿಗೂ ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳವುದು ಅನಿವಾರ್ಯವಾಗಿದೆ. ಅಲ್ಲದೆ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಸ್ಥಿರ ಪ್ರದರ್ಶನ ನೀಡಿದರೆ, ತಂಡದಲ್ಲಿ ಅವರ ಸ್ಥಾನ ಮುಂದುವರೆಯಲಿದೆ. ಇಲ್ಲದೆ ಇದ್ದಲ್ಲಿ ಅವರ ಸ್ಥಾನಕ್ಕೂ ಕುತ್ತು ಬರುವ ಸಾಧ್ಯತೆ ಇದೆ.

Story first published: Wednesday, February 5, 2025, 8:28 [IST]
Other articles published on Feb 5, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+