ವಿಕಲಚೇತನ ಅಭಿಮಾನಿಗೆ ಜೆರ್ಸಿ ಗಿಫ್ಟ್ ನೀಡಿದ ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿಯ 100ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಅಮೋಘ ಗೆಲುವನ್ನ ಸಾಧಿಸುವಲ್ಲಿ ಯಶಸ್ವಿಯಾಯಿತು. ಮೊಹಾಲಿಯಲ್ಲಿ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಸೇರಿದಂತೆ 222 ರನ್‌ಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಮಾಜಿ ನಾಯಕನಿಗೆ ಈ ಪಂದ್ಯ ಮತ್ತಷ್ಟು ಸ್ಮರಣೀಯವನ್ನಾಗಿಸಿದರು.
ಈ ಪಂದ್ಯ ಮುಕ್ತಾಯದ ಬಳಿಕ ಖುಷಿಯಲ್ಲಿದ್ದ ವಿರಾಟ್ ಕೊಹ್ಲಿ ವಿಕಲಚೇತನ ಅಭಿಮಾನಿಗೆ ಹಸ್ತಾಕ್ಷರ ಹೊಂದಿದ್ದ ವಿಶೇಷ ಗಿಫ್ಟ್ ನೀಡುವ ತಮ್ಮ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.
ಮಾಜಿ ನಾಯಕ ವಿರಾಟ್ ಕೊಹ್ಲಿ, ತಮ್ಮ ನೂರನೇ ಟೆಸ್ಟ್ ಪಂದ್ಯದಲ್ಲಿ ದೊಡ್ಡ ಮೊತ್ತ ಕಲೆಹಾಕಲು ವಿಫಲರಾಗಿದ್ದರು. ಮೊದಲ ಇನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ 45 ರನ್ ಬಾರಿಸಿದ್ದೇ ಹೆಚ್ಚು. ವಿರಾಟ್ ಕೊಹ್ಲಿ ತಮ್ಮ ನೂರನೇ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಬಹುದು ಎಂದು ಕಾದಿದ್ದ ಅಭಿಮಾನಿಗಳಿಗೆ ನಿರಾಸೆ ಆಗಿದೆ. ಆದರೆ ಮೈದಾನದಾಚೆ ವಿರಾಟ್ ಕೊಹ್ಲಿ ತೋರಿದ ಒಂದು ಗುಣ ಇದೀಗ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ.
ಹೌದು, ಶ್ರೀಲಂಕಾ ವಿರುದ್ದದ ಪಂದ್ಯ ಮುಕ್ತಾಯದ ಬಳಿಕ ವಿರಾಟ್ ಕೊಹ್ಲಿ, ತಾವು ಬಳಸಿದ್ದ ಜೆರ್ಸಿಯೊಂದನ್ನು ತಮ್ಮ ವಿಕಲಚೇತನ ಅಪ್ಪಟ ಅಭಿಮಾನಿ ಧರ್ಮವೀರ್ ಪಾಲ್‌ಗೆ ಗಿಫ್ಟ್ ಆಗಿ ನೀಡಿದ್ದಾರೆ. ಧರ್ಮವೀರ್ ಪಾಲ್ ಒಂದು ರೀತಿಯಲ್ಲಿ ಅನಧಿಕೃತ ಟೀಂ ಇಂಡಿಯಾ ಹನ್ನೆರಡನೇ ಆಟಗಾರ ಎಂದು ಗುರುತಿಸಿಕೊಂಡಿದ್ದಾರೆ.
ಭಾರತದಾದ್ಯಂತ ಹಾಗೂ ಜಗತ್ತಿನಾದ್ಯಂತ ನಡೆಯಲಿರುವ ಭಾರತದ ಪಂದ್ಯಗಳನ್ನು ವೀಕ್ಷಿಸಲು ಧರ್ಮವೀರ್ ಪಾಲ್ ಸದಾ ಪ್ರವಾಸ ಮಾಡುತ್ತಲೇ ಇರುತ್ತಾರೆ. ಮೊಹಾಲಿ ಟೆಸ್ಟ್ ಮುಗಿಯುತ್ತಿದ್ದಂತೆಯೇ ಟೀಂ ಇಂಡಿಯಾ ಬಸ್ ಜತೆಗೆ ಹೋಟೆಲ್‌ಗೆ ತೆರಳುವ ಮುನ್ನ ವಿರಾಟ್ ಕೊಹ್ಲಿ, ತಮ್ಮ ಅಭಿಮಾನಿ ಬಳಿ ಬಂದು ಜೆರ್ಸಿ ಗಿಫ್ಟ್ ನೀಡಿದ್ದಾರೆ. ಈ ವವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಭಾನುವಾರ ಸಂಜೆ, ಕೊಹ್ಲಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದರು, ತನ್ನ 100ನೇ ಟೆಸ್ಟ್ ಪಂದ್ಯದ ಬಳಿಕ ಈ ದೊಡ್ಡ ಪ್ರಯಾಣಕ್ಕಾಗಿ ಅಭಿಮಾನಿಗಳಿಗೆ ಧನ್ಯವಾದಗಳು ಎಂದು ತಿಳಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications