ICC ಟ್ರೋಫಿ ಗೆಲ್ಲದಿದ್ದಕ್ಕೆ ವಿರಾಟ್ ಕೊಹ್ಲಿ ನಾಯಕತ್ವ ಕಳೆದುಕೊಂಡ: ಸಾಬಾ ಕರೀಂ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟಿ20 ನಾಯಕತ್ವ ತ್ಯಜಿಸಿದ ಬಳಿಕ, ಏಕದಿನ ಕ್ರಿಕೆಟ್ ನಾಯಕತ್ವವನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಬಹುದು ಎಂದು ಊಹಿಸಿರ್ಲಿಲ್ಲ. ಟಿ20 ವಿಶ್ವಕಪ್‌ಗೂ ಮೊದಲೇ ಕೊಹ್ಲಿ ಚುಟುಕು ಫಾರ್ಮೆಟ್ ನಾಯಕತ್ವ ಬಿಟ್ಟುಕೊಡುವುದಾಗಿ ಹೇಳಿದ್ರು. ಆದ್ರೆ ಏಕದಿನ ನಾಯಕತ್ವವನ್ನ ಬಿಸಿಸಿಐ ಒತ್ತಡಕ್ಕೆ ಮಣಿದು ಬಿಟ್ಟುಕೊಡಬೇಕಾಯಿತು.
ವಿರಾಟ್ ಕೊಹ್ಲಿ ಏಕದಿನ ನಾಯಕತ್ವವನ್ನ ತಾವಾಗಿಯೇ ಬಿಟ್ಟುಕೊಡುವಂತೆ ಬಿಸಿಸಿಐ ಎರಡು ದಿನಗಳ ಅವಕಾಶ ನೀಡಿತ್ತು. ಆದ್ರೆ ವಿರಾಟ್ ಇದಕ್ಕೆ ಒಪ್ಪದ ಕಾರಣ ವಿಶ್ವದ ಕ್ರಿಕೆಟ್ ದೊಡ್ಡಣ್ಣ ಈ ಕಠಿಣ ನಿರ್ಧಾರವನ್ನ ತೆಗೆದುಕೊಂಡಿತು. ಟಿ20 ವಿಶ್ವಕಪ್ ನಾಯಕತ್ವ ಬಿಟ್ಟುಕೊಟ್ಟ ಪರಿಣಾಮ ಲಿಮಿಟೆಡ್ ಓವರ್ ಕ್ರಿಕೆಟ್‌ಗೆ ಒಬ್ಬನೇ ನಾಯಕನಿರಬೇಕು ಎಂಬ ಉದ್ದೇಶದಿಂದ ಬಿಸಿಸಿಐ ಈ ದೊಡ್ಡ ನಿರ್ಧಾರ ತೆಗೆದುಕೊಂಡಿತು.

ಐಸಿಸಿ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ
ಒಡಿಐ ನಾಯಕನಾಗಿ ವಿರಾಟ್ ಕೊಹ್ಲಿ ಅವರ ದಾಖಲೆ ಅದ್ಭುತವಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾದಂತಹ ಬಲಿಷ್ಠ ರಾಷ್ಟ್ರಗಳ ಎದುರು ಸರಣಿ ಗೆಲುವು ತಂದುಕೊಟ್ಟಿದ್ದಾರೆ. ವಿರಾಟ್ ನಾಯಕತ್ವದಲ್ಲಿ ಟೀಂ ಇಂಡಿಯಾ 19 ಏಕದಿನ ದ್ವಿಪಕ್ಷೀಯ ಸರಣಿಗಳಲ್ಲಿ 15 ಪಂದ್ಯಗಳನ್ನು ಗೆದ್ದಿದೆ. ತವರು ನೆಲದಲ್ಲಿ, ಅವರು 9 ದ್ವಿಪಕ್ಷೀಯ ಸರಣಿಗಳಲ್ಲಿ 8 ಅನ್ನು ಗೆದ್ದರು ಆದರೆ ವಿರಾಟ್ ICC ಟ್ರೋಫಿ ಗೆಲ್ಲಲು ವಿಫಲರಾದರು. ಈ ಕಾರಣಕ್ಕೆ ಕೊಹ್ಲಿಯನ್ನ ಏಕದಿನ ನಾಯಕತ್ವದ ಸ್ಥಾನದಿಂದ ಕೊಹ್ಲಿಯನ್ನು ವಜಾ ಮಾಡಲಾಗಿದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಸಾಬಾ ಕರೀಂ ಅಭಿಪ್ರಾಯಪಟ್ಟಿದ್ದಾರೆ.
ಭಾರತ-ದಕ್ಷಿಣ ಆಫ್ರಿಕಾ ಸರಣಿ: ಟೆಸ್ಟ್ ತಂಡದಿಂದ ಈ ಮೂವರನ್ನ ಹೊರಗಿಟ್ಟಿದ್ದೇ ಆಶ್ಚರ್ಯ!

ಏಕದಿನ ನಾಯಕತ್ವದಲ್ಲಿ ಉಳಿಯುವ ಮನಸ್ಸು ಮಾಡಿದ್ದ ಕೊಹ್ಲಿ
33 ವರ್ಷದ ಕೊಹ್ಲಿ ಸ್ವತಃ T20 ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ಘೋಷಿಸಿದರು. ಆದರೆ ODI ನಾಯಕನಾಗಿ ಉಳಿಯಲು ಬಯಸುತ್ತಾರೆ ಎಂದು ಕರೀಮ್ ಮತ್ತಷ್ಟು ಬೆಂಬಲಿಸಿದ್ದಾರೆ. ಬಿಸಿಸಿಐ ಹೀಗೆ ಬಲವಂತವಾಗಿ ಕೊಹ್ಲಿಯನ್ನು ಏಕದಿನ ನಾಯಕತ್ವದಿಂದ ತೆಗೆದುಹಾಕಲು ಪ್ರಮುಖ ಕಾರಣ ಐಸಿಸಿ ಟ್ರೋಫಿ ಗೆಲ್ಲಲು ಸಾಧ್ಯವಾಗದಿರುವುದು ಎಂದು ಕರೀಮ್ ಅಂದಾಜಿಸಿದ್ದಾರೆ.

ಈ ಮೊದಲೇ ಇಬ್ಬರು ನಾಯಕರ ಬಗ್ಗೆ ಕೊಹ್ಲಿಗೆ ತಿಳಿಸಲಾಗಿತ್ತು?
ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅಥವಾ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯ ಯಾವುದೇ ಅಧಿಕಾರಿಗಳು ವಿಭಜಿತ ನಾಯಕತ್ವದ ಬಗ್ಗೆ ಕೊಹ್ಲಿಯೊಂದಿಗೆ ಮಾತನಾಡಿದ್ದರು ಎಂದು ಸಾಬಾ ಕರೀಂ ಭಾವಿಸಿದ್ದಾರೆ. ದ್ರಾವಿಡ್ ಯಾವಾಗಲೂ ತನ್ನ ಆಟಗಾರರೊಂದಿಗೆ ಸ್ಪಷ್ಟವಾದ ಸಂವಹನವನ್ನು ಹೊಂದಲು ಬಯಸುವ ವ್ಯಕ್ತಿ ಎಂದು ಕರೀಮ್ ಹೇಳಿದ್ದಾರೆ.
"ರಾಹುಲ್ ದ್ರಾವಿಡ್ ಅಥವಾ ಬಿಸಿಸಿಐನ ಯಾರಾದರೂ ವಿರಾಟ್ ಕೊಹ್ಲಿ ಅವರೊಂದಿಗೆ ವಿಭಜಿತ ನಾಯಕತ್ವವನ್ನು ಪರಿಚಯಿಸುವ ಯೋಜನೆಗಳ ಬಗ್ಗೆ ಮಾತನಾಡಿದ್ದರು ಎಂದು ನನಗೆ ವಿಶ್ವಾಸವಿದೆ. ದ್ರಾವಿಡ್ ಆಗಾಗ್ಗೆ ಆಟಗಾರರೊಂದಿಗೆ ಸ್ಪಷ್ಟವಾದ ಸಂವಹನವನ್ನು ಹೊಂದಲು ಹೆಚ್ಚಿನ ಒತ್ತು ನೀಡುತ್ತಾರೆ. ಆದ್ದರಿಂದ, ಅಂತಹ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುವಾಗ, ಯಾರಾದರೂ ಖಂಡಿತವಾಗಿಯೂ ಕೊಹ್ಲಿಯೊಂದಿಗೆ ಮಾತನಾಡಿರುತ್ತಾರೆ ಎಂದು ನಾನು ನಂಬುತ್ತೇನೆ " ಎಂದು ಕರೀಂ ಹೇಳಿದ್ದಾರೆ.

2023ರ ವಿಶ್ವಕಪ್ ಮೇಲೆ ಬಿಸಿಸಿಐ ಕಣ್ಣು
ಹೌದು, ಮುಂಬರುವ ಏಕದಿನ ವಿಶ್ವಕಪ್ ಮೇಲೆ ಬಿಸಿಸಿಐ ಕಣ್ಣಟ್ಟಿದೆ. ಈಗಿನಿಂದಲೇ ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾರನ್ನ ನಾಯಕ ಸ್ಥಾನದಲ್ಲಿ ಕೂರಿಸಿದ್ರೆ, ತಂಡವು ಸಿದ್ಧಗೊಳ್ಳಲು ಸಹಾಯವಾಗುತ್ತದೆ. ಜೊತೆಗೆ ರೋಹಿತ್ ಶರ್ಮಾ ಕೂಡ ನಾಯಕತ್ವದ ಮೇಲೆ ಮತ್ತಷ್ಟು ಹಿಡಿತ ಸಾಧಿಸಲು ಸಾಧ್ಯ ಎನ್ನುವುದು ಬಿಸಿಸಿಐ ಮುಂದಾಲೋಚನೆಯಾಗಿದೆ.

ಉಪನಾಯಕತ್ವ ಸ್ಥಾನವನ್ನು ಕಳೆದುಕೊಳ್ತಾರ ಕೊಹ್ಲಿ?
ಈಗಾಗಲೇ ಟಿ20, ಏಕದಿನ ಕ್ರಿಕೆಟ್ ನಾಯಕತ್ವ ಕಳೆದುಕೊಂಡಿರುವ ಕೊಹ್ಲಿ ಭವಿಷ್ಯದಲ್ಲಿ ಉಪನಾಯಕತ್ವ ಸ್ಥಾನವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಕೊಹ್ಲಿ-ರೋಹಿತ್ ಯುಗಾಂತ್ಯದ ಬಳಿಕ ಭವಿಷ್ಯದ ಟೀಂ ಇಂಡಿಯಾ ನಾಯಕನನ್ನ ಈಗಿನಿಂದಲೇ ಹುಡುಕಿಕೊಳ್ಳಬೇಕಿದೆ. ಹೀಗಾಗಿ ಲಿಮಿಟೆಡ್ ಓವರ್ ಕ್ರಿಕೆಟ್‌ನಲ್ಲಿ ಉಪನಾಯಕತ್ವವನ್ನ ಕೊಹ್ಲಿಯಿಂದ , ಕೆ.ಎಲ್ ರಾಹುಲ್‌ಗೆ ವರ್ಗಾಯಿಸಿದ್ರೂ ಆಶ್ಚರ್ಯವಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications