Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಚಿನ್ 'ಶತಕದ ಶತಕ' ದಾಖಲೆ ಮುರಿಯಲು ಕೊಹ್ಲಿ ಬಳಿಯಿದೆ 3 ಬಲ: ಬ್ರೆಟ್‌ ಲೀ

 Virat Kohli Has Got Talent, Fitness And Mental Strength To Go Past Sachin Tendulkar: Brett Lee

ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅನೇಕ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಯುತ್ತಿದ್ದಾರೆ. ಅದರಲ್ಲೂ ಸಚಿನ್ ಬಾರಿಸಿದ ಶತಕದ ದಾಖಲೆಯ ಬೆನ್ನುಹತ್ತಿದಂತಿದೆ ವಿರಾಟ್ ಕೊಹ್ಲಿ.43 ಏಕದಿನ ಶತಕ ದಾಖಲಿಸಿರುವ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನ ಶತಕದ ದಾಖಲೆಯ ಸಂಖ್ಯೆಗೆ ಹೆಚ್ಚೇನು ದೂರವಿಲ್ಲ.

ಸಚಿನ್ ದಾಖಲಿಸಿದ ಅಸಾಮಾನ್ಯ ದಾಖಲೆಯೆಂದರೆ ಅದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕಗಗಳನ್ನು ಬಾರಿಸಿದ್ದು. ವಿರಾಟ್ ಕೊಹ್ಲಿ ಸಚಿನ್ ತೆಂಡೂಲ್ಕರ್ ಅವರ ಈ ದಾಖಲೆಯನ್ನು ಮುರಿಯಲಿದ್ದಾರೆ ಎಂದು ಆಸ್ಟ್ರೇಲಿಯಾದ ವೇಗಿ ಬ್ರೇಟ್ ಲೀ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಮುಂದಿನ 7-8 ವರ್ಷದಲ್ಲಿ ಸಚಿನ್ ತೆಂಡೂಲ್ಕರ್ ಅವರ 100 ಶತಕಗಳ ದಾಖಲೆಯನ್ನು ಮುರಿಯಲಿದ್ದಾರೆ. ಅದಕ್ಕೆ ಪೂರಕವಾದ ಎಲ್ಲಾ ಸಾಮರ್ಥ್ಯವೂ ವಿರಾಟ್ ಕೊಹ್ಲಿ ಅವರಲ್ಲಿ ಇದೆ ಎಂದು ಬ್ರೆಟ್ ಲೀ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಸಚಿನ್ ಮಾಡಿದ ದಾಖಲೆಯನ್ನು ಮೀರಲು ವಿರಾಟ್ ಕೊಹ್ಲಿಯಲ್ಲಿ ಬೇಕಾದ ಎಲ್ಲಾ ಪ್ರಮುಖ ಅಂಶಗಳೂ ಇವೆ ಎಂದಿದ್ದಾರೆ ಬ್ರೆಟ್‌ಲೀ. ಒಂದು ವಿರಾಟ್ ಕೊಹ್ಲಿಯಲ್ಲಿ ಈ ದಾಖಲೆಯನ್ನು ಮೀರಿ ನಿಲ್ಲುವ ಪ್ರತಿಭೆ ಯಿದೆ. ಅದು ಸಚಿನ್ ದಾಖಲೆಯನ್ನು ಮುರಿಯಲ ಸಹಕಾರಿಯಾಗಲಿದೆ ಎಂದಿದ್ದಾರೆ.

"ಈ ದೊಡ್ಡ ದಾಖಲೆಯನ್ನು ಮುರಿಯಲು ಬೇಕಾದ ಎರಡನೇ ಅಂಶ ಫಿಟ್‌ನೆಸ್. ವಿರಾಟ್ ಕೊಹ್ಲಿ ಅದನ್ನು ಅದ್ಭುತವಾಗಿ ಕಾಪಾಡಿಕೊಂಡು ಬಂದಿದ್ದಾರೆ. ಫಿಟ್‌ನೆಸ್ ಈ ವಿಚಾರದಲ್ಲಿ ಪ್ರಮುಖವಾಗಿರುತ್ತದೆ, ಇನ್ನೊಂದು ಪ್ರಮುಖ ವಿಚಾರವೇನೆಂದರೆ ಮಾನಸ್ಥಿಕ ಸ್ಥೈರ್ಯ, ಇದೆಲ್ಲವೂ ಕೊಹ್ಲಿಯ ಬಳಿ ಇದೆ" ಎಂದು ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೇಟ್‌ ಲೀ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Story first published: Sunday, April 26, 2020, 10:17 [IST]
Other articles published on Apr 26, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+