ಅಂಡರ್-19 ವಿಶ್ವಕಪ್ ಫೈನಲ್ ಹಿನ್ನಲೆ: ಭಾರತ ಜ್ಯೂನಿಯರ್ ತಂಡಕ್ಕೆ ಸಲಹೆ ನೀಡಿದ ವಿರಾಟ್ ಕೊಹ್ಲಿ

ವೆಸ್ಟ್ ಇಂಡೀಸ್‌ನಲ್ಲಿ ನಡೆಯುತ್ತಿರುವ ಅಂಡರ್-19 ವಿಶ್ವಕಪ್ ಸೆಮಿಫೈನ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನ 96 ರನ್‌ಗಳಿಸಿದ ಮಣಿಸಿದ ಭಾರತ ಜ್ಯೂನಿಯರ್ ತಂಡವು ಈಗಾಗಲೇ ಫೈನಲ್ ಪ್ರವೇಶಿಸಿದೆ. ಇಂಗ್ಲೆಂಡ್ ವಿರುದ್ಧ ಫೈನಲ್ ಪಂದ್ಯವನ್ನಾಡಲಿರುವ ಭಾರತ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅಮೂಲ್ಯ ಸಲಹೆಗಳನ್ನ ನೀಡಿದ್ದಾರೆ.
2008ರ ಐಸಿಸಿ ಅಂಡರ್-19 ವಿಶ್ವಕಪ್‌ನಲ್ಲಿ ಭಾರತ ತಂಡವನ್ನ ಗೆಲುವಿನತ್ತ ಮುನ್ನಡೆಸಿದ್ದ ವಿರಾಟ್ ಕೊಹ್ಲಿ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನ 12 ರನ್‌ಗಳಿಂದ ಮಣಿಸಿ ಟ್ರೋಫಿ ಗೆದ್ದು ಕೊಟ್ಟಿದ್ದರು. ಫೈನಲ್‌ನಲ್ಲಿ ಭಾರತವನ್ನ ಮುನ್ನೆಡೆಸಿರುವ ಅನುಭವದ ಹೊಂದಿರುವ ಕೊಹ್ಲಿ ಪ್ರಸ್ತುತ ಯಶ್ ಧುಲ್ ನಾಯಕತ್ವದ ಅಂಡರ್ 19 ತಂಡಕ್ಕೆ ಡಿಸೈಡರ್ ಪಂದ್ಯ ಹೇಗೆ ಎದುರಿಸಬೇಕೆಂದು ಸಲಹೆ ನೀಡಿದ್ದಾರೆ.
ಭಾರತದ ಅಂಡರ್-19 ತಂಡದ ಆಟಗಾರರಾದ ಯಶ್ ಧುಲ್, ರಾಜ್ಯವರ್ಧನ್ ಹಂಗರ್ಗೇಕರ್, ಕೌಶಲ್ ತಾಂಬೆ ಮತ್ತು ಇತರರು ಕ್ರಿಕೆಟ್ ಐಕಾನ್‌ನಿಂದ ಅನುಭವದ ಪಾಠಗಳನ್ನು ಪಡೆಯುವ ಅವಕಾಶವನ್ನು ಪಡೆದರು.
ಈ ಕುರಿತ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಶೇರ್ ಮಾಡಿರುವ ರಾಜ್ಯವರ್ಧನ್ ಹಂಗರ್ಗೇಕರ್, ಕೊಹ್ಲಿ ಜೊತೆಗಿನ ಸಂವಾದದ ಅನುಭವವನ್ನ ಖುಷಿಯಿಂದ ಸ್ಟೋರಿಯಲ್ಲಿ ಹಾಕಿದ್ದಾರೆ. ಅವರು ಕೊಹ್ಲಿಯಿಂದ ಕ್ರಿಕೆಟ್ ಮತ್ತು ಜೀವನದ ಬಗ್ಗೆ ಕೆಲವು ಪ್ರಮುಖ ಪಾಠಗಳನ್ನು ಕಲಿತಿದ್ದಾರೆ ಎಂದು ಹೇಳಿದ್ದು, ಇದು ಸಹಾಯ ಮಾಡುತ್ತದೆ ಎಂದು ಹೇಳಿದರು.
"ನಿಮ್ಮೊಂದಿಗೆ ಸಂವಹನ ನಡೆಸುವುದು ನಿಜವಾಗಿಯೂ ಒಳ್ಳೆಯದು ವಿರಾಟ್ ಕೊಹ್ಲಿ ಭೈಯ್ಯಾ . ನಿಮ್ಮಿಂದ ಜೀವನ ಮತ್ತು ಕ್ರಿಕೆಟ್‌ನ ಕುರಿತು ಕೆಲವು ಪ್ರಮುಖ ವಿಷಯಗಳನ್ನು ಕಲಿತಿದ್ದೇನೆ ಅದು ಮುಂಬರುವ ದಿನಗಳಲ್ಲಿ ಉತ್ತಮವಾಗಿ ನಮಗೆ ಸಹಾಯ ಮಾಡುತ್ತದೆ ಎಂದು ಹಂಗರ್‌ಗೇಕರ್ ಇನ್‌ಸ್ಟಾಗ್ರಾಮನ್‌ನಲ್ಲಿ ಹೇಳಿದ್ದಾರೆ.

ಇನ್ನು ಕೌಶಲ್ ತಾಂಬೆ ಕೂಡ ಕೊಹ್ಲಿ ಜೊತೆಗಿನ ಸಂವಾದವನ್ನ ಬಹಿರಂಗಪಡಿಸಿದರು. "ಫೈನಲ್ ಪಂದ್ಯದ ಮೊದಲು GOAT ನಿಂದ ಕೆಲವು ಅಮೂಲ್ಯ ಸಲಹೆಗಳು" ಎಂದು ತಾಂಬೆ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
ಭಾರತ ಅಂಡರ್-19 ತಂಡವು ಫೈನಲ್‌ನಲ್ಲಿ ಇಂಗ್ಲೆಂಡ್ ಅಂಡರ್-19 ತಂಡವನ್ನು ಎದುರಿಸಲಿದ್ದು, ಫೈನಲ್ ಪಂದ್ಯವು ಫೆಬ್ರವರಿ 5ರಂದು ಭಾರತೀಯ ಕಾಲಮಾನ ಸಂಜೆ 6.30ಕ್ಕೆ ಪ್ರಾರಂಭವಾಗಲಿದೆ. ಅಂತಿಮ ಪಂದ್ಯಕ್ಕೆ ಆ್ಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂ ಆತಿಥ್ಯ ವಹಿಸಲಿದೆ.
ಇನ್ನು ಟೀಂ ಇಂಡಿಯಾ ಫೆಬ್ರವರಿ 6ರಿಂದ ವೆಸ್ಟ್ ಇಂಡೀಸ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾಗಿಯಾಗಲಿದ್ದು, ಅಹಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂದ್ಯಗಳು ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications