ವಿರಾಟ್ ಕೊಹ್ಲಿ ಅದ್ಭುತ ನಾಯಕ, ಆತನಿಗೆ ಇನ್ನೂ 5 ವರ್ಷ ಟೆಸ್ಟ್ ಕ್ರಿಕೆಟ್ ಬಾಕಿಯಿದೆ : MSK ಪ್ರಸಾದ್

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದುಬೈನಲ್ಲಿ ನಡೆದ ಟಿ20 ವಿಶ್ವಕಪ್ ಬಳಿಕ ಚುಟುಕು ಕ್ರಿಕೆಟ್ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದು ನಿಮಗೆಲ್ಲಾ ಗೊತ್ತೇ ಇದೆ. ಇತ್ತೀಚೆಗೆ ಹರಿದಾಡಿರುವ ಸುದ್ದಿ ಪ್ರಕಾರ ಕೊಹ್ಲಿಯನ್ನ ಏಕದಿನ ನಾಯಕತ್ವದಿಂದಲೂ ಕೆಳಗಿಳಿಸುವ ಯೋಚನೆಯಲ್ಲಿ ಬಿಸಿಸಿಐ ಇದೆ.
ಆದ್ರೆ ವಿರಾಟ್ ಕೊಹ್ಲಿ ಭಾರತ ಕಂಡಂತಹ ಅದ್ಭುತ ನಾಯಕರಲ್ಲಿ ಒಬ್ಬ ಎಂಬುದು ಭಾರತದ ಮಾಜಿ ಆಯ್ಕೆಗಾರ ಎಂಎಸ್‌ಕೆ ಪ್ರಸಾದ್‌ರವರ ಅಬಿಪ್ರಾಯವಾಗಿದೆ. ಕೊಹ್ಲಿ ಟೀಂ ಇಂಡಿಯಾವನ್ನ ಯಶಸ್ವಿಯಾಗಿಯೇ ಮುನ್ನಡೆಸಿದ್ದಾರೆ. ಭಾರತ ತಂಡವು 2017 ರ ಚಾಂಪಿಯನ್ಸ್ ಟ್ರೋಫಿಯ ಫೈನಲ್ ತಲುಪಿತ್ತು ಮತ್ತು 2019 ರ ಐವತ್ತು ಓವರ್‌ಗಳ ಏಕದಿನ ವಿಶ್ವಕಪ್‌ನ ಸೆಮಿಫೈನಲ್ ಹಂತಗಳನ್ನು ಕೊಹ್ಲಿ ನೇತೃತ್ವದಲ್ಲಿ ತಲುಪಿದೆ ಎಂದು ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.
"2017 ರ ಚಾಂಪಿಯನ್ಸ್ ಟ್ರೋಫಿಯಲ್ಲಿ, ನಾವು ಫೈನಲಿಸ್ಟ್ ಆಗಿದ್ದೇವೆ, 2019 ರ ವಿಶ್ವಕಪ್ನಲ್ಲಿ ಟೇಬಲ್ ಟಾಪರ್ ಆಗಿದ್ದೆವು. ಆದ್ರೆ ದುರದೃಷ್ಟವಶಾತ್, ಹವಾಮಾನವು ಆ ಆಟದಲ್ಲಿ ದೊಡ್ಡ ಪಾತ್ರವನ್ನು ವಹಿಸಿದೆ ಎಂದು ನಮಗೆಲ್ಲರಿಗೂ ತಿಳಿದಿದೆ'' ಎಂದು ಎಂಎಸ್‌ಕೆ ಪ್ರಸಾದ್ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ತಂಡವನ್ನ ಮುನ್ನಡೆಸಿದ ರೀತಿಯನ್ನ ನೋಡಿದ್ರೆ, ಅವರು ಕೆಟ್ಟದಾಗಿ ತಂಡವನ್ನ ಮುನ್ನಡೆಸಿದ್ದಾರೆ ಎಂದು ನನಗೆ ಅನಿಸುವುದಿಲ್ಲ. ಅವರಿಗೆ ಸಿಕ್ಕ ಎರಡು ಐಸಿಸಿ ಟ್ರೋಫಿಗಳಲ್ಲಿ ಒಂದು ತಂಡವನ್ನ ಫೈನಲ್‌ಗೆ ಕೊಂಡೊಯ್ದಿದ್ದಾರೆ. ಇನ್ನೊಂದರಲ್ಲಿ ದುರದೃಷ್ಟವಶಾತ್ ಸೆಮಿಫೈನಲ್‌ನಲ್ಲಿ ಸೋತಿದ್ದೇವೆ'' ಎಂದು ಎಂಎಸ್‌ಕೆ ಪ್ರಸಾದ್ ಕ್ರಿಕೆಟ್.ಕಾಮ್‌ಗೆ ಉಲ್ಲೇಖಿಸಿ ಮಾತನಾಡಿದ್ದಾರೆ.

ಇಬ್ಬರು ನಾಯಕರ ಸಿದ್ದಾಂತಕ್ಕೆ ಭಾರತ ಅಂಟಿಕೊಳ್ಳಬೇಕು: ಎಂಎಸ್‌ಕೆ ಪ್ರಸಾದ್
ಇತ್ತೀಚೆಗಷ್ಟೇ ಭಾರತ ಟಿ20 ಫಾರ್ಮೆಟ್‌ಗೆ ಹೊಸ ನಾಯಕನಾಗಿ ತಂಡದ ಜವಾಬ್ದಾರಿ ಹೊತ್ತ ರೋಹಿತ್ ಶರ್ಮಾ ಜೊತೆಗೆ ಟೆಸ್ಟ್ ಹಾಗೂ ಏಕದಿನ ಫಾರ್ಮೆಟ್‌ನಲ್ಲಿ ವಿರಾಟ್ ಕೊಹ್ಲಿಯನ್ನ ಮುಂದುವರೆಸಬೇಕು ಎಂಬುದು ಎಂಎಸ್‌ಕೆ ಪ್ರಸಾದ್‌ರ ಅಭಿಪ್ರಾಯವಾಗಿದೆ.
ಭಾರತವು ಇಬ್ಬರು ನಾಯಕರ ಸಿದ್ದಾಂತಕ್ಕೆ ಅಂಟಿಕೊಳ್ಳಬೇಕು. ಪ್ರಸ್ತುತ ಕೊಹ್ಲಿ ಟೆಸ್ಟ್ ಹಾಗೂ ಏಕದಿನ ಫಾರ್ಮೆಟ್‌ನಲ್ಲಿ ತಂಡವನ್ನ ಉತ್ತಮವಾಗೇ ಮುನ್ನಡೆಸುತ್ತಿದ್ದಾರೆ, ರೋಹಿತ್ ನಿಗದಿತ ಓವರ್‌ಗಳ ನಾಯಕನಾಗಿ ಮುಂದುವರಿಯಲಿ ಎಂದಿದ್ದಾರೆ. ಇದರ ಜೊತೆಗೆ ಕೆ.ಎಲ್ ರಾಹುಲ್ ಭವಿಷ್ಯದ ಲಿಮಿಟೆಡ್ ಓವರ್ ಕ್ರಿಕೆಟ್ ನಾಯಕ ಎಂದು ಎಂಎಸ್‌ಕೆ ಅಂದಾಜಿಸಿದ್ದಾರೆ.
ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಚಿಂತನೆಯಲ್ಲಿ ಭಾರತದ ಸ್ಟಾರ್ ಆಲ್‌ರೌಂಡರ್: ವರದಿ

ಕೊಹ್ಲಿಗೆ ಇನ್ನೂ ಐದು ವರ್ಷ ಟೆಸ್ಟ್ ಕ್ರಿಕೆಟ್ ಮುನ್ನೆಡೆಸುವ ಸಾಮರ್ಥ್ಯವಿದೆ
ವಿರಾಟ್ ಕೊಹ್ಲಿ ಅದ್ಭುತ ಟೆಸ್ಟ್ ನಾಯಕ ಎಂದು ಮಾತನಾಡಿರುವ ಪ್ರಸಾದ್, 33 ವರ್ಷದ ಕೊಹ್ಲಿ ಮುಂದಿನ 5 ವರ್ಷಗಳ ಕಾಲ ಭಾರತೀಯ ಟೆಸ್ಟ್ ತಂಡವನ್ನು ಮುನ್ನಡೆಸಬೇಕು ಎಂದು ಹೇಳಿದ್ದಾರೆ.
"ಟೆಸ್ಟ್ ಕ್ರಿಕೆಟ್‌ಗೆ ನಾಯಕನಾಗಿ ಕೊಹ್ಲಿಯವರನ್ನ ಮುಂದಿನ ಐದು ವರ್ಷಗಳ ಕಾಲ ನೋಡಲು ನಾನು ಬಯಸುತ್ತೇನೆ. ಏಕೆಂದರೆ ಅವರು ಅದ್ಭುತ ನಾಯಕರಾಗಿದ್ದಾರೆ ಮತ್ತು ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ತೋರುವ ಎನರ್ಜಿ ಸಂಪೂರ್ಣವಾಗಿ ವಿಭಿನ್ನವಾಗಿದೆ" ಎಂದು ಪ್ರಸಾದ್ ಅಭಿಪ್ರಾಯ ಪಟ್ಟಿದ್ದಾರೆ.
ದ್ರಾವಿಡ್ ಮತ್ತು ಕೊಹ್ಲಿ ಯಾವುದೇ ದೇಶದ ಪಿಚ್‌ನಲ್ಲೂ ಗೆಲ್ಲಲು ರೆಡಿಯಾಗಿದ್ದಾರೆ: ಸಾಬಾ ಕರೀಂ

ಕೊಹ್ಲಿ ನಾಯಕತ್ವದಿಂದ ಕೆಳಗಿಳಿಯಲು ಬಿಸಿಸಿಐ ಏಕೆ ಬಯಸುತ್ತಿದೆ?
ಕೊಹ್ಲಿ ಓಡಿಐ ನಾಯಕತ್ವದಿಂದ ಕೆಳಗಿಳಿಯಲು ಬಿಸಿಸಿಐ ಬಯಸುತ್ತಿದೆ ಎಂದು ವರದಿಗಳು ಹರಿದಾಡುತ್ತಿವೆ. ಭಾರತೀಯ ಕ್ರಿಕೆಟ್ ಮಂಡಳಿಯು ವಿರಾಟ್ ಕೊಹ್ಲಿ ಬ್ಯಾಟಿಂಗ್ ಮೇಲೆ ಹೆಚ್ಚಿನ ಗಮನಹರಿಸಲು ಸಾಧ್ಯವಾಗದೇ ಇರುವುದರಿಂದ ಆತ ನಾಯಕತ್ವದಿಂದ ಕೆಳಗಿಳಿಯುದು ಒಳ್ಳೆಯದು ಎಂದು ಬಯಸುತ್ತಿದೆ. ಜೊತೆಗೆ ಸಂಪೂರ್ಣ ವೈಟ್ ಬಾಲ್ ಕ್ರಿಕೆಟ್‌ಗೆ ಒಬ್ಬನೇ ನಾಯಕನನ್ನ ನಿಯೋಜಿಸಲು ಮನಸ್ಸು ಮಾಡಿದೆ.

ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಕೊಹ್ಲಿ ಭವಿಷ್ಯ ನಿರ್ಧಾರವಾಗಲಿದೆ!
ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತದ ಏಕದಿನ ತಂಡವನ್ನು ಪ್ರಕಟಿಸುವುದರಲ್ಲಿ ಕೊಹ್ಲಿಯ ಏಕದಿನ ನಾಯಕತ್ವದ ಭವಿಷ್ಯ ನಿರ್ಧಾರವಾಗಲಿದೆ. ಏಕೆಂದರೆ 2023 ರ ವಿಶ್ವಕಪ್‌ಗೆ ತಂಡವನ್ನು ಸಿದ್ಧಪಡಿಸಲು ಮತ್ತು ಮುನ್ನಡೆಸಲು ರೋಹಿತ್‌ಗೆ ಹೆಚ್ಚಿನ ಸಮಯ ಸಿಗುತ್ತದೆ ಎಂದು ಬಿಸಿಸಿಐ ಅಧಿಕಾರಿಗಳು ನಂಬಿದ್ದಾರೆ.
"ಈಗಿರುವ ಪರಿಸ್ಥಿತಿಯಲ್ಲಿ, ವಿರಾಟ್ ತಮ್ಮ ಒಡಿಐ ನಾಯಕತ್ವವನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದು ಕಷ್ಟಕರವೆಂದು ತೋರುತ್ತದೆ ಆದರೆ ಈ ವರ್ಷ ಓಡಿಐ ಪ್ರಮುಖವಲ್ಲದ ಕಾರಣ ಮತ್ತು ಇಲ್ಲಿ ಕೆಲವೇ ಪಂದ್ಯಗಳು ಇರುವುದರಿಂದ ನಿರ್ಧಾರವನ್ನ ವಿಳಂಬಗೊಳಿಸುವ ಬಗ್ಗೆ ಯೋಚಿಸಬಹುದು" ಎಂದು ಬಿಸಿಸಿಐ ಹಿರಿಯ ಮೂಲವು ಪಿಟಿಐಗೆ ತಿಳಿಸಿದೆ.

2023ರ ವಿಶ್ವಕಪ್ ಮೇಲೆ ಬಿಸಿಸಿಐ ಕಣ್ಣು
ಹೌದು, ಮುಂಬರುವ ಏಕದಿನ ವಿಶ್ವಕಪ್ ಮೇಲೆ ಬಿಸಿಸಿಐ ಕಣ್ಣಟ್ಟಿದೆ. ಈಗಲೇ ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾರನ್ನ ನಾಯಕ ಸ್ಥಾನದಲ್ಲಿ ಕೂರಿಸಿದ್ರೆ, ತಂಡವು ಸಿದ್ಧಗೊಳ್ಳಲು ಸಹಾಯವಾಗುತ್ತದೆ. ಜೊತೆಗೆ ರೋಹಿತ್ ಶರ್ಮಾ ಕೂಡ ನಾಯಕತ್ವದ ಮೇಲೆ ಮತ್ತಷ್ಟು ಹಿಡಿತ ಸಾಧಿಸಲು ಸಾಧ್ಯ ಎನ್ನುವುದು ಬಿಸಿಸಿಐ ಮುಂದಾಲೋಚನೆಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications