For Quick Alerts
ALLOW NOTIFICATIONS  
For Daily Alerts
 

ಮುಂದಿನ 5 ವರ್ಷವೂ ಒಡಿಐನಲ್ಲಿ ಕೊಹ್ಲಿ ಬೆಸ್ಟ್ ಬ್ಯಾಟ್ಸ್‌ಮನ್: ದೊಡ್ಡ ಗಣೇಶ್

Virat Kohli is Greatest Ever ODI Batsman for Next 5 Years: Dodda Ganesh

ಸಿಡ್ನಿ: ಟೆಸ್ಟ್, ಏಕದಿನ ಮತ್ತು ಟಿ20ಐ ಈ ಮೂರೂ ಕ್ರಿಕೆಟ್ ಮಾದರಿಗಳಲ್ಲಿ ಬೆಸ್ಟ್ ಬ್ಯಾಟ್ಸ್‌ಮನ್‌ಗಳು ಯಾರು ಎಂಬ ವಿಚಾರ ಕ್ರಿಕೆಟ್ ವಲಯದಲ್ಲಿ ಆಗೀಗ ಚರ್ಚೆ ಆಗುತ್ತಲೇ ಇರುತ್ತದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಕೆಲವರು ವಿರಾಟ್ ಕೊಹ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್ ಅಂದರೆ ಇನ್ನೂ ಕೆಲವರು ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ಹೆಸರು ಹೇಳುತ್ತಾರೆ.

ಸ್ಟೀವ್ ಸ್ಮಿತ್ ಮತ್ತು ವಿರಾಟ್ ಕೊಹ್ಲಿ ಬಗ್ಗೆ ಕ್ರಿಕೆಟ್ ವಲಯ ಹೆಚ್ಚು ಚರ್ಚಿಸುತ್ತಿರುತ್ತದೆ. ಸದ್ಯ ನಡೆಯುತ್ತಿರುವ ಭಾರತ vs ಆಸ್ಟ್ರೆಲಿಯಾ ಸರಣಿಯ ವೇಳೆ ಸ್ಮಿತ್-ಕೊಹ್ಲಿ ಬಗೆಗಿನ ಚರ್ಚೆಗಳು ಕಾವೇರುತ್ತಿವೆ. ಇತ್ತೀಚೆಗೆ ಏಕದಿನದಲ್ಲಿ ಸ್ಮಿತ್ ಪ್ರದರ್ಶನ ನೋಡಿ ಹೆಚ್ಚಿನವರು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.

ಮೂರು ಪಂದ್ಯಗಳ ಏಕದಿನ ಸರಣಿ ಮೊದಲ ಎರಡೂ ಪಂದ್ಯಗಳಲ್ಲಿ ಸ್ಮಿತ್ ಉತ್ತಮ ಪ್ರದರ್ಶನ ನೀಡಿದ್ದರು. ಮೊದಲ ಪಂದ್ಯದಲ್ಲಿ 66 ಎಸೆತಗಳಿಗೆ 105 ರನ್, ದ್ವಿತೀಯ ಪಂದ್ಯದಲ್ಲಿ 64 ಎಸೆತಗಳಿಗೆ 104 ರನ್ ಗಳಿಸಿದ್ದರು. ಏಕದಿನವನ್ನು ಟಿ20 ಮಾದರಿಯಂತೆ ಆಡುತ್ತಿರುವ ಸ್ಮಿತ್ ಅವರನ್ನು ಮಾಜಿ ಕ್ರಿಕೆಟರ್ ಗೌತಮ್ ಗಂಭೀರ್ ಶ್ಲಾಘಿಸಿದ್ದರು.

ಗೌತಮ್ ಗಂಭೀರ್ ಹೇಳಿಕೆಗೆ ಭಾರತದ ಮಾಜಿ ಬೌಲರ್, ಕನ್ನಡಿಗ ದೊಡ್ಡ ಗಣೇಶ್ ತಿರುಗೇಟು ನೀಡಿದ್ದಾರೆ. 'ಏಕದಿನ ಕ್ರಿಕೆಟ್‌ನಲ್ಲಿ ಕೊಹ್ಲಿ ಈಗೆಲ್ಲಿದ್ದಾರೋ ಅಲ್ಲಿಗೆ ತಲುಪೋಕೆ ಸ್ಮಿತ್ ಅವರು ಮುಂದಿನ 5 ವರ್ಷಗಳ ಕಾಲ ಈ ಎರಡು ಏಕದಿನ ಪಂದ್ಯಗಳಲ್ಲಿ ಆಡಿದಂತೆ ಆಡಬೇಕಾಗುತ್ತದೆ. ಒಡಿಐನಲ್ಲಿ ಕೊಹ್ಲಿ ಯಾವತ್ತಿಗೂ ಬೆಸ್ಟ್ ಬ್ಯಾಟ್ಸ್‌ಮನ್‌,' ಎಂದು ಗಣೇಶ್ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

Story first published: Tuesday, December 1, 2020, 20:31 [IST]
Other articles published on Dec 1, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+