ಭಾರತ vs ದ.ಆಫ್ರಿಕಾ: ತನ್ನ ವಿಕೆಟ್ ಕುರಿತು ಚಿಂತಿಸುತ್ತಾ ನಿಂತ ವಿರಾಟ್ ಕೊಹ್ಲಿ

ಈ ವರ್ಷದ ಆರಂಭದಲ್ಲಿ ಭಾರತ ಏಕದಿನ, ಟಿ ಟ್ವೆಂಟಿ ಮತ್ತು ಟೆಸ್ಟ್ ಈ ಮೂರೂ ಮಾದರಿಯ ತಂಡಗಳಿಗೂ ನಾಯಕನಾಗಿದ್ದ ವಿರಾಟ್ ಕೊಹ್ಲಿ ಸದ್ಯ ವರ್ಷಾಂತದಲ್ಲಿ ಕೇವಲ ಭಾರತ ಟೆಸ್ಟ್ ತಂಡದ ನಾಯಕನಾಗಿ ಮಾತ್ರ ಉಳಿದುಕೊಂಡಿದ್ದಾರೆ. ಮೊದಲಿಗೆ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ಸ್ವಇಚ್ಛೆಯಿಂದ ತ್ಯಜಿಸಿದ ವಿರಾಟ್ ಕೊಹ್ಲಿ ನಂತರ ಬಿಸಿಸಿಐನಿಂದಲೇ ಭಾರತ ಏಕದಿನ ತಂಡದ ನಾಯಕ ಸ್ಥಾನದಿಂದ ಕೆಳಗಿಳಿಸಲ್ಪಟ್ಟರು.
ಹೀಗೆ ಭಾರತ ಏಕದಿನ ತಂಡದ ನಾಯಕತ್ವವನ್ನೂ ಕೂಡ ಕಳೆದುಕೊಂಡ ವಿರಾಟ್ ಕೊಹ್ಲಿ ಸದ್ಯ ಭಾರತ ಟೆಸ್ಟ್ ತಂಡದ ನಾಯಕನಾಗಿ ಮಾತ್ರ ಉಳಿದುಕೊಂಡಿದ್ದು, ಇದೀಗ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡು ಆಡುತ್ತಿರುವ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ತಾನು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವುದರ ಜೊತೆಗೆ ತಂಡ ಜಯ ಸಾಧಿಸುವುದರ ಮೂಲಕ ತನ್ನನ್ನು ನಾಯಕತ್ವದಿಂದ ಕೆಳಗಿಳಿಸಿದ್ದಕ್ಕೆ ವಿರಾಟ್ ಕೊಹ್ಲಿ ಪ್ರತ್ಯುತ್ತರ ನೀಡಬೇಕಿದೆ.
ಹೌದು, ಈ ರೀತಿಯ ಅಭಿಪ್ರಾಯಗಳನ್ನು ಹಲವು ಮಾಜಿ ಕ್ರಿಕೆಟಿಗರು ಸೇರಿ ವಿರಾಟ್ ಕೊಹ್ಲಿ ಅಭಿಮಾನಿಗಳು ಕೂಡ ಕೊಹ್ಲಿ ಭಾರತ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿದಾಗ ವ್ಯಕ್ತಪಡಿಸಿದ್ದರು. ಆದರೆ ಅಭಿಮಾನಿಗಳ ಈ ನಿರೀಕ್ಷೆಯನ್ನು ಮುಟ್ಟುವುದರಲ್ಲಿ ವಿಫಲವಾಗಿರುವ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ನಲ್ಲಿಯೂ ಕಳಪೆ ಪ್ರದರ್ಶನ ನೀಡಿದ್ದಾರೆ. ಹೌದು, ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಚೊಚ್ಚಲ ಟೆಸ್ಟ್ ಪಂದ್ಯ ಡಿಸೆಂಬರ್ 26ರಿಂದ ಸೆಂಚೂರಿಯನ್ ಸೂಪರ್ ಸ್ಪೋರ್ಟ್ ಪಾರ್ಕ್ ಕ್ರೀಡಾಂಗಣದಲ್ಲಿ ಆರಂಭವಾಗಿದೆ. ಈ ಪಂದ್ಯದಲ್ಲಿ ಭಾರತ ತಂಡದ ಎರಡೂ ಇನ್ನಿಂಗ್ಸ್‌ನಲ್ಲಿಯೂ ವಿರಾಟ್ ಕೊಹ್ಲಿ ಉತ್ತಮ ಮಟ್ಟದ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ.
ಮೊದಲನೇ ಇನ್ನಿಂಗ್ಸ್‌ನಲ್ಲಿ 35 ರನ್ ಗಳಿಸಿ ಔಟ್ ಆಗಿದ್ದ ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 18 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಹೌದು, ಮಾರ್ಕೋ ಜೆನ್ಸೆನ್ ಎಸೆದ ಆಫ್ ಸೈಡ್ ಬಾಲನ್ನು ಹೊಡೆಯಲು ಹೋದ ವಿರಾಟ್ ಕೊಹ್ಲಿ ವಿಫಲರಾಗಿ ಕ್ವಿಂಟನ್ ಡಿ ಕಾಕ್ ಅವರಿಗೆ ಕ್ಯಾಚ್ ನೀಡಿ 18 ರನ್ ಗಳಿಸಿ ಔಟ್ ಆಗಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಮತ್ತೊಮ್ಮೆ ಆಫ್‌ಸೈಡ್ ಎಸೆತವನ್ನು ಹೊಡೆಯಲು ಹೋಗಿ ಎಡವಿದ್ದಾರೆ. ಹೀಗೆ ಪದೇ ಪದೇ ಆಫ್‌ಸೈಡ್ ಎಸೆತಗಳ ಎದುರು ಸೋಲುತ್ತಿರುವ ವಿರಾಟ್ ಕೊಹ್ಲಿ ಕುರಿತಾಗಿ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದು ಮತ್ತೊಮ್ಮೆ ಎಡವಿದ ವಿರಾಟ್ ಕೊಹ್ಲಿ ಕಾಲನ್ನು ಎಳೆದಿದ್ದಾರೆ.
ಹೀಗೆ ವಿರಾಟ್ ಕೊಹ್ಲಿ ಮತ್ತೊಮ್ಮೆ ಆಫ್ ಸೈಡ್ ಎಸೆತವನ್ನು ಸರಿಯಾದ ರೀತಿ ಎದುರಿಸಲಾಗದೇ ಔಟ್ ಆಗಿರುವ ಕುರಿತು ನೆಟ್ಟಿಗರು ಹಾಗೂ ಹಲವಾರು ಮಾಜಿ ಕ್ರಿಕೆಟಿಗರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುತ್ತಿದ್ದರೆ ಒಂದೆಡೆ ವಿಕೆಟ್ ಒಪ್ಪಿಸಿದ ನಂತರ ಪೆವಿಲಿಯನ್ ತಲುಪಿದ ವಿರಾಟ್ ಕೊಹ್ಲಿ ತಮ್ಮ ಔಟ್ ಕುರಿತು ತಾವೇ ಬೇಸರಕ್ಕೊಳಗಾಗಿದ್ದಾರೆ. ವಿಕೆಟ್ ಒಪ್ಪಿಸಿದ ನಂತರ ವಿರಾಟ್ ಕೊಹ್ಲಿ ಪೆವಿಲಿಯನ್ ತಲುಪಿ ತಮ್ಮ ವಿಕೆಟ್ ಕುರಿತು ಯೋಚಿಸುತ್ತಾ ನಿಂತಿರುವ ಚಿತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಈ ಚಿತ್ರದ ಕುರಿತು ಭಿನ್ನ ವಿಭಿನ್ನ ಬರಹಗಳನ್ನು ಟ್ವಿಟ್ಟರ್ ಮೂಲಕ ಬರೆದುಕೊಂಡು ಟ್ವೀಟ್ ಮಾಡುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications