Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ತನ್ನ ನೆಚ್ಚಿನ ಭಾರತದ ಕ್ರಿಕೆಟರ್ ಹೆಸರಿಸಿದ ಪಾಕ್ ದಂತಕತೆ ಮಿಯಾಂದಾದ್

Virat Kohli Is Pakistan Legend Javed Miandads Favourite Indian Cricketer
ಇಸ್ಲಮಾಬಾದ್, ಮಾರ್ಚ್ 21: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ವದಲ್ಲಿ ಬೆಸ್ಟ್ ಬ್ಯಾಟ್ಸ್‌ಮನ್ ಎಂದು ಗುರುತಿಕೊಂಡದವರು. ಪಾಕಿಸ್ತಾನ ಕ್ರಿಕೆಟ್ ದಂತಕತೆ, ಮಾಜಿ ನಾಯಕ ಜಾವೆದ್ ಮಿಯಾಂದಾದ್ ಕೂಡ ಕ್ಯಾಪ್ಟನ್ ಕೊಹ್ಲಿಯನ್ನು ತನ್ನ ನೆಚ್ಚಿನ ಆಟಗಾರ ಎಂದು ಹೇಳಿದ್ದಾರೆ.

'ನನ್ನ ಬಳಿ ನಿನ್ನ ನೆಚ್ಚಿನ ಆಟಗಾರ ಯಾರು ಎಂದು ಪ್ರಶ್ನಿಸಿದರೆ, ನಾನು ವಿರಾಟ್ ಕೊಹ್ಲಿಯನ್ನು ಆರಿಸುತ್ತೇನೆ,' ಎಂದು ಜಾವೆದ್ ಮಿಯಾಂದಾದ್ ಯೂಟ್ಯೂಬ್‌ ಚಾನೆಲ್ ನಲ್ಲಿ ಮಾತನಾಡುತ್ತ ಹೇಳಿದ್ದಾರೆ. ವಿರಾಟ್ ಕೊಹ್ಲಿ ಅಂಕಿ-ಅಂಶಗಳು ಅವರ ಸಾಧನೆ ಬಗ್ಗೆ ಮಾತನಾಡುವಂತೆ ಮಾಡುತ್ತದೆ ಎಂದು ಮಿಯಾಂದಾದ್ ವಿವರಿಸಿದ್ದಾರೆ.

'ನಾನೇನೂ ಕೊಹ್ಲಿ ಬಗ್ಗೆ ಹೆಚ್ಚಿಗೆ ಹೇಳಬೇಕಾಗಿಲ್ಲ. ಅವರ ಸಾಧನೆಯೇ ಬಹಳಷ್ಟು ಮಾತನಾಡುತ್ತದೆ. ಕೊಹ್ಲಿಯ ಅಂಕಿಅಂಶಗಳು ಗೋಚರಿಸುವುದರಿಂದ ಜನರು ಇದನ್ನು ಒಪ್ಪಿಕೊಳ್ಳಬೇಕು. ಆತನೊಬ್ಬ ಉತ್ತಮ ಹೊಡೆತಗಾರ. ಅವರ ಶಾಟ್‌ಗಳನ್ನು ಗಮನಿಸಿ, ಆತನೊಬ್ಬ ಕ್ಲಾಸ್ ಬ್ಯಾಟ್ಸ್‌ಮನ್,' ಎಂದು ಮಿಯಾಂದಾದ್ ನುಡಿದರು.

Virat Kohli Is Pakistan Legend Javed Miandads Favourite Indian Cricketer

31ರ ಹರೆಯದ ಕೊಹ್ಲಿ, ಇತ್ತೀಚಗೆ ಭಾರತ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿದ್ದಾಗ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ 11 ಇನ್ನಿಂಗ್ಸ್‌ಗಳಲ್ಲಿ ಕೇವಲ 218 ರನ್ ಗಳಿಸಿ ಟೀಕೆಗೆ ಗುರಿಯಾಗಿದ್ದರು. ಆದರೆ ಈಗಲೂ ಕೊಹ್ಲಿ ಏಕದಿನ ನಂ.1 ಸ್ಥಾನದಲ್ಲಿದ್ದಾರೆ. ಏಕದಿನ, ಟಿ20 ಮತ್ತು ಟೆಸ್ಟ್‌ನಲ್ಲಿ ಕ್ರಮವಾಗಿ 7240, 11867 ಮತ್ತು 2794 ರನ್ ಗಳಿಸಿದ್ದಾರೆ.

Story first published: Saturday, March 21, 2020, 17:46 [IST]
Other articles published on Mar 21, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+