For Quick Alerts
ALLOW NOTIFICATIONS  
For Daily Alerts
 

ಭಾರತ ಕ್ರಿಕೆಟ್ ತಂಡದ ಎನರ್ಜಿ ಪವರ್‌ಹೌಸ್ ಯಾರು?; ಬಹಿರಂಗಪಡಿಸಿದ ಸೂರ್ಯಕುಮಾರ್

ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು 2024ರ ಐಸಿಸಿ ಟಿ20 ವಿಶ್ವಕಪ್‌ನ ಫೈನಲ್ ಪಂದ್ಯ ಹೊರತುಪಡಿಸಿ, ಉಳಿದ ಪಂದ್ಯಗಳಲ್ಲಿ ಸಾಧಾರಣ ಪ್ರದರ್ಶನ ಹೊಂದಿದ್ದರು. ಅಂತಿಮವಾಗಿ ಭಾರತ ತಂಡ ಟಿ20 ವಿಶ್ವಕಪ್ ಗೆದ್ದ ನಂತರ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು.

35 ವರ್ಷದ ವಿರಾಟ್ ಕೊಹ್ಲಿ ಆಕ್ರಮಣಕಾರಿ ಉದ್ದೇಶವನ್ನು ಹೊಂದಿದ್ದರು. ಆದರೆ ಬ್ಯಾಟ್‌ನೊಂದಿಗೆ ಹೆಚ್ಚು ರನ್ ಗಳಿಸಲು ಹೆಣಗಾಡಿದರು ಮತ್ತು ಕಳಪೆಯಾಗಿ ವಿಕೆಟ್ ಚೆಲ್ಲಿದರು.

Virat Kohli is the Energy s Powerhouse of Indian Cricket Team Says Suryakumar Yadav

ವಿರಾಟ್ ಕೊಹ್ಲಿಯ ಫಾರ್ಮ್ ಅತ್ಯಂತ ಕಳಪೆಯಿಂದ ಕೂಡಿತ್ತು. ಆದರೆ ಫೈನಲ್ ಪಂದ್ಯದಲ್ಲಿ ಮಾಜಿ ನಾಯಕ ಸಂದರ್ಭಕ್ಕೆ ತಕ್ಕಂತೆ ಆಡಿದರು ಮತ್ತು ದಕ್ಷಿಣ ಆಫ್ರಿಕಾದ ವಿರುದ್ಧ ಭಾರತ ತಂಡ 7 ರನ್‌ಗಳಿಂದ ಗೆಲ್ಲಲು ಸಹಾಯ ಮಾಡಿದರು. 59 ಎಸೆತಗಳಲ್ಲಿ 76 ರನ್ ಗಳಿಸಿದ್ದಕ್ಕಾಗಿ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿಗೆ ಭಾಜನರಾದರು.

ಇದೇ ವೇಳೆ, ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್ ಫಾರ್ಮ್‌ನೊಂದಿಗೆ ಹೋರಾಡುತ್ತಿದ್ದರೂ, ಮೈದಾನದಲ್ಲಿ ಅವರ ತೀವ್ರತೆಯು ಎಂದಿಗೂ ಕುಸಿಯಲಿಲ್ಲ ಮತ್ತು ತಮ್ಮ ಎಲ್ಲವನ್ನೂ ನೀಡಿದರು.

ಭಾರತ ತಂಡದ ಸಹ ಆಟಗಾರ ಸೂರ್ಯಕುಮಾರ್ ಯಾದವ್ ಅವರು ಮೈದಾನದಲ್ಲಿ ವಿರಾಟ್ ಕೊಹ್ಲಿ ಅವರ ಪ್ರಯತ್ನಗಳನ್ನು ಶ್ಲಾಘಿಸಿದರು ಮತ್ತು ಎನರ್ಜಿಯ ಪವರ್‌ಹೌಸ್ ಎಂದು ಉಲ್ಲೇಖಿಸಿದ್ದಾರೆ.

ಮುಂಬೈ ಮೂಲದ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಮಾತು ಮುಂದುವರೆಸಿ, ಫಾರ್ಮ್‌ನಲ್ಲಿ ಇಲ್ಲದಿದ್ದರೂ ತಂಡದ ಮೀಟಿಂಗ್‌ಗಳು ಮತ್ತು ಅಭ್ಯಾಸ ಅವಧಿಗಳಲ್ಲಿ ಭಾಗವಹಿಸುತ್ತಿದ್ದರು ಎಂದು ತಿಳಿಸಿದರು. ಇದು ಅವರಲ್ಲಿರುವ ನಾಯಕತ್ವವನ್ನು ತೋರಿಸುತ್ತದೆ ಎಂದರು.

Virat Kohli is the Energy s Powerhouse of Indian Cricket Team Says Suryakumar Yadav

"ಬ್ಯಾಟಿಂಗ್ ಪ್ರದರ್ಶನ ಲೆಕ್ಕಿಸದೆ, ಮೈದಾನದಲ್ಲಿ ಎನಿರ್ಜಿಯ ಪವರ್‌ಹೌಸ್ ಆಗಿದ್ದಾರೆ. ನೀವು ನೋಡಿದ್ದರೆ, ಬ್ಯಾಟಿಂಗ್‌ನಲ್ಲಿ ಫೈನಲ್‌ವರೆಗೆ ಅವರು ಬಯಸಿದಂತೆ ಕೆಲಸಗಳು ನಡೆಯಲಿಲ್ಲ. ಆದರೆ ಮೈದಾನದಲ್ಲಿ ತನ್ನನ್ನು ತಾನು ಸಾಗಿಸಿದ ರೀತಿ, ತಂಡದ ಮೀಟಿಂಗ್‌ಗಳು, ಅಭ್ಯಾಸ ಅವಧಿ, ಎಲ್ಲದರಲ್ಲೂ ಭಾಗವಹಿಸುತ್ತಿದ್ದರು. ಅವರು ತಮ್ಮದೇ ಆದ ರೀತಿಯಲ್ಲಿ ನಾಯಕರಾಗಿದ್ದರು," ಎಂದು ಸೂರ್ಯಕುಮಾರ್ ಯಾದವ್ ತಿಳಿಸಿದರು.

ವಿರಾಟ್ ಕೊಹ್ಲಿ ಜತೆ ಆಡಲು ಹೇಗೆ ಫಿಟ್ನೆಸ್ ಸುಧಾರಿಸಿಕೊಳ್ಳಬೇಕು ಹೇಗೆ?

ಅನುಭವಿ ಕ್ರಿಕೆಟಿಗ ವಿರಾಟ್ ಕೊಹ್ಲಿ ವಾದಯೋಗ್ಯವಾಗಿ ಭಾರತ ತಂಡದ ಜೆರ್ಸಿಯನ್ನು ಧರಿಸಿದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ಒಂದು ರನ್ ಅನ್ನು ಎರಡಾಗಿ ಮತ್ತು ಎರಡನ್ನು ಮೂರನ್ನಾಗಿ ಪರಿವರ್ತಿಸಲು ಅವರು ಇಷ್ಟಪಡುತ್ತಾರೆ, ಇದು ಇತರ ಕ್ರಿಕೆಟಿಗರಿಗೆ ಸುಲಭವಲ್ಲ ಎಂದು ಸೂರ್ಯಕುಮಾರ್ ಯಾದವ್ ಬಹಿರಂಗಪಡಿಸಿದ್ದಾರೆ

ಕೊಹ್ಲಿ ಜೊತೆಯಲ್ಲಿ ಬ್ಯಾಟಿಂಗ್ ಮಾಡುವ ಕುರಿತು ಮಾತನಾಡಿದ ಸೂರ್ಯಕುಮಾರ್ ಯಾದವ್, ಆರಂಭಿಕ ದಿನಗಳಲ್ಲಿ ಇದು ತನಗೆ ಕಠಿಣವಾಗಿತ್ತು ಮತ್ತು ನಂತರ ನಾನು ನನ್ನ ತೀವ್ರತೆಯನ್ನು ಹೊಂದಿಸಲು ವಿರಾಟ್ ಕೊಹ್ಲಿಯೊಂದಿಗೆ ಅಭ್ಯಾಸ ಆರಂಭಿಸಿದೆ ಎಂದರು.

Virat Kohli is the Energy s Powerhouse of Indian Cricket Team Says Suryakumar Yadav

"2022ರಲ್ಲಿ ನಾನು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದಾಗ, ದ್ವಿಪಕ್ಷೀಯ ಸರಣಿ ಮತ್ತು ನಂತರ ವಿಶ್ವಕಪ್‌ನಲ್ಲಿ ನಾನು ಕೊಹ್ಲಿಯೊಂದಿಗೆ ಹೆಚ್ಚಿನ ಬ್ಯಾಟಿಂಗ್ ಮಾಡಿದ್ದೇನೆ. ನಾನು ವಿರಾಟ್ ಕೊಹ್ಲಿಯೊಂದಿಗೆ ಬ್ಯಾಟ್ ಮಾಡಬೇಕಾದರೆ, ನಾನು ಅವರ ಫಿಟ್ನೆಸ್‌ಗೆ ಹೊಂದಿಕೆಯಾಗಬೇಕು. ಏಕೆಂದರೆ ಅವರು ಚೆಂಡನ್ನು ತಳ್ಳುವ ಮೂಲಕ ವೇಗವಾಗಿ ರನ್ ಗಳಿಸುತ್ತಾರೆ. ನಂತರ ಅವರು ಬೌಂಡರಿ ಬಾರಿಸುತ್ತಾರೆ ಎಂದು ನಾನು ಅರಿತುಕೊಂಡೆ," ಎಂದು ಸೂರ್ಯಕುಮಾರ್ ಯಾದವ್ ಹೇಳಿದರು.

"ನಾನು ಕೊಹ್ಲಿ ಜೊತೆಗೆ ನನ್ನ ಅಭ್ಯಾಸ ಸಮಯವನ್ನು ಉಳಿಸಿಕೊಳ್ಳಲು ಶಕ್ತಿ ಮತ್ತು ಕಂಡೀಷನಿಂಗ್ ಕೋಚ್ ಸೋಹಮ್ ದೇಸಾಯಿ ಅವರಿಗೆ ಹೇಳಿದ್ದೆ".

"ಏಕೆಂದರೆ ಕೆಲವೊಮ್ಮೆ ನನಗೆ ಅಭ್ಯಾಸ ಮಾಡಲು ಮನಸ್ಸಿಲ್ಲದ ದಿನಗಳು ಅಥವಾ ನನ್ನ ದೇಹವು ದಣಿದಿದೆ ಅಥವಾ ಮಾನಸಿಕವಾಗಿ ನಾನು ಸಿದ್ಧವಾಗಿಲ್ಲದ ದಿನಗಳು ಇವೆ. ಆ ವೇಳೆ ವಿರಾಟ್ ಕೊಹ್ಲಿಯನ್ನು ನೋಡುವುದರಿಂದ ಆ 40 ನಿಮಿಷಗಳು ಜಿಮ್‌ನಲ್ಲಿ ಕಳೆದು ಹೋಗುತ್ತವೆ," ಎಂದು ಸೂರ್ಯಕುಮಾರ್ ಯಾದವ್ ಅಭಿಪ್ರಾಯಟಪಟ್ಟರು.

Story first published: Wednesday, July 3, 2024, 7:02 [IST]
Other articles published on Jul 3, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+