128 ವರ್ಷಗಳ ನಂತರ ಒಲಿಂಪಿಕ್ಸ್‌ಗೆ ಕ್ರಿಕೆಟ್ ಮರಳಲು ವಿರಾಟ್ ಕೊಹ್ಲಿ ಕಾರಣ; ಹೇಗೆ? ಇಲ್ಲಿದೆ ಮಾಹಿತಿ
2028ರ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಅನ್ನು ಸೇರಿಸುವ ಪ್ರಸ್ತಾವನೆಗೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಸೋಮವಾರ, ಅಕ್ಟೋಬರ್ 16ರಂದು ಅಧಿಕೃತವಾಗಿ ತನ್ನ ಅನುಮೋದನೆ ನೀಡಿದೆ.
128 ವರ್ಷಗಳ ನಂತರ ಒಲಿಂಪಿಕ್ಸ್‌ಗೆ ಕ್ರಿಕೆಟ್ ಮರಳಿ ತರುವ ಪ್ರಸ್ತಾಪವನ್ನು ಒಪ್ಪಿಕೊಳ್ಳುವ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ)ಯ ನಿರ್ಧಾರದಲ್ಲಿ ಪ್ರಮುಖ ಅಂಶವಾಗಿದೆ.

ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಜನಪ್ರಿಯತೆ ಮತ್ತು ಪ್ರಪಂಚದಾದ್ಯಂತದ ಅಭಿಮಾನಿಗಳ ಮೇಲೆ ಅವರ ಪ್ರಭಾವವು ಶತಮಾನದ ಬಳಿಕ ಒಲಿಂಪಿಕ್ಸ್‌ಗೆ ಕ್ರಿಕೆಟ್ ಮರಳಿದೆ ಎಂಬುದರಲ್ಲಿ ಎರಡು ಮಾತಿಲ್ಲ.
2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಪುರುಷರು ಮತ್ತು ಮಹಿಳೆಯರ ಕ್ರಿಕೆಟ್ ಪಂದ್ಯಾವಳಿಯನ್ನು ಟಿ20 ಮಾದರಿಯಲ್ಲಿ ಕ್ರಿಕೆಟ್ ಆಡಲಾಗುತ್ತದೆ.
ಕ್ರಿಕೆಟ್ ಜೊತೆಗೆ, ನಾಲ್ಕು ಇತರ ಹೊಸ ಕ್ರೀಡೆಗಳಾದ ಬೇಸ್‌ಬಾಲ್, ಫ್ಲ್ಯಾಗ್ ಫುಟ್‌ಬಾಲ್, ಲ್ಯಾಕ್ರೋಸ್ ಮತ್ತು ಸ್ಕ್ವಾಷ್ ಕ್ರೀಡೆಗಳು ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಶಿಫಾರಸು ಪಡೆದಿವೆ. ಇದನ್ನು ಐಒಸಿಯ ಕಾರ್ಯಕಾರಿ ಮಂಡಳಿಯು ಅನುಮೋದಿಸಿದೆ.

ಲಾಸ್ ಏಂಜಲೀಸ್ LOCOG ನ ನಿರ್ದೇಶಕ ನಿಕೊಲೊ ಕ್ಯಾಂಪ್ರಿಯಾನಿ ಮಾತನಾಡಿ, "ಟಿ20 ಸ್ವರೂಪವು ಆಟವನ್ನು ವೇಗವಾಗಿ ಮಾಡುತ್ತದೆ. ಎಲ್ಲ ವರ್ಗದ ಪ್ರೇಕ್ಷಕರನ್ನು ಆಕರ್ಷಿಸುತ್ತದೆ," ಎಂದು ಹೇಳಿದರು.
ಭಾರತದ ಸೂಪರ್‌ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿಯ ಪ್ರಭಾವ ಮತ್ತು ವ್ಯಾಪ್ತಿಯನ್ನು ಸಹ ನಿಕೊಲೊ ಕ್ಯಾಂಪ್ರಿಯಾನಿ ಒಪ್ಪಿಕೊಂಡಿದ್ದಾರೆ.
"ವಿಶ್ವದಾದ್ಯಂತ ಅಂದಾಜು 2.5 ಶತಕೋಟಿ ಅಭಿಮಾನಿಗಳನ್ನು ಹೊಂದಿರುವ ವಿಶ್ವದ ಎರಡನೇ ಅತ್ಯಂತ ಜನಪ್ರಿಯ ಕ್ರೀಡೆ ಕ್ರಿಕೆಟ್ ಅನ್ನು ಸ್ವಾಗತಿಸಲು ನಾವು ರೋಮಾಂಚನಗೊಂಡಿದ್ದೇವೆ. ಯುವಕರಿಗೆ ಸೂಕ್ತವಾದ ಆಟಗಳನ್ನು ಇರಿಸಿಕೊಳ್ಳಲು ಬಲವಾದ ಡಿಜಿಟಲ್ ಉಪಸ್ಥಿತಿಯ ನಿರ್ಣಾಯಕ ಪ್ರಾಮುಖ್ಯತೆಯನ್ನು ನಾವೆಲ್ಲರೂ ಗುರುತಿಸುತ್ತೇವೆ. ಇದಕ್ಕಾಗಿ ಕ್ರಿಕೆಟ್ ಒಂದು ಅನನ್ಯ ವೇದಿಕೆಯನ್ನು ನೀಡುತ್ತಿದೆ," ಎಂದು ನಿಕೊಲೊ ಕ್ಯಾಂಪ್ರಿಯಾನಿ ಹೇಳಿದರು.
"ಇಲ್ಲಿ ನನ್ನ ಸ್ನೇಹಿತ ವಿರಾಟ್ ಕೊಹ್ಲಿ ಬಗ್ಗೆ ಯೋಚಿಸಿ. ಅವರು 314 ಮಿಲಿಯನ್ ಅನುಯಾಯಿಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ವಿಶ್ವದ ಮೂರನೇ ಅತಿ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿರುವ ಕ್ರೀಡಾಪಟು".
"ಇದು ಲೆಬ್ರಾನ್ ಜೇಮ್ಸ್ (ಎನ್‌ಬಿಎ ಬ್ಯಾಸ್ಕೆಟ್‌ಬಾಲ್ ತಾರೆ), ಟಾಮ್ ಬ್ರಾಡಿ (ಅಮೆರಿಕನ್ ಫುಟ್‌ಬಾಲ್ ಐಕಾನ್) ಮತ್ತು ಟೈಗರ್ ವುಡ್ಸ್ (ಅಮೇರಿಕನ್ ಗಾಲ್ಫ್ ಲೆಜೆಂಡ್) ಸಂಯೋಜನೆಗಿಂತ ಹೆಚ್ಚು. ಲಾಸ್ ಏಂಜಲೀಸ್ 2028ರ ಅಂತಿಮ ಗೆಲುವಾಗಿದೆ," ಎಂದು ಸಂತಸ ವ್ಯಕ್ತಪಡಿಸಿದರು.

ವಿರಾಟ್ ಕೊಹ್ಲಿ ವಿಶ್ವದಾದ್ಯಂತದ ಅಭಿಮಾನಿಗಳಿಂದ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಪ್ರಸ್ತುತ ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಂತ ದೊಡ್ಡ ಹೆಸರಾಗಿದೆ. ಅವರು ಜಾಗತಿಕ ಐಕಾನ್ ಮತ್ತು ಯುವಕರಿಗೆ ಸ್ಫೂರ್ತಿಯಾಗಿದ್ದಾರೆ.
ಒಲಿಂಪಿಕ್‌ನಲ್ಲಿ ವಿರಾಟ್ ಕೊಹ್ಲಿ ಹೆಸರನ್ನು ಉಲ್ಲೇಖಿಸಿರುವುದು ಆಶ್ಚರ್ಯವೇನಿಲ್ಲ. ಏಕೆಂದರೆ ಕೊಹ್ಲಿ ಸಾರ್ವಕಾಲಿಕ ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ.
ಈವರೆಗೆ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ 25,000ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ರನ್‌ಗಳು, 77 ಶತಕಗಳು ಮತ್ತು ಹಲವು ಸ್ಮರಣೀಯ ಕ್ಷಣಗಳೊಂದಿಗೆ ವಿರಾಟ್ ಕೊಹ್ಲಿ ಅನೇಕರ ದೃಷ್ಟಿಯಲ್ಲಿ, ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರ ಪರಂಪರೆಯ ಉತ್ತರಾಧಿಕಾರಿಯಾಗಿದ್ದಾರೆ.
2028ರ ಲಾಸ್ ಏಂಜಲೀಸ್ ಒಲಿಂಪಿಕ್‌ನಲ್ಲಿ ಕ್ರಿಕೆಟ್ ಬಗ್ಗೆ ಹೇಳುವುದಾದರೆ, ಪುರುಷರ ಮತ್ತು ಮಹಿಳೆಯರ ಎರಡೂ ಸ್ಪರ್ಧೆಗಳನ್ನು 6 ತಂಡಗಳ ನಡುವೆ ಆಡಲಾಗುತ್ತದೆ. ಲಾಸ್ ಏಂಜಲೀಸ್ 2028ಕ್ಕೆ ತನ್ನ ಪ್ರಸ್ತಾವನೆಯಲ್ಲಿ, ಐಸಿಸಿ ಆರು ತಂಡಗಳನ್ನು ಟಿ20 ಶ್ರೇಯಾಂಕಗಳ ಆಧಾರದ ಮೇಲೆ ಕಟ್-ಆಫ್ ದಿನಾಂಕದಂದು ಶಾರ್ಟ್‌ಲಿಸ್ಟ್ ಮಾಡಲಾಗುವುದು ಎಂದು ಐಒಸಿ ತಿಳಿಸಿದೆ.
ಈ ಮೊದಲು ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಆಡಲಾಗಿದೆಯೇ?
ಈ ಹಿಂದೆ ಒಲಿಂಪಿಕ್ಸ್‌ನಲ್ಲಿ ಒಮ್ಮೆ ಮಾತ್ರ ಕ್ರಿಕೆಟ್ ಆಡಲಾಗಿದೆ, ಅದು 1900ರ ಪ್ಯಾರಿಸ್ ಗೇಮ್ಸ್‌ನಲ್ಲಿ. ಅಅಲ್ಲಿ ಕೇವಲ ಒಂದು ಪಂದ್ಯ ಮಾತ್ರ ಆಡಲಾಯಿತು. ಗ್ರೇಟ್ ಬ್ರಿಟನ್ ಮತ್ತು ಫ್ರಾನ್ಸ್ ನಡುವೆ ಪಂದ್ಯವನ್ನು ಗೆದ್ದ ಗ್ರೇಟ್ ಬ್ರಿಟನ್ ಚಿನ್ನದ ಪದಕ ಪಡೆದರೆ, ಫ್ರಾನ್ಸ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿತ್ತು.
ಇನ್ನು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಹೊಂದಿರುವ ಐಒಸಿ ಸದಸ್ಯೆ ನೀತಾ ಅಂಬಾನಿ ಮಾತನಾಡಿ, "ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ನ ಸೇರ್ಪಡೆಯು ಒಲಿಂಪಿಕ್ ಆಂದೋಲನಕ್ಕೆ ವಿಶ್ವದಾದ್ಯಂತ ಅತಿ ದೊಡ್ಡ ಪಾಲ್ಗೊಳ್ಳುವಿಕೆಯನ್ನು ಕಾಣಬಹುದು ಮತ್ತು ಅದೇ ಸಮಯದಲ್ಲಿ ಕ್ರಿಕೆಟ್‌ನ ಸೇರ್ಪಡೆ ಒಲಿಂಪಿಕ್‌ನ ಜನಪ್ರಿಯತೆಗೆ ಉತ್ತೇಜನವನ್ನು ನೀಡುತ್ತದೆ," ಎಂದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications