Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Virat Kohli: ವಿಶೇಷ ದಾಖಲೆ ಬರೆದ ವಿರಾಟ್ ಕೊಹ್ಲಿ: ಈ ದಾಖಲೆ ವಿಶ್ವದಲೇ ನಾಲ್ಕನೇ ಆಟಗಾರರು ಮಾಡಿದ್ದು

ಟೀಮ್ ಇಂಡಿಯಾ ಸದ್ಯ ಚಾಂಪಿಯನ್ಸ್ ಟ್ರೋಫೀಯನ್ನು ಆಡುತ್ತಿದೆ. ಈ ಟೂರ್ನಿಯಲ್ಲಿ ಭಾರತದ ಸ್ಟಾರ್‌ ಆಟಗಾರರು ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಆಡಿದ ಎರಡೂ ಪಂದ್ಯಗಳನ್ನು ಗೆದ್ದಿರುವ ಟೀಮ್ ಇಂಡಿಯಾ ಸೆಮಿಫೈನಲ್ ಹಂತವನ್ನು ಪ್ರವೇಶಿಸಿದೆ. ಮೊದಲ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಹಾಗೂ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಜಯ ಸಾಧಿಸಿರುವ ಭಾರತ ಅಬ್ಬರಿಸಿದೆ. ಈ ವೇಳೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಭರ್ಜರಿ ಲಯಕ್ಕೆ ಮರಳಿದ್ದಾರೆ.

ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಸೂಪರ್‌ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅಲ್ಲದೆ 466 ದಿನಗಳ ಬಳಿಕ ಏಕದಿನ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದರು. ಈ ಶತಕ ಬರೀ ವಿರಾಟ್ ಕೊಹ್ಲಿ ಅವರಿಗೆ ಅಲ್ಲ ಇಡೀ ತಂಡಕ್ಕೆ ಹೊಸ ಬೂಸ್ಟ್‌ ನೀಡಿರುತ್ತದೆ. ವಿರಾಟ್‌ ಕೊಹ್ಲಿ ಈ ಶತಕದ ಮೂಲಕ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದರಲ್ಲಿ ಈ ವಿಶೇಷ ದಾಖಲೆ ಸಹ ಒಂದಾಗಿದೆ.

Virat Kohli Joins Elite Club Becomes Fourth Player to Score ODI Centuries in 10 Countries

ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶತಕ ಬಾರಿಸುತ್ತಿದ್ದಂತೆ ವಿರಾಟ್‌ ವಿಶೇಷ ದಾಖಲೆ ಬರೆದರು. ಭಾನುವಾರ ಪಾಕ್‌ ವಿರುದ್ಧ ಪಂದ್ಯದಲ್ಲಿ 111 ಎಸೆತಗಳಲ್ಲಿ 7 ಬೌಂಡರಿ ನೆರವಿನಿಂದ 100 ರನ್‌ ಬಾರಿಸಿದ ವಿರಾಟ್‌ ಎಲೈಟ್‌ ಕ್ಲಬ್‌ಗೆ ಎಂಟ್ರಿ ನೀಡಿದ್ದಾರೆ. ವಿರಾಟ್‌ ಕೊಹ್ಲಿ 10 ದೇಶಗಳಲ್ಲಿ ಶತಕ ಬಾರಿಸಿದ ಹಿರಿಮೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದರಲ್ಲಿ ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್‌, ನ್ಯೂಜಿಲೆಂಡ್‌, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಯುಎಇ, ವೆಸ್ಟ್‌ ಇಂಡೀಸ್‌, ಜಿಂಬಾಬ್ವೆ ಹಾಗೂ ಭಾರತ ಸೇರಿವೆ.

ವಿಶೇಷ ದಾಖಲೆ ಬರೆದ ವಿರಾಟ್

ದುಬೈನಲ್ಲಿ ಶತಕ ಬಾರಿಸುವ ಮೂಲಕ ವಿರಾಟ್‌ ಕೊಹ್ಲಿ ಸನತ್ ಜಯಸೂರ್ಯ, ಸಚಿನ್‌ ತೆಂಡೂಲ್ಕರ್‌, ಕ್ರಿಸ್‌ ಗೇಲ್‌ ಅವರ ವಿಶಿಷ್ಠ ದಾಖಲೆಯ ಪಟ್ಟಿಗೆ ಎಂಟ್ರಿ ಪಡೆದಿದ್ದಾರೆ. ವೆಸ್ಟ್‌ ಇಂಡೀಸ್‌ನ ದೈತ್ಯ ಆಟಗಾರ ಕ್ರಿಸ್‌ ಗೇಲ್‌ 10 ದೇಶಗಳಲ್ಲಿ ಶತಕ ಬಾರಿಸಿದ ವಿಶೇಷ ದಾಖಲೆಯನ್ನು ಹೊಂದಿದ್ದಾರೆ. ವಿರಾಟ್‌ ಸಹ ಇಷ್ಟೇ ದೇಶಗಳಲ್ಲಿ ಶತಕವನ್ನು ಸಿಡಿಸಿದ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ.

Virat Kohli Joins Elite Club Becomes Fourth Player to Score ODI Centuries in 10 Countries

ಟೀಮ್ ಇಂಡಿಯಾದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್‌ ಹಾಗೂ ಸನತ್ ಜಯಸೂರ್ಯ ತಾವಾಡಿದ 15 ರಿಂದ 16 ದೇಶಗಳಲ್ಲಿ, 12 ದೇಶಗಳಲ್ಲಿ ಶತಕದ ಸಾಧನೆಯನ್ನು ಮಾಡಿದ್ದಾರೆ.

ಸಚಿನ್ ಹಾಗೂ ಕ್ರಿಸ್‌ ಗೇಲ್‌ ಅವರು ಏಕದಿನ ಕ್ರಿಕೆಟ್‌ನಲ್ಲಿ ಹಲವು ದೇಶಗಳಲ್ಲಿ ಮೂರಂಕಿ ಮುಟ್ಟಿಲ್ಲ. ಹಾಗೇ ಸನತ್‌ ಜಯಸೂರ್ಯ ಸಹ ಕೆಲವು ದೇಶಗಳಲ್ಲಿ ಶತಕ ಬಾರಿಸಿಲ್ಲ. ಅದರಲ್ಲಿ ಜಿಂಬಾಬ್ವೆ, ಕೀನ್ಯಾ, ಮೊರಾಕೋ ದೇಶಗಳು ಸೇರಿವೆ. ಸಚಿನ್‌ ಅವರು ಐರ್ಲೆಂಡ್‌, ಕೀನ್ಯಾ, ಕೇನಡಾ, ವೆಸ್ಟ್‌ ಇಂಡೀಸ್‌ನಲ್ಲಿ ಶತಕವನ್ನು ಸಿಡಿಸಿಲ್ಲ. ಕ್ರಿಸ್‌ ಗೇಲ್‌ ಅವರು ಬಾಂಗ್ಲಾದೇಶ, ಐರ್ಲೆಂಡ್‌, ಮಲೇಷ್ಯಾ, ಪಾಕಿಸ್ತಾನ ಹಾಗೂ ಶ್ರೀಲಂಕಾದಲ್ಲಿ ಶತಕ ಬಾರಿಸಿ ಸಂಭ್ರಮಿಸಿಲ್ಲ.

Story first published: Tuesday, February 25, 2025, 10:25 [IST]
Other articles published on Feb 25, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+