India Vs Pakistan: ಪಾಕ್ ಬೌಲರ್‌ಗಳನ್ನು ಬೆಂಡೆತ್ತಿದ್ದ ಕೊಹ್ಲಿ- ರಾಹುಲ್, ಜೊತೆಯಾಗಿ ಧ್ವಂಸ ಮಾಡಿದ ದಾಖಲೆಗಳಿವು!
ಭಾರತವು ಪಾಕಿಸ್ತಾನ ವಿರುದ್ಧ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದಲ್ಲಿ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಪಾಕಿಸ್ತಾನವನ್ನು 228 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿದೆ. ಈ ಭರ್ಜರಿ ಜಯದಲ್ಲಿ ಟೀಮ್ ಇಂಡಿಯಾದ ಸಂಘಟಿತ ಆಟ ಎದ್ದು ಕಾಣುತ್ತಿತ್ತು.
ಈ ಪಂದ್ಯದಲ್ಲಿ ಬೌಲರ್‌ಗಳು ಸಹ ಮನಮೋಹಕ ಬೌಲಿಂಗ್ ಪ್ರದರ್ಶನ ನೀಡಿದರು. ಆದರೆ, ಬ್ಯಾಟರ್ ಗಳ ಪ್ರದರ್ಶನವನ್ನು ಮರೆಯುವಂತಿಲ್ಲ. ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಭಾರತ ಪರ ಭರ್ಜರಿ ಶತಕ ಸಿಡಿಸಿದ್ದರು.

ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ನಡುವೆ ಮೂರನೇ ವಿಕೆಟ್‌ಗೆ 233 ರನ್‌ಗಳ ಅಜೇಯ ಜೊತೆಯಾಟ ತಂಡ ಸವಾಲಿನ ಮೊತ್ತ ಪೇರಿಸುವಂತೆ ಮಾಡಿತು. ಇದಲ್ಲದೇ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಹಲವು ದೊಡ್ಡ ದಾಖಲೆಗಳನ್ನು ಮುರಿದಿದ್ದಾರೆ.
ಮೂರನೇ ವಿಕೆಟ್‌ಗೆ 233 ರನ್‌ಗಳ ಜೊತೆಯಾಟ
ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ನಡುವೆ ಮೂರನೇ ವಿಕೆಟ್‌ಗೆ 233 ರನ್‌ಗಳ ಜೊತೆಯಾಟ ನಡೆಯಿತು. ಏಷ್ಯಾಕಪ್ ಇತಿಹಾಸದಲ್ಲಿ ಇದು ಅತ್ಯಂತ ದೊಡ್ಡ ಜೊತೆಯಾಟವಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಪಾಕಿಸ್ತಾನದ ಮೊಹಮ್ಮದ್ ಹಫೀಜ್ ಮತ್ತು ನಾಸಿರ್ ಜಮ್ಶೆದ್ ಹೆಸರಿನಲ್ಲಿತ್ತು. 2012ರ ಏಷ್ಯಾಕಪ್‌ನಲ್ಲಿ ಇಬ್ಬರು ಆಟಗಾರರ ನಡುವೆ 224 ರನ್‌ಗಳ ಜೊತೆಯಾಟ ಮೂಡಿಬಂದಿತ್ತು. ಈ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು.
ಇದಲ್ಲದೇ ಭಾರತ ಮತ್ತು ಪಾಕಿಸ್ತಾನ ನಡುವಿನ ಯಾವುದೇ ಸರಣಿಯಲ್ಲೂ ನೀಡದ ಜೊತೆಯಾಟದ ಕಾಣಿಕೆಯನ್ನು ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಜೋಡಿ ಮುರಿದಿದೆ. ಈ ಹಿಂದೆ ಈ ದಾಖಲೆ ಸಚಿನ್ ತೆಂಡೂಲ್ಕರ್ ಮತ್ತು ನವಜೋತ್ ಸಿಂಗ್ ಸಿಧು ಹೆಸರಿನಲ್ಲಿತ್ತು.
ಸಚಿನ್ ತೆಂಡೂಲ್ಕರ್ ಮತ್ತು ನವಜೋತ್ ಸಿಂಗ್ ಸಿಧು
ಸಚಿನ್ ತೆಂಡೂಲ್ಕರ್ ಮತ್ತು ನವಜೋತ್ ಸಿಂಗ್ ಸಿಧು ನಡುವೆ ಎರಡನೇ ವಿಕೆಟ್‌ಗೆ 231 ರನ್‌ಗಳ ಜೊತೆಯಾಟ ನಡೆದಿತ್ತು. 2018 ರಲ್ಲಿ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಪಾಕಿಸ್ತಾನದ ವಿರುದ್ಧ 210 ರನ್‌ಗಳ ಜೊತೆಯಾಟದ ಸಾಧನೆ ಮಾಡಿದ್ದರು.
ಏಕದಿನ ಕ್ರಿಕೆಟ್‌ನ ಇತಿಹಾಸದಲ್ಲಿ ಭಾರತದ 3 ಮತ್ತು 4 ನೇ ಕ್ರಮಾಂಕದ ಬ್ಯಾಟರ್ ಗಳು ಪಂದ್ಯವೊಂದರಲ್ಲಿ ಶತಕದ ಗಡಿ ದಾಟಿದ್ದು ಇದು ಮೂರನೇ ಬಾರಿ. ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ಹೊರತುಪಡಿಸಿ, ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದರು.
ಈ ಮೂಲಕ ಮಹತ್ವದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ 3 ದೊಡ್ಡ ದಾಖಲೆಗಳನ್ನು ಮುರಿದಿದ್ದಾರೆ. ಭಾರತ ತಂಡವು ಶ್ರೀಲಂಕಾದ ಸವಾಲನ್ನು ಎದುರಿಸಲಿದೆ. ಭಾರತ ಮತ್ತು ಶ್ರೀಲಂಕಾ ನಡುವಿನ ಪಂದ್ಯ ಮಂಗಳವಾರ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಈ ಪಂದ್ಯ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications